Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಫೋಟೋಗಳನ್ನು ನೋಡಿ ಮೊದಮೊದಲು ಅತ್ತಿದ್ದೆ : ಕೆಟ್ಟ ಟ್ರೋಲ್ ಬಗ್ಗೆ ಮಾನಸ ಸ್ಟ್ರಾಂಗ್ ಟಾಕ್

---Advertisement---

ಬಿಗ್ ಬಾಸ್ ಸೀಸನ್ 11ರ ಬಹುನಿರೀಕ್ಷಿತ ಸ್ಪರ್ಧಿಯಾಗಿ ಮಾನಸ ಮನೆಯೊಳಗೆ ಎಂಟ್ರಿಯಾಗಿದ್ದರು. ಬಿಗ್ ಬಾಸಚ ಮಾನಸ ವೇದಿಕೆ ಮೇಲೆ ಮಾಡುತ್ತಿದ್ದ ಕಾಮಿಡಿ, ಆ ಕ್ಷಣಕ್ಕೆ ಕೊಡುತ್ತಿದ್ದ ಟಾಂಟ್ ಎಲ್ಲವೂ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜನರ ಬೇಡಿಕೆಗೆ ಅನುಸಾರವಾಗಿ ಬಿಗ್ ಬಾಸ್ ಮನೆಗೆ ಮಾನಸಾ ಬಂದಿದ್ದರು. ಆದರೆ ಮನೆಯೊಳಗೆ ಮಾನಸ ನಡೆದುಕೊಂಡ ರೀತಿ, ತಮಾಷೆಯನ್ನೇ ಮಾಡದೆ ಇದ್ದ ರೀತಿ ಜನರಿಗೆ ಬೇಸರ ತರಿಸಿತ್ತು. ನಿರೀಕ್ಷೆ ಸುಳ್ಳಾಗಿತ್ತು. ಅತ್ತ ಟ್ರೋಲರ್ಸ್ ಗೆ ಮಾತ್ರ ಮೃಷ್ಟಾನ್ನ ಭೋಜನವನ್ನೇ ನೀಡಿದರು.

ಮಾನಸಾ ಅವರ ಜೂಮ್ ಫೋಟೋಗಳ ಜೊತೆಗೆ ಪ್ರಾಣಿಗಳ ಫೋಟೋ ಹಾಕಿ ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಇದೀಗ ಮಾನಸ ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ. ಈ ಫೋಟೋಗಳನ್ನೆಲ್ಲ ನೋಡಿ ಅವರು ಕೂಡ ಶಾಕ್ ಆಗಿದ್ದಾರೆ. ಜೊತೆಗೆ ಬೇಸರ ಕೂಡ ಮಾಡಿಕೊಂಡಿದ್ದರಂತೆ.

ಈ ಬಗ್ಗೆ ಮಾತನಾಡಿರುವ ಮಾನಸ, ಒಂದು ಕಡೆ ಹಂದಿ ಫೋಟೋ ಹಾಕಿದ್ದಾರೆ, ಮತ್ತೊಂದು ಕಡೆ ನನ್ನ ಫೋಟೋ ಹಾಕಿದ್ದಾರೆ. ಮೊದ ಮೊದಲು ಆ‌ಫೋಟೋ ನೋಡಿ ಜಿಗುಪ್ಸೆ ಬಂತು. ಆ ಫೋಟೋ ನೋಡಿ ಅಳುತ್ತಾ ಇದ್ದೆ. ಆಮೇಲೆ ಸಂತು ಬಂದು ಸಮಾಧಾನ ಮಾಡಿದರು. ಈಗ ಆ ಫೋಟೋ ನೋಡಿದರೆ ಬೇಸರ ಆಗಲ್ಲ. ನನಗಾಗಿ ಟೈಮ್ ಕೊಟ್ಟು ಇಷ್ಟೆಲ್ಲ ಮಾಡ್ತಾರಲ್ಲ ಅನ್ನಿಸುತ್ತೆ.

ಆದರೆ ನನ್ನದೊಂದು ಪ್ರಶ್ನೆ. ತುಂಬಾ ಅಸಹ್ಯವಾಗಿ ಟ್ರೋಲ್ ಮಾಡಿದ್ರಲ್ಲ ಅವರ ಮನೆಯಲ್ಲಿ ಎಲ್ಲರೂ ಸುಂದರವಾಗಿಯೇ ಇದ್ದಾರಾ..? ಪ್ರಪಂಚದಲ್ಲಿ ಚೆನ್ನಾಗಿ ಇಲ್ಲದೆ ಇರುವವರು ಇರುತ್ತಾರೆ ಅಲ್ವಾ ಎಂದು ಮಾನಸ ಪ್ರಶ್ನೆ ಮಾಡಿದ್ದಾರೆ. ಟ್ರೋಲ್ ನೋಡಿ ನೋವಾಗಿದ್ದನ್ನು ಹಂಚಿಕೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಚಾಣಕ್ಯನೀತಿ : ಬುದ್ಧಿವಂತಿಕೆ ಇದ್ದರೂ ಈ 5 ತಪ್ಪು ಮಾಡಬೇಡಿ; ಜೀವನದಲ್ಲಿ ಕಷ್ಟಗಳು ಎದುರಾಗಬಹುದು!

ಆಗಸ್ಟ್ 17ರ ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಶುಭಫಲ, ಹಣಕಾಸಿನಲ್ಲಿ ಲಾಭದ ಯೋಗ!

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!

Leave a Comment