Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೂರುಗಳಿರುವ ಚೈತ್ರಾ ಬಿಗ್ ಬಾಸ್ ಮನೆಯಲ್ಲಿರುವುದು ಒಳ್ಳೆಯದಲ್ಲ : ಹೊರ ಹಾಕಲು ಹೇಳಿದ ವಕೀಲ..!

---Advertisement---

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್. ಈ ಬಾರಿಯ ಸೀಸನ್ 11‌ಶುರುವಾಗಿದೆ. 17 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಜೈಲು ದರ್ಶನ ಮಾಡಿ ಬಂದ ಚೈತ್ರಾ ಕುಂದಾಪುರ ಕೂಡ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಯಾಗಿದ್ದಾರೆ. ಆದರೆ ಬಿಗ್ ಬಾಸ್ ಮನೆಯಿಂದ ಮೊದಲು ಅವರನ್ನ ಹೊರ ಹಾಕುವಂತೆ ವಕೀಲರೊಬ್ಬರು ತಿಳಿಸಿದ್ದಾರೆ.

ಚೈತ್ರಾ ಅವರನ್ನ ತಕ್ಷಣವೇ ಬಿಗ್ ಬಾಸ್ ಶೋನಿಂದ ಹೊರಗೆ ಹಾಕಬೇಕು. ಇಲ್ಲವಾದಲ್ಲಿ ಕಲರ್ಸ್ ಕನ್ನಡದ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ಕ್ರಮ ಕೈಗೊಳ್ಳಲಾಗುವುದು ವಕೀಲ ಕೆ.ಎಲ್. ಭೋಜರಾಜ್ ಎಚ್ಚರಿಕೆ ನೀಡಿದ್ದಾರೆ. ಸುದೀಪ್ ಹೋಸ್ಟ್ ಮಾಡುತ್ತಿರುವ ರಿಯಾಲಿಟಿ ಶೋ ಅತ್ಯಂತ ಜನಪ್ರಿಯವಾಗಿದೆ. ಆದರೆ ಅದರಲ್ಲಿ14ನೇ ಸ್ಪರ್ಧಿಯಾಗಿ ಆಯ್ಕೆಯಾಗಿರುವ ಚೈತ್ರಾ ಕುಂದಾಪುರ ಮೇಲೆ ಪೊಲೀಸ್ ಠಾಣೆಯಲ್ಲಿ ಹಲವು ದೂರುಗಳು ದಾಖಲಾಗಿವೆ. ಕೇಸ್ ಗಳು ಇರುವ ಚೈತ್ರಾ ಬಿಗ್ ಬಾಸ್ ಮನೆಯಲ್ಲಿ ಇರಬಾರದು. ಹೀಗಾಗಿ ತಕ್ಷಣವೇ ಅವರನ್ನು ಹೊರ ಹಾಕಿ ಎಂದಿದ್ದಾರೆ. ಒಂದು ವೇಳೆ ಹೊರ ಹಾಕದೆ ಹೋದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ.

ಚೈತ್ರಾ ಕುಂದಾಪುರ ಸದ್ಯ ನರಕವಾಸಿಗಳಾಗಿದ್ದಾರೆ. ಕೆಲಸ ಮಾಡುವುದಕ್ಕೆಂದು ಕರೆದ ಸ್ವರ್ಗವಾಸಿಗಳ ಮೇಲೆಯೇ ದಿಡ್ಡ ರಂಪಾಟ‌ ಮಾಡಿದ್ದರು. ಶನಿವಾರ ಹಾಗೂ ಭಾನುವಾರ ಸುದೀಪ್ ಪಂಚಾಯ್ತಿ ಶುರುವಾಗಲಿದ್ದು, ಮೊದಲ ವಾರವೇ ಯಾರಿಗೆಲ್ಲಾ ಕ್ಲಾಸ್ ಸಿಗಲಿದೆ, ಅದರಲ್ಲೂ ಚೈತ್ರಾ ಕುಂದಾಪುರಗೆ ಸುದೀಪ್ ಯಾವ ರೀತಿ ಬುದ್ದಿ ಹೇಳುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕೂಡ ಕಾಯುತ್ತಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment