ಹಾಸನ : ಮೂರನೇ ಅಲೆ ಆತಂಕ ಇಲ್ಲ ಎನ್ನುವಾಗಲೇ ಮೂರನೇ ಅಲೆ ಶುರುವಾಗಿ ಎಲ್ಲೆಡೆ ಆತಂಕ ಮನೆ ಮಾಡಿದೆ. ವಿದೇಶಗಳಲ್ಲಿ ಹೆಚ್ಚಾಗಿರುವ ಕೊರೊನಾ ಈಗ ದೇಶದಲ್ಲೂ ಅಲ್ಲೊಂದು ಜಿಲ್ಲೆ ಇಲ್ಲೊಂದು ಜಿಲ್ಲೆ ಅಂತ ಸೋಂಕಿತರು ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಧಾರವಾಡ, ಆನೇಕಲ್ ಆಯ್ತು, ಇದೀಗ ಹಾಸನದಲ್ಲೂ ವಿದ್ಯಾರ್ಥಿಗಳಲ್ಲಿ ಕೊರೊನಾ ಸಂಖ್ಯೆ ಜಾಸ್ತಿಯಾಗಿದೆ.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ವಸತಿ ಶಾಲೆಯಲ್ಲಿ 13 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಶಾಲೆಯ 200 ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಆದರಲ್ಲಿ 13 ಮಕ್ಕಳಿಗೆ ಕೊರೊನಾ ಇರುವುದು ಖಚಿತವಾಗಿದೆ.
ಈ ವಸತಿ ಶಾಲೆಯಲ್ಲಿ ಒಂದು ತಿಂಗಳ ಹಿಂದೆಯೆ ಇಬ್ಬರು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆದ್ರೆ ಆ ಸಮಯದಲ್ಲಿ ಟೆಸ್ಟ್ ಮಾಡಿದಾಗಲೂ ಯಾವ ಮಕ್ಕಳಲ್ಲಿಯೂ ಅಷ್ಟಾಗಿ ಸೋಂಕು ಕಾಣಿಸಿಕೊಂಡಿರಲಿಲ್ಲ. ಈಗ ಸೋಂಕಿನ ಲಕ್ಷಣಗಳು ಹೆಚ್ಚಾದ ಹಿನ್ನೆಲೆ ಟೆಸ್ಟ್ ಮಾಡಲಾಗಿದೆ. ಆಗ 13 ಮಕ್ಕಳಲ್ಲಿ ಸೋಂಕು ಇರುವುದು ದೃಢವಾಗಿದೆ.
ಇನ್ನು ವಸತಿ ಶಾಲೆಯಲ್ಲಿ ಕೊರೊನಾ ಸ್ಪೋಟಗೊಂಡಿರುವುದು ಪೋಷಕರಿಗೂ ಆತಂಕ ಸೃಷ್ಟಿ ಮಾಡಿದೆ. ಮಕ್ಕಳನ್ನ ಅಲ್ಲಿ ಬಿಟ್ಟು ಹೇಗೆ ಇರುವುದು ಎಂಬ ಗೊಂದಲ ಮನೆ ಮಾಡಿದೆ.