Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಕೋರ್ಟ್‌ ಆವರಣದಲ್ಲಿ ವಿಚಾರಾಧೀನ ಆರೋಪಿಯ ಹುಚ್ಚಾಟ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,ಆಗಸ್ಟ್ .23 :
ನ್ಯಾಯಾಲಯದಲ್ಲೇ ವಿಚಾರಣಾಧಿನ ಆರೋಪಿಯು ಹುಚ್ಚಾಟವಾಡಿ, ಕೋರ್ಟ್ ನ ಕಿಟಕಿ ಗ್ಲಾಸ್ ಹೊಡೆದು ಹಾಕಿ ಕೂಗಾಟ ನಡೆಸಿರುವ ಘಟನೆ ಶುಕ್ರವಾರ ಸಿಜೆಎಂ ನ್ಯಾಯಾಲಯದಲ್ಲಿ ನಡೆದಿದೆ.

ಸಮ್ಮು ಅಲಿಯಾಸ್ ಬಷೀರ್ ಎಂಬ ಆರೋಪಿಯು ನ್ಯಾಯಾಲದಲ್ಲಿ ಗಾಜು ಹೊಡೆದು ಹುಚ್ಚಾಟವಾಡಿದ್ದಾನೆ.

ಚಿತ್ರದುರ್ಗದ ನಗರ ಠಾಣೆ ವ್ಯಾಪ್ತಿಯಲ್ಲಿನ ಬ್ಯಾಂಕ್ ಕಾಲೋನಿಯಲ್ಲಿ ನಡೆದ ಮನೆ ರಾಬರಿ ಪ್ರಕರಣದಲ್ಲಿ ಆರೋಪಿಯಾಗಿರುವ ಸಮ್ಮು ಅಲಿಯಾಸ್ ಬಷೀರ್ ಕಳೆದ ಕೆಲ ವರ್ಷದ ಹಿಂದೆ ಬಂಧಿತನಾಗಿ ನ್ಯಾಯಲಯಕ್ಕೆ ವಿಚಾರಣೆಗೆ ಹಾಜರಾಗುತ್ತಿದ್ದರು, ಎಂದಿನಂತೆ ಇಂದು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದಾಗ, ನ್ಯಾಯಾಲಯದ ಹೊರಗಡೆ ಸಮ್ಮು ತನ್ನ ಸಹಚರನ ಮೊಬೈಲ್‌ನಿಂದ ಮಾತನಾಡುತ್ತಿದ್ದನು. ಪೊಲೀಸರು ಮಾತನಾಡುವುದನ್ನು ನಿಲ್ಲಿಸುವಂತೆ ಹಲವು ಬಾರಿ ಹೇಳಿದರೂ ಕೂಡ ಮಾತನಾಡುವುದನ್ನು ಮುಂದುವರೆಸಿದ್ದನು.

ಆಗ ಏರು ಧನಿಯಲ್ಲಿ ಪೊಲೀಸರು ಗದರಿದ್ದಾರೆ. ಇದರಿಂದ ಆಕ್ರೋಶಗೊಂಡ ಸಮ್ಮು ಕೈ ಕೋಳ ಹಾಕಿದ್ದ ಕೈಯಿಂದಲೇ ನ್ಯಾಯಾಲದ ಕೊಠಡಿಯ ಕಿಟಕಿ ಗಾಜಿಗೆ ಜೋರಾಗಿ ಹೊಡೆದಿದ್ದಾನೆ. ಅಲ್ಲದೆ, ಚೂರಾಗಿದ್ದ ಗಾಜನ್ನು ಹಿಡಿದು, ಅಕ್ಕದ ಪಕ್ಕದವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಪೊಲೀಸರು ಸಮ್ಮುನನ್ನು ಹಿಡಿದು ಪೊಲೀಸ್ ವಾಹನಕ್ಕೆ ಕರೆದೊಯ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...