Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅನಂತ್ ಅಂಬಾನಿ ಮದುವೆಗೆ ಆಲಿಯಾ ಭಟ್ ಧರಿಸಿದ್ದ 2 ಕೋಟಿ ಬೆಲೆ : ಏನಿದರ ವಿಶೇಷತೆ..?

---Advertisement---

 

 

 

ಸುದ್ದಿಒನ್ :  ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ. ಕಳೆದ ಕೆಲವು ತಿಂಗಳುಗಳಿಂದ ಮುಖೇಶ್ ಅಂಬಾನಿ ಕಿರಿಯ ಮಗನ ಮದುವೆ ಸಂಭ್ರಮ ನಡೆಯುತ್ತಲೇ ಇದೆ. ನಿನ್ನೆ ಸಂಜೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ನಡೆದಿದೆ. ನಿನ್ನೆ, ಇವತ್ತು ಹಾಗೂ ನಾಳೆ ಜಿಯೋ ವರ್ಲ್ಡ್ ನಲ್ಲಿ ಈ ಸಂಭ್ರಮ ಹಾಗೇ ಇರಲಿದೆ. ಬಾಲಿವುಡ್ ತಾರೆಯರು, ರಾಜಕೀಯ ಗಣ್ಯರು, ವಿಶ್ವದ ಶ್ರೀಮಂತರು ಭಾಗಿಯಾಗಲಿದ್ದಾರೆ. ಇವತ್ತು ಬಾಲಿವುಡ್ ನ ದಿಗ್ಗಜರೆಲ್ಲ ಮದುವೆಗೆ ಆಗಮಿಸಿದ್ದರು.

ಬಾಲಿವುಡ್ ಮಂದಿ ತೊಟ್ಟ ಡ್ರೆಸ್ ಗಳನ್ನ ನೋಡುವುದಕ್ಕೇನೆ ಇವತ್ತು ಅದ್ಭುತವಾಗಿತ್ತು. ಟಾಲಿವುಡ್, ಬಾಲಿವುಡ್ ಸೆಲೆಬ್ರೆಟಿಗಳು ಕೋಟಿ ಕೋಟಿ ವೆಚ್ಚದ ಬಟ್ಟೆಗಳನ್ನು ತೊಟ್ಟು ಅಂಬಾನಿ ಮನೆಯ ಮದುವೆಗೆ ಬಂದಿದ್ದರು. ಇವತ್ತು ಬಾಲಿವುಡ್ ನಟಿ ಆಲಿಯಾ ಭಟ್ ಕೂಡ ರಾಣಿ ಕಲರ್ ಸೀರೆಯನ್ನುಟ್ಟು ಎಲ್ಲರ ಗಮನ ಸೆಳೆದಿದ್ದರು. ಆ ಸೀರೆ ಸುಮಾರು 160 ವರ್ಷಗಳ ಹಿಂದಿನದ್ದು. ಆ ಸೀರೆಯ ಬೆಲೆ ಬರೋಬ್ಬರಿ 2 ಕೋಟಿ.

ಈ ಸೀರೆಯನ್ನು ಬಾಲಿವುಡ್ ಆಕ್ಟರ್ ಗಳ ಡಿಸೈ‌ನರ್ ಮನೀಶ್ ಮಲ್ಹೋತ್ರ ಡಿಸೈನ್ ಮಾಡಿದ್ದರು. ಶುದ್ಧ ರೇಷ್ಮೆ ಮತ್ತು ಝರಿಯನ್ನು ಬಳಸಿ ತಯಾರು ಮಾಡಲಾಗಿದೆ. ಜೊತೆಗೆ ಆಲಿಯಾ ಭಟ್ ಧರಿಸಿದ್ದ ಸೀರೆಯಲ್ಲಿ 6 ಗ್ರಾಂ ಶುದ್ಧ ಚಿನ್ನವನ್ನು ಬಳಸಲಾಗಿದೆ.  ಟಾಪ್‌ಲೆಸ್ ಬ್ಲೌಸ್‌ನೊಂದಿಗೆ ಜೋಡಿಸಲಾದ ಇದು ರಾಣಿ ಗುಲಾಬಿ ಬಣ್ಣವನ್ನು ಹೊಂದಿದೆ. ಭಾರೀ ಆಭರಣ ಮತ್ತು ನಯವಾದ ಕೇಶವಿನ್ಯಾಸದಿಂದ ಈ ಸೀರೆಯಲ್ಲಿ ಅಲಿಯಾ ಕಂಗೊಳಿಸಿದ್ದರು. ಶುದ್ಧ ರೇಷ್ಮೆ ಮತ್ತು ಶೇ. 99ರಷ್ಟು ಶುದ್ಧ ಬೆಳ್ಳಿಯಿಂದ ಮಾಡಿದ ಝರಿ ಬಾರ್ಡರ್ ಅನ್ನು ಇದು ಹೊಂದಿತ್ತು.  ಈ ಸೀರೆಯಲ್ಲಿ ಪತಿಯೊಂದಿಗೆ ಮಿಂಚುತ್ತಾ ಬಂದಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...