Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

SSLC ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿ : ಎಂಗೇಜ್ಮೆಂಟ್ ಮಾಡಿಕೊಳ್ಳಲು ಬಂದವನಿಂದ ಬರ್ಬರ ಹತ್ಯೆ..!

---Advertisement---

ಕೊಡಗು: ಎಸ್ಎಸ್ಎಲ್ಸಿ ಫಲಿತಾಂಶ ನಿನ್ನೆಯಷ್ಟೆ ಪ್ರಕಟಗೊಂಡಿದೆ. ಎಸ್ಎಸ್ಎಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದ ಬುನಾದಿ. ಮುಂದಿನ ಉಜ್ವಲ ಭವಿಷ್ಯ ಇಲ್ಲಿಂದ ಶುರು. ಇಂಥ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು, ಮುಂದಿನ ಓದಿನ ಬಗ್ಗೆ ಆ ವಿದ್ಯಾರ್ಥಿನಿ ತಲೆಕೆಡಿಸಿಕೊಂಡಿದ್ದಳು. ಆದರೆ ಕೊಲೆಗಾರ ಆ ವಿದ್ಯಾರ್ಥಿನಿಯ ತಲೆಯನ್ನೇ ಕತ್ತರಿಸಿದ್ದಾನೆ. ಇದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದಿದೆ.

ಯು ಎಸ್ ಮೀನಾ ಕೊಲೆಯಾದ ವಿದ್ಯಾರ್ಥಿನಿ. ಸೂರ್ಲಬ್ಬಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇದೇ ಗ್ರಾಮದ ನಿವಾಸಿ 30 ವರ್ಷದ ಓಂಕಾರಪ್ಪ ಎಂಬಾತ ಕೊಲೆ ಮಾಡಿದ್ದಾನೆ. ಈ ಓಂಕಾರಪ್ಪನ ಜೊತೆಗೆ ಮೀನಾಳಿಗೆ ನಿಶ್ಚಿತಾರ್ಥ ಏರ್ಪಾಡು ಮಾಡಪಾಗಿತ್ತು. ಆದರೆ ಆಕೆ ಅಪ್ರಾಪ್ತ ಬಾಲಕಿಯಾಗಿದ್ದರಿಂದ ಪೊಲೀಸರು ನಿಶ್ಚಿತಾರ್ಥ ನಿಲ್ಲಿಸಿದ್ದರು. ಇದರ ಬೆನ್ನಲ್ಲೇ ಫಲಿತಾಂಶ ಕೂಡ ಬಂದಿದ್ದು, ಆರೋಪಿ ಓಂಕಾರಪ್ಪ ಪೋಷಕರ ಎದುರೇ ಮೀನಾಳನ್ನು ಕರೆದೊಯ್ದು ಕೊಲೆ ಮಾಡಿದ್ದಾನೆ.

ಈ ಸಂಬಂಧ ಸೋಮವಾರಪೇಟೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೂಡ ತನಿಖೆಯನ್ನು ಚುರುಕುಗೊಳಿಸಿ, ಆರೋಪಿಗಾಗಿ ಬಲೆ ಬೀಸಿದ್ದಾರೆ. ಆರೋಪಿಯ ಜೊತೆಗೆ ಅಪ್ರಾಪ್ತ ಬಾಲಕಿಯ ನಿಶ್ಚಿತಾರ್ಥ ನಿಶ್ಚಯಗೊಂಡಿದ್ದದ್ದು ಸತ್ಯ ಎಂಬುದನ್ನು ಎಸ್ಪಿ ಕೆ.ರಾಮರಾಜನ್ ಖಚಿತಪಡಿಸಿದ್ದಾರೆ‌. ಆದರೆ ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಯುವತಿಗೆ 18 ತುಂಬುವ ತನಕ ಮದುವೆ ಮಾಡಬೇಡಿ ಎಂದು ಮನವೊಲಿಕೆ ಮಾಡಿದ್ದರಂತೆ‌. ಮದುವೆ ನಿಂತು ಹೋಯಿತಲ್ಲ ಎಂಬ ಕೋಪಕ್ಕೆ ಈ ರೀತಿ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment