ಸುದ್ದಿಒನ್,ಚಿತ್ರದುರ್ಗ, ಜುಲೈ .16 : ಜಿಲ್ಲಾಸ್ಪತ್ರೆಯ ಕುಷ್ಟರೋಗ ವಿಭಾಗದಲ್ಲಿ ಸಹಾಯಕ ವೈದ್ಯಾಧಿಕಾರಿಯಾಗಿದ್ದ ಡಾ.ಹೆಚ್.ಮಂಜುನಾಥ್ ಮಂಗಳವಾರ ಬೆಳಿಗ್ಗೆ 10-30 ಕ್ಕೆ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬುಧವಾರ ಬೆಳಿಗ್ಗೆ ಸ್ವಂತ ಊರು ಹಾಲೇನಹಳ್ಳಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.