Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭಗೀರಥ ಹೆಸರಿನ ಚಿತ್ರ ತೆರೆಗೆ : ಚಿತ್ರದುರ್ಗ ಜಿಲ್ಲಾ ಉಪ್ಪಾರ ಸಮಾಜ ಖಂಡನೆ

---Advertisement---

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552

ಸುದ್ದಿಒನ್,ಚಿತ್ರದುರ್ಗ, ಮೇ. 18 : ತಪಸ್ಸಿನಿಂದ ಗಂಗೆಯನ್ನೇ ಧರೆಗಿಳಿಸಿದ ಭಗೀರಥರ ಹೆಸರಿಟ್ಟುಕೊಂಡು ರಾಮ್‍ಜನಾರ್ಧನ್ ಚಿತ್ರ ನಿರ್ದೇಶಿಸಿರುವುದನ್ನು ಜಿಲ್ಲಾ ಉಪ್ಪಾರ ಸಮಾಜದ ನಿಕಟಪೂರ್ವ ಅಧ್ಯಕ್ಷ ಆರ್.ಮೂರ್ತಿ ಹಾಗೂ ಮಾಜಿ ಕಾರ್ಯದರ್ಶಿ ಬಸವರಾಜ್ ಇವರುಗಳು ತೀವ್ರವಾಗಿ ಖಂಡಿಸಿದ್ದಾರೆ.

ಭಗೀರಥರಿಗೆ ಪೌರಾಣಿಕ ಹಿನ್ನೆಲೆಯಿದೆ. ಅಂತಹ ಮಹರ್ಷಿಯ ಹೆಸರನ್ನು ಚಿತ್ರಕ್ಕಿಟ್ಟುಕೊಂಡು ಹಾಡು, ಕುಣಿತ, ಅಶ್ಲೀಲ ದೃಶ್ಯಗಳು, ಅರೆಬರೆ ಬಟ್ಟೆಗಳನ್ನು ತೊಟ್ಟು ಪ್ರದರ್ಶಿಸುವಂತ ದೃಶ್ಯಗಳ ಟೀಸರ್ ಇತ್ತೀಚೆಗೆ ಬಿಡುಗಡೆಗೊಂಡಿದೆ. ಕೂಡಲೆ ಚಿತ್ರಕ್ಕಿಟ್ಟಿರುವ ಭಗೀರಥರ ಹೆಸರನ್ನು ಬದಲಾವಣೆ ಮಾಡಬೇಕು.

ಇಲ್ಲದಿದ್ದರೆ ಉಪ್ಪಾರ ಸಮಾಜದಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು. ಒಂದು ವೇಳೆ ಹೆಸರು ಬದಲಿಸದಿದ್ದರೆ ಯಾವ ಚಿತ್ರಮಂದಿರಗಳಲ್ಲಿಯೂ ಪ್ರದರ್ಶನಕ್ಕೆ ಅವಕಾಶ ಕೊಡುವುದಿಲ್ಲವೆಂದು ಆರ್.ಮೂರ್ತಿ ಹಾಗೂ ಬಸವರಾಜ್ ಇವರುಗಳು ಎಚ್ಚರಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment