Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಮೆರಿಕಾಗೆ ಚಿಕಿತ್ಸೆಗೆ ತೆರಳುವ ಮುನ್ನ ತಿರುಪತಿಯಲ್ಲಿ ಮುಡಿ ಕೊಟ್ಟ ಶಿವಣ್ಣ..!

Facebook
Twitter
Telegram
WhatsApp

ಶಿವಣ್ಣನಿಗೆ ಅನಾರೋಗ್ಯ ಕಾಡುತ್ತಿರುವುದು, ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದನ್ನು ಶಿವಣ್ಣನೇ ಈಗಾಗಲೇ ತಿಳಿಸಿದ್ದಾರೆ. ಅದಕ್ಕೆ ಚಿಕಿತ್ಸೆಯೊಂದು ಆಗಬೇಕಿದೆ. ಅಮೆರಿಕಾಗೆ ಹೋಗಬೇಕು ಎಂಬುದನ್ನು ಹೇಳಿದ್ದಾರೆ. ಇದೀಗ ಅಮೆರಿಕಾಗೆ ತೆರಳುವ ಮುನ್ನ ದೇವರ ದರ್ಶನ ಮಾಡಿದ್ದಾರೆ. ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ.

ಶಿವಣ್ಣರಿಗೆ ಹೇಳಿ ಕೇಳಿ ದೇವರ ಮೇಲೆ ಅಪಾರ ಭಕ್ತಿ ಇದೆ. ಅದರಲ್ಲೂ ಗುರು ರಾಘವೇಂದ್ರ ಸ್ವಾಮಿಗಳ ಮೇಲೆ ಜಾಸ್ತಿ ಭಕ್ತಿ. ಶಿವಣ್ಣ ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ತಿರುಪತಿ ತಮ್ಮಪ್ಪನ ದರ್ಶನವನ್ನು ಮಾಡಿದ್ದಾರೆ. ಶಿವಣ್ಣ, ಗೀತಕ್ಕ ಸೇರಿದಂತೆ ಆಪ್ತ ಗೆಳೆಯರು ದೇವರಿಗೆ ಮುಡಿ ಕೊಟ್ಟಿದ್ದಾರೆ. ಶಿವಣ್ಣ ಇದೇ ತಿಂಗಳು ಚಿಕಿತ್ಸೆಗೆಂದು ಅಮೆರಿಕಾಗೆ ತೆರಳುತ್ತಿದ್ದಾರೆ. ಹೀಗಾಗಿ ದೇವಸ್ಥಾನಗಳಿಗೂ ಭೇಟಿ ನೀಡಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಶಿವಣ್ಣ ತಮ್ಮದೇ ಹೋಂ ಬ್ಯಾನರ್ ನಲ್ಲಿ ಅಭಿನಯಿಸಿದ್ದ ಭೈರತಿ ರಣಗಲ್ ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲೂ ಚಿಂದಿ ಉಡಾಯಿತ್ತು. ಶಿವಣ್ಣನ ಸಿ‌ನಿಮಾ ಕ್ರೇಜ್ ಕೂಡ ಹುಟ್ಟು ಹಾಕಿತ್ತು. ರಣಗಲ್ ರೀತಿಯೇ ಡಾಲಿ ಕೂಡ ಬಟ್ಟೆ ಹಾಕಿ ಬಂದಿದ್ದರು. ಹೆಣ್ಣು ಮಕ್ಕಳು ಕೂಡ ರಣಗಲ್ ರೀತಿಯೇ ಬಟ್ಟೆ ಹಾಕಿ ಬಂದಿದ್ದರು. ಅಷ್ಟು ಕ್ರೇಜ್ ಹುಟ್ಟು ಹಾಕಿದ್ದ ಸಿನಿಮಾ ಭೈರತಿ ರಣಗಲ್.

ಶಿವಣ್ಣ ಇಂಡಸ್ಟ್ರಿಯ ಬ್ಯುಸಿಯೆಸ್ಟ್ ನಟ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅವರ ಬತ್ತಳಿಕೆಯಲ್ಲಿ ಸಾಕಷ್ಟು ಸಿನಿಮಾಗಳಿದ್ದು, ಸದ್ಯಕ್ಕೆ ಅನಾರೋಗ್ಯದ ಕಾರಣ ಹಿಂದೇಟು ಹಾಕಿದ್ದಾರೆ. ಹೊಸ ಸಿನಿಮಾಗಳಿಗೆ ಸ್ವಲ್ಪ ತಡೆ ನೀಡಿದ್ದು, ವೇತರಿಕೆಯ ಬಳಿಕ ಮತ್ತೆ ಆಕ್ಟೀವ್ ಆಗಲಿದ್ದಾರೆ. ಹೀಗಾಗಿಯೇ ಅವರ ಅಭಿಮಾನಿ ಬಳಗ ಕೂಡ ಬೇಗ ಹುಷಾರಾಗಿ ಶಿವಣ್ಣ ಅಂತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರತಿದಿನ ಮೂರು ಹೊತ್ತು ಅನ್ನವನ್ನು ತಿನ್ನುವವರಿಗೆ ಈ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು…!

ಸುದ್ದಿಒನ್ : ಅಕ್ಕಿ ಭಾರತೀಯ ಆಹಾರದ ಪ್ರಮುಖ ಭಾಗವಾಗಿದೆ. ನಮ್ಮ ದೇಶದಲ್ಲಿ ಶೇಕಡಾ 90 ರಷ್ಟು ಜನರು ಹೆಚ್ಚಾಗಿ ಅನ್ನವನ್ನು ಆಹಾರವನ್ನಾಗಿ ಸೇವಿಸುತ್ತಾರೆ. ನಮ್ಮ ಊಟದಲ್ಲಿ ಮುಖ್ಯವಾದ ಆಹಾರವಾದ ಅನ್ನವನ್ನು ತಿನ್ನದೇ ಇರಲು ಸಾಧ್ಯವಾಗದ

ಈ ರಾಶಿಯವರ ಮದುವೆಗೆ ಶುಭ ಘಳಿಗೆ ಕೂಡಿ ಬರುತ್ತಿಲ್ಲ

ಈ ರಾಶಿಯವರ ಮದುವೆಗೆ ಶುಭ ಘಳಿಗೆ ಕೂಡಿ ಬರುತ್ತಿಲ್ಲ, ಈ ರಾಶಿಯವರಿಗೆ ಯಶಸ್ಸುಗಳಿಗಿಂತ ಬರೀ ಸೋಲುಗಳೇ ಜಾಸ್ತಿ, ಶುಕ್ರವಾರ- ರಾಶಿ ಭವಿಷ್ಯ ಡಿಸೆಂಬರ್-13,2024 ಹನುಮಾನ ಜಯಂತಿ ಸೂರ್ಯೋದಯ: 06:41, ಸೂರ್ಯಾಸ್ತ : 05:39 ಶಾಲಿವಾಹನ

ತುಮಕೂರು ಜಿಲ್ಲೆಯ ಕೇಸಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ಹೈಕೋರ್ಟ್ : ಕನ್ನಡಿಗರಿಂದ ಬಹುಪರಾಕ್

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಕನ್ನಡ ಭಾಷೆಯ ವಿಚಾರದಲ್ಲಿ ಇತಿಹಾಸ ಸೃಷ್ಟಿಸಿದೆ. ಇದೆ ಮೊದಲ ಬಾರಿಗೆ ಕನ್ನಡದಲ್ಲಿಯೇ ತೀರ್ಪು ನೀಡಿದೆ. ಭಾರತ ಭಾಷಾ ದಿನವಾದ ಇಂದು ಈ ಇತಿಹಾಸವನ್ನು ಸೃಷ್ಟಿ ಮಾಡಿದೆ. ನ್ಯಾಯಮೂರ್ತಿ ಎಂ.ದೀಕ್ಷಿತ್ ಮತ್ತು

error: Content is protected !!