ಚಿತ್ರದುರ್ಗ. ಜೂನ್.18: ಮೊಳಕಾಲ್ಮೂರು ತಾಲ್ಲೂಕಿನ ಭಟ್ರಹಳ್ಳಿ ಗ್ರಾಮದ ಕೆ.ಸಿ.ಗುರುರಾಜ್ ತಂದೆ ಬಿ.ಕೆ.ಚಂದ್ರಪ್ಪ (ಸುಮಾರು 28ವರ್ಷ) ಎಂಬ ವ್ಯಕ್ತಿಯು ಕಾಣೆಯಾಗಿರುವ ಪ್ರಕರಣ 2023ರ ಡಿಸೆಂಬರ್ 9 ರಂದು ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾದ ಕೆ.ಸಿ.ಗುರುರಾಜ್ ಚಹರೆ ಇಂತಿದೆ. ಸುಮಾರು 5.4 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲುಮುಖ ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುವರು. ಮನೆಯಿಂದ ಹೋಗುವಾಗ ವೈಟ್ ಚೆಕ್ಸ್ ಶರ್ಟ್, ಲೈಟ್ ಕ್ರೀಂ ಕಲರ್ ಪ್ಯಾಂಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಮೇಲ್ಕಂಡ ಚಹರೆಯುವುಳ್ಳ ವ್ಯಕ್ತಿಯ ಕುರಿತು ಮಾಹಿತಿ ದೊರೆತ ಕೂಡಲೇ ಮೊಳಕಾಲ್ಮರು ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











