ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಸುದ್ದಿಒನ್, ಚಳ್ಳಕೆರೆ ಆ.22 : ಕುರಿ ಹಟ್ಟಿಯಲ್ಲಿದ್ದ ಕುರಿ ಮರಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ 8 ಕುರಿ ಮರಿಗಳು ಸಾವನ್ನಪ್ಪಿದ ಘಟನೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಜಿ.ಪಿ. ರಂಗಪ್ಪ ಬಡಾವಣೆಯಲ್ಲಿ ವಾಸಿಸುತ್ತಿದ್ದ ಮಾರಣ್ಣ ಎನ್ನುವವರಿಗೆ ಸೇರಿದ ಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ.
ಇಂದು (ಗುರುವಾರ) ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ನಾಯಿಗಳು ಕುರಿಗಳ ಮೇಲೆ ದಾಳಿ ಮಾಡಿವೆ. ಈ ಘಟನೆಯಿಂದಾಗಿ ಕುರಿಸಾಕಾಣಿಕೆದಾರ ಮಾರಣ್ಣ ಕಂಗಾಲಾಗಿದ್ದಾನೆ. ಮೇಯಿಸಲು ಹೋದಾಗ ನರಿ, ತೋಳ ಹಾಗೂ ಚಿರತೆ ದಾಳಿ ಮಾಡುತ್ತಿದ್ದವು. ಆದರೆ ಈಗ ಅವುಗಳ ಕಾಟ ತಪ್ಪಿದ್ದು ಹಗಲಿನಲ್ಲಿಯೇ ಊರಿನ ಮಧ್ಯೆಯೇ ಕುರಿಗಳ ಮೇಲೆ ಬೀದಿ ನಾಯಿಗಳ ದಾಳಿ ಮಾಡಿ ಈ ರೀತಿ ಕುರಿಗಳನ್ನು ಬಲಿ ಪಡೆದರೆ ಹೇಗೆ ಎಂದು ಮಾರಣ್ಣ ನೋವು ವ್ಯಕ್ತಪಡಿಸಿದ್ದಾನೆ.
ಸಂಬಂಧಪಟ್ಟ ಅಧಿಕಾರಿಕಾರಿಗಳು ಮಾತ್ರ ಬೀದಿನಾಯಿಗಳ ಕಡಿವಾಣ ಹಾಕಲು ಮುಂದಾಗುತ್ತಿಲ್ಲ. ಈಗಲಾದರು ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕಿದೆ. ನಾಯಿದಾಳಿಗೆ ಸಿಲುಕಿ ಮೃತಪಟ್ಟ ಕುರಿಗಳಿಗೆ ಪರಿಹಾರ ಕೊಡಿಸುವ ಮೂಲಕ ಕುರಿಸಾಕಾಣಿಕೆದಾರರ ನೆರವಿಗೆ ಬರಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












