Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಂಗಳೂರಿಗೆ ಬಂದ ದೊಡ್ಮನೆ ಸೊಸೆ : ನಾಳೆ ಯುವ – ಶ್ರೀದೇವಿ ಡಿವೋರ್ಸ್ ಕೇಸ್ ವಿಚಾರಣೆ..!

---Advertisement---

ಬೆಂಗಳೂರು: ದೊಡ್ಮನೆ ಮೊಮ್ಮಗ ಯುವ ರಾಜ್‍ಕುಮಾರ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಜೋರು ಚರ್ಚೆಯೂ ಆಗಿತ್ತು. ವಿದೇಶದಲ್ಲಿದ್ದ ಶ್ರೀದೇವಿ ಭೈರಪ್ಪ ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನಾಳೆ ಫ್ಯಾಮಿಲಿ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಶ್ರೀದೇವಿ ಭೈರಪ್ಪ ಕೂಡ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ನಾಳಿನ ವಿಚಾರಣೆ ವಿಚ್ಛೇದನ ಕೇಸ್ ಗೆ ನಿರ್ಣಾಯಕ ದಿನವಾಗಿದೆ. ಯುವ ರಾಜ್‍ಕುಮಾರ್ ವಿಚ್ಚೇದನ ಕೋರಿ ಜೂನ್ 6 ರಂದು ಅರ್ಜಿ ಸಲ್ಲಿಕೆ ಮಾಡಿದ್ದರು. ಅಂದು ವಿಚಾರಣೆ ನಡೆಸಿದ್ದ ಫ್ಯಾಮಿಲಿ ಕೋರ್ಟ್ ಜುಲೈ 4ಕ್ಕೆ ಮುಂದೂಡಿಕೆ ಮಾಡಿತ್ತು. ಹೀಗಾಗಿ ನಾಳೆ ಫ್ಯಾಮಿಲಿ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಶ್ರೀದೇವಿ ಕೂಡ ಅಮೆರಿಕಾದಿಂದ ಬೆಂಗಳೂರಿಗೆ ಬಂದಿದ್ದು, ವಿಚಾರಣೆಗೆ ಹಾಜರಾಗುತ್ತಾರೆ ಎಂದೇ ಹೇಳಲಾಗುತ್ತಿದೆ.

ಯುವ ರಾಜ್‍ಕುಮಾರ್ ದಾಂಪತ್ಯ ಜೀವನದ ಬಿರುಕು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶ್ರೀದೇವಿ ಹಾಗೂ ಯುವ ಇಬ್ಬರು ಪ್ರೀತಿಸಿ ಮದುವೆಯಾಗಿದ್ದವರು. ಆದರೆ ಯುವ ಮೊದಲ ಸಿನಿಮಾದ ಸಮಯದಲ್ಲಿಯೂ ಶ್ರೀದೇವಿ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ವಿದೇಶದಲ್ಲಿ ಓದುವುದಕ್ಕೆ ಹೋಗಿದ್ದಾರೆ ಎಂದೇ ಎಲ್ಲರೂ ಭಾವಿಸಿ ಸುಮ್ಮನೆ ಆಗಿದ್ದರು. ಆದರೆ ಡಿವೋರ್ಸ್ ಕೇಸ್ ಹೊರಗೆ ಬಂದೊಡನೆ ದೊಡ್ಡ ಶಾಕ್ ಆಗಿತ್ತು. ಯುವ ರಾಜ್‍ಕುಮಾರ್ ಹಾಗೂ ಶ್ರೀದೇವಿ ಒಬ್ಬರಿಗೊಬ್ಬರು ಆರೋಪ ಮಾಡುವುದರಲ್ಲಿ ಮುಳುಗಿದರು. ಯುವ ರಾಜ್‍ಕುಮಾರ್ ಕಡರಯ ವಕೀಲರು ಶ್ರೀದೇವಿ ಅವರ ನಡವಳಿಕೆ ಬಗ್ಗೆ ಮಾತನಾಡಿದರೆ , ಶ್ರೀದೇವಿ ಬಹಿರಂಗವಾಗಿಯೇ ಪೋಸ್ಟ್ ಒಂದನ್ನು ಹಾಕಿದ್ದರು. ಸಹ ನಟಿಯ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರಿಂದ ನಾನು ದೂರಾದೆ ಎಂದಿದ್ದರು. ಇದರ ನಡುವೆ ಸಪ್ತಮಿ ಗೌಡ ಆಡಿಯೋ ಬೇರೆ ವೈರಲ್ ಆಗಿತ್ತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment