ಸುದ್ದಿಒನ್, ಚಿತ್ರದುರ್ಗ, ಜೂನ್. 26 : ನಗರದ ಖ್ಯಾತ ಉದ್ಯಮಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ದುರ್ಗದ ಸಿರಿ ಗ್ರೂಪ್‌ನ ಮಾಲೀಕರು ಆದ ಜಿ.ಟಿ. ಬಾಬುರೆಡ್ಡಿ ಅವರ ತಾಯಿ ಜೆಸಿಆರ್ ಬಡಾವಣೆಯ ನಿವಾಸಿ ತಿಮ್ಮಕ್ಕನವರು (78 ವರ್ಷ) ಇಂದು (ಬುಧವಾರ) ಸಂಜೆ ನಿಧನರಾದರು.
ಮೃತರಿಗೆ ಬಾಬುರೆಡ್ಡಿ ಸೇರಿದಂತೆ ಮೂವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ನಾಳೆ (ಗುರುವಾರ) ಬೆಳಿಗ್ಗೆ 10 : 30 ಕ್ಕೆ ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.









