ಮುಖ್ಯಮಂತ್ರಿ ಸಿದ್ದರಾಮಯ್ಯ ಹಗರಣಗಳ ಡಾನ್ : ಚಿತ್ರದುರ್ಗದಲ್ಲಿ MLC ನವೀನ್ ವಾಗ್ದಾಳಿ

3 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಅ. 17 : ಸಿನಿಮಾಗಳಲ್ಲಿ ಗುಂಪಿನ ಹಿಂದೆ ಒಬ್ಬ ಸೂತ್ರದಾರ ಇರುವ ಹಾಗೆ ಈಗಿನ ಸರ್ಕಾರದಲ್ಲಿ ಸಿದ್ದರಾಮಯ್ಯ ಇದ್ದು ಹಗರಣಗಳಿಗೆ ಡಾನ್ ಆಗಿದ್ದಾರೆ. ಈ ಮೂಲಕ ಸಿ ಎಂ ಸಿದ್ದರಾಮಯ್ಯ ಹಗರಣಗಳ ಡಾನ್ ಎಂದು ಕೆ ಎಸ್ ನವೀನ್ ಹೇಳಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಸಿದ ಎಂ.ಎಲ್.ಸಿ ಕೆ.ಎಸ್ ನವೀನ್ ಅವರು ಮಾತನಾಡಿ ಶ್ರೀ ವಾಲ್ಮೀಕಿ ರಚಿಸಿರುವ ರಾಮಾಯಣವು ನಮ್ಮ ದೇಶಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ.ಈ ಹಿಂದೆ ಬಿ.ಎಸ್ ಯಡಿಯೂರಪ್ಪ ರವರ ನೇತೃತ್ವ ಬಿಜೆಪಿ ಸರ್ಕಾರ ಶ್ರೀ ವಾಲ್ಮೀಕಿ ಜಯಂತಿ ಆಚರಣೆಯನ್ನು ಜಾರಿಗೆ ತಂದಿತು.ಬಿಜೆಪಿ ಪಕ್ಷದ ಸರ್ಕಾರ ಅವಧಿಯಲ್ಲಿ ಎಸ್‍ಟಿ ವರ್ಗದ ಜನರಿಗೆ ತಮ್ಮದೇ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.

ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 7-8 ತಿಂಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂ ಹಗರಣ ಮಾಡಿದ್ದಾರೆ.ವಾಲ್ಮೀಕಿ ಸಮುದಾಯದ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಸ್ವಂತ ಬಳಕೆ ಮಾಡುವುದರ ಜೊತೆಗೆ ಲೋಕಸಭಾ ಚುನಾವಣೆ ಹಾಗೂ ತೆಲಂಗಾಣ ಚುನಾವಣೆಗೆ ಬಳಕೆಯಾಗಿರೋದು ಸ್ಪಷ್ಟವಾಗಿ ಗೋಚರವಾಗುತ್ತದೆ. ಯಾರ ಬದುಕಿಗೆ ಬೆಳಕಾಗಬೇಕಾಗಿತ್ತೋ. ಯಾರ ಬದುಕಿಗೆ ಭದ್ರಬುನಾಡಿಯಾಗ ಬೇಕಾಗಿತ್ತು ಆ ಹಣವನ್ನು ಅವರು  ತಮ್ಮ ಐಷಾರಾಮಿ ಜೀವನ ನಡೆಸುವುದಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿದರು.

 

ಸಿದ್ದರಾಮಯ್ಯ ಅಥವಾ ಈ ಸರ್ಕಾರಕ್ಕೆ ಶ್ರೀ ವಾಲ್ಮೀಕಿ ಜಯಂತಿಯನ್ನು ಮಾಡುವ ನೈತಿಕತೆ ಇಲ್ಲ. ಅವರು ಆ ನೈತಿಕತೆಯನ್ನು  ಕಳೆದುಕೊಂಡಿದ್ದಾರೆ.ಎಸ್‍ಟಿ ಸಮುದಾಯದ ವಿದ್ಯಾರ್ಥಿಗಳ ಹಣವನ್ನು ದುರುಪಯೋಗ ಮಾಡಿಕೊಂಡಿರುವ  ಸಿದ್ದರಾಮಯ್ಯ ಹಾಗೂ ಸರ್ಕಾರ ಎಸ್‍ಟಿ ಸಮುದಾಯದ ಯುವಕರನ್ನು ಆಗ ವಿದ್ಯಾರ್ಥಿಗಳನ್ನು ಕ್ಷಮೆ ಕೇಳಬೇಕಿತ್ತು.ಸರ್ಕಾರದಲ್ಲಿ ಹಣವನ್ನು ಬಳಸಿಕೊಂಡು ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

 

ಕಾಂಗ್ರೆಸ್ ಸರ್ಕಾರ ಎಸ್ಟಿ ಹಣವನ್ನು ದುರ್ಬಳಕೆ ಮಾಡಿಕೊಂಡು ಬಳ್ಳಾರಿ ಹಾಗೂ ರಾಯಚೂರು ಲೋಕಸಭಾ ಚುನಾವಣೆಗೆ ಎಸ್ಟಿ ಸಮುದಾಯದ ಹಣ ಖರ್ಚು ಮಾಡಿದೆ. ನಾಯಕ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನ ಮೋಜು ಮಾಡಿದ್ದಾರೆ ಎಂಬುವುದು ಇಡಿ ತನಿಖೆ ಮೂಲಕ ಗೊತ್ತಾಗಿದೆ. ನಾಯಕ ಜನಾಂಗದ ಜನ ಬಳಿ ಹೋಗಿ ಕ್ಷಮೆಯನ್ನ ಕೇಳಿ ವಾಲ್ಮೀಕಿ ಜಯಂತಿ ಮಾಡಬೇಕಿತ್ತು ಅದರೆ ಕಾಂಗ್ರೆಸ್ ಸರ್ಕಾರಕ್ಕೆ ಜಾಹೀರಾತು ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದು ವಾಲ್ಮೀಕಿ ಜಯಂತಿಯಂದೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಕಂಡವರ ಮಕ್ಕಳನ್ನ ಬಲಿ ಕೊಡುವುದರಲ್ಲಿ ಸಿದ್ದರಾಮಯ್ಯ ಎತ್ತಿದ ಕೈ ಎಂದು ತೋರಿಸಿದ್ದಾರೆ.

ವಾಲ್ಮೀಕಿ ಹಗರಣದಲ್ಲಿ ಸಚಿವ ನಾಗೇಂದ್ರರವರ ರಾಜೀನಾಮೆ ಪಡೆಯಲಾಯಿತು.ಮುಡ ಹಗರಣದಲ್ಲಿ ಸಿದ್ದರಾಮಯ್ಯನವರು ನೇರವಾಗಿ ಕಾರಣರಿದ್ದರೂ ಸಹ ಕೇವಲ ಅಧಿಕಾರಿಗಳನ್ನು ಮಾತ್ರ ಅಮಾತ್ತು ಗೊಳಿಸಲಾಗಿದೆ.ಸಿದ್ದರಾಮಯ್ಯರವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ 187 ಕೋಟಿ ಅಲ್ಲ 89 ಕೋಟಿ ರೂ ಎಂದು. ಇಷ್ಟೆಲ್ಲಾ ಹಗರಣ ಮಾಡಿರೋ ಸಿದ್ದರಾಮಯ್ಯನವರೇ ಈ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಹೇಗೆ ಭಾಗವಹಿಸುತ್ತೀರಿ.? ನಗರದಲ್ಲಿ ಮದಕರಿ ನಾಯಕ ಥೀಮ್ ಪಾರ್ಕ್ ನಿರ್ಮಾಣಕ್ಕೆ 30 ಎಕರೆ ಜಮೀನು ಬೇಕಾಗಿದೆ.. ಅದನ್ನು ಜಿಲ್ಲಾಡಳಿತ ನೀಡಿದರೆ ನಮ್ಮ ನಾಯಕರಾದ ಅಮಿತ್ ಶಾ ರವರು ನೀಡಿದಂತಹ ಭರವಸೆಯನ್ನು ಈಡೇರಿಸಲಿದ್ದೇವೆ.ಪ್ರವಾಸೋದ್ಯಮ ಇಲಾಖೆಯ ಭೂಮಿ ಯಾರ ಒಡೆತನಕ್ಕೆ ಸೇರಿದೆ ಎಂಬುದು ಮಾಹಿತಿ ನೀಡುತ್ತಿಲ್ಲ.ತಿಮ್ಮಣ್ಣನಾಯಕನ ಕೆರೆಯಲ್ಲಿ ಜಮೀನು ಸಿಗುತ್ತೆ ಅಲ್ಲಿ ನಿರ್ಮಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.ಇನ್ನೂ ವಾಲ್ಮೀಕಿ ಜಯಂತಿಯಂದೆ ವಾಲ್ಮೀಕಿ ಪ್ರತಿಮೆ ಮುಂದೆಯೇ ನಿಂತು ರಾಜೀನಾಮೆ ನೀಡಬೇಕು ಎಂದು ಎಂ ಎಲ್ ಸಿ ಕೆ ಎಸ್ ನವೀನ್ ಆಗ್ರಹ ಮಾಡಿದ್ದಾರೆ.

ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮಾಧುರಿ ಗಿರೀಶ್, ವಕ್ತಾರ ನಾಗರಾಜ್ ಬೇದ್ರೇ ಭಾಗವಹಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks