Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ : ಮಳೆಗೆ ಜಿಲ್ಲೆಯಾದ್ಯಂತ 120 ಮನೆಗಳು ಹಾನಿ

Facebook
Twitter
Telegram
WhatsApp

ಚಿತ್ರದುರ್ಗ. ಅ.22: ಸೋಮವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 25.6 ಮಿ.ಮೀ ಮಳೆಯಾಗಿದೆ.

ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 36.3 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 22.7 ಹಿರಿಯೂರು ತಾಲ್ಲೂಕು 19.4 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 11.5 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 33.2 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 21.6 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಚಳ್ಳಕೆರೆ  ತಾಲ್ಲೂಕಿನ ಚಳ್ಳಕೆರೆಯಲ್ಲಿ 27.7 ಮಿ.ಮೀ, ನಾಯಕನಹಟ್ಟಿ 60.2 ಮಿ.ಮೀ, ಪರಶುರಾಂಪುರ 29.7 ಮಿ.ಮೀ, ತಳಕು 32.7 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 20.5 ಮಿ.ಮೀ, ಭರಮಸಾಗರ 19.3 ಮಿ.ಮೀ, ಹಿರೇಗುಂಟನೂರು 28.2 ಮಿ.ಮೀ, ತುರುವನೂರು 26.1 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರು 30.4 ಮಿ.ಮೀ,  ಐಮಂಗಲ 14.8 ಮಿ.ಮೀ, ಧರ್ಮಪುರ 17 ಮಿ.ಮೀ, ಜವನಗೊಂಡನಹಳ್ಳಿ 19.7 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 7.7 ಮಿ.ಮೀ, ಬಿ.ದುರ್ಗ 5.6 ಮಿ.ಮೀ, ರಾಮಗಿರಿ 6.8 ಮಿ.ಮೀ, ತಾಳ್ಯ 21.8 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 12.8 ಮಿ.ಮೀ, ಮಾಡದಕೆರೆ 40.3 ಮಿ.ಮೀ, ಮತ್ತೋಡು 44.7 ಮಿ.ಮೀ, ಶ್ರೀರಾಂಪುರ 40.5 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 16.8 ಮಿ.ಮೀ ಹಾಗೂ ದೇವಸಮುದ್ರದಲ್ಲಿ 27 ಮಿ.ಮೀ ಮಳೆಯಾಗಿದೆ.

120 ಮನೆಗಳು ಭಾಗಶಃ ಹಾನಿ:  ಸೋಮವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ 120 ಮನೆಗಳು ಭಾಗಶಃ ಹಾನಿಯಾಗಿದ್ದು, 51 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ, 7 ಸಣ್ಣ ಜಾನುವಾರು ಹಾನಿ ಹಾಗೂ 10 ಹೆಕ್ಟೇರ್ ಕೃಷಿ ಬೆಳೆ ಹಾಗೂ 8 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 35 ಮನೆಗಳು ಭಾಗಶಃ ಹಾನಿ, ಚಳ್ಳಕೆರೆ ತಾಲ್ಲೂಕಿನಲ್ಲಿ 40 ಮನೆಗಳು ಹಾಗೂ 7 ಸಣ್ಣ ಜಾನುವಾರು ಹಾನಿ, 50 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ, 10 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ 8 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ.
ಹೊಳಲ್ಕೆರೆ 13 ಮನೆಗಳು, ಹೊಸದುರ್ಗ 9 ಮನೆಗಳು ಭಾಗಶಃ ಹಾನಿ ಹಾಗೂ 1 ಮನೆಗೆ ನೀರು ನುಗ್ಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 11 ಮನೆಗಳು ಭಾಗಶಃ ಹಾನಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 12 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಾರೀ ಮಳೆ: ನಾಳೆ ಮತ್ತೆ ಬೆಂಗಳೂರು ಶಾಲೆಗಳಿಗೆ ರಜೆ

  ಬೆಂಗಳೂರು: ಮಳೆರಾಯ ಅದ್ಯಾಕೋ ಏನೋ ಬಿಡುವನ್ನೇ ಕೊಡದಂತೆ ಸುರಿಯುತ್ತಿದ್ದಾನೆ. ಅತ್ತ ಬೆಳೆಯನ್ನ ಕೊಯ್ಲು ಮಾಡುವ ಸಮಯ ಅದು ಆಗ್ತಿಲ್ಲ. ಇತ್ತ ಗಿಡಗಳಿಗೆ ಔಷಧಿ ಹೊಡೆಯುವ ಸಮಯ. ಅದಕ್ಕೂ ಸಮಯ ಸಾಕಾಗುತ್ತಿಲ್ಲ. ಆದರೆ ಮಳೆರಾಯ

ಸಿಪಿ ಯೋಗೀಶ್ವರ್ ಗೆ ಕಾಂಗ್ರೆಸ್ ನಿಂದ ಆಫರ್ ಬಂದಿದ್ಯಾ..? ಸ್ವತಃ ಸಿಪಿವೈ ಹೇಳಿದ್ದೇನು..?

ರಾಮನಗರ: ಚನ್ನಪಟ್ಟಣ ಕ್ಷೇತ್ರ ಸದ್ಯ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಎರಡು ಪಕ್ಷಗಳಿಂದ ಯಾರು ನಿಲ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದ್ಯ ಕಾಂಗ್ರೆಸ್ ನಿಂದ ಸಿಪಿ ಯೋಗೀಶ್ವರ್ ಗೆ ಆಫರ್ ಹೋಗಿದೆ ಎನ್ನಲಾಗಿದೆ. ಝ ಎಲ್ಲಾ

ಚಿತ್ರದುರ್ಗ | ಬೈಕ್ ಗೆ ಲಾರಿ ಡಿಕ್ಕಿ : ವಿದ್ಯಾರ್ಥಿ ಸಾವು

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 22 : ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಬೈಕ್ ಗೆ ಲಾರಿ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಚೇತನ್ ಕುಮಾರ್ 

error: Content is protected !!