ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಅಕ್ಷಯ ತೃತೀತ ಎಂದರೆ ಹೆಣ್ಣು ಮಕ್ಕಳಿಗೆ ಬಲು ಪ್ರೀತಿ.ಈ ದಿನದಂದು ಚಿನ್ನ, ಬೆಳ್ಳಿ ಖರೀದಿ ಮಾಡಿದರೆ ಅಕ್ಷಯ ಪಾತ್ರಯಷ್ಟೇ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ. ಅದಕ್ಕಾಗಿಯೇ ಇಂದು ಬಂಗಾರ ಖರೀದಿ ಮಾಡಲು ಸಾಲು ಸಾಲು ಜನ ಕ್ಯೂ ನಿಂತಿರುತ್ತಾರೆ. ಈ ದಿನವನ್ನು ಅತ್ಯಂತ ಮಂಗಳಕರವೆಂದು ಕರೆಯಲಾಗುತ್ತದೆ. ಈ ದಿನ ಸಾಕಷ್ಟು ಮಹತ್ವವನ್ನು ಹೊಂದಿದೆ. ಅದರ ಜೊತೆಗೆ ಈ ಅಕ್ಷಯ ತೃತೀಯ ಪ್ರತಿ ವರ್ಷದಂತೆ ಅಲ್ಲ. 100 ವರ್ಷಗಳ ಬಳಿಕ ಗಜಕೇಸರಿ ಯೋಗ ಕೂಎ ಬಂದಿದೆ.
ಚಂದ್ರ ಮತ್ತು ಗುರು ಇಂದು ಏಕಕಾಲದಲ್ಲಿ ವೃಷಭ ರಾಶಿಯನ್ನು ಪ್ರವೇಶ ಮಾಡಲಿದ್ದಾರೆ. ಈ ಮೂಲಕ ಗಜಕೇಸರಿ ಯೋಗ ಪ್ರಾಪ್ತಿಯಾಗಲಿದೆ. ಇಂದು ಏನೇ ಕೆಲಸ ಮಾಡಿದರು ಒಳೀತೆ ಆಗಲಿದೆ. ಇಂದು ಮುಖ್ಯವಾಗಿ ಜನ ಚಿನ್ನ ಬೆಳ್ಳಿಯನ್ನು ಖರೀದಿ ಮಾಡುತ್ತಾರೆ. ಅದಕ್ಕೆ ಒಂದು ಮಹತ್ವ ಕೂಡ ಇದೆ.
ಅಕ್ಷಯ ಎಂದರೆ ಅದು ಎಂದಿಗೂ ಖಾಲಿಯಾಗದ ಅಥವಾ ನಾಶವಾಗದ ಎಂಬರ್ಥವನ್ನು ನೀಡುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ನೀವು ದೀರ್ಘಕಾಲದವರೆಗೆ ಕೆಲವು ಶುಭ ಕಾರ್ಯಗಳನ್ನು ಮಾಡಲು ಯೋಚಿಸುತ್ತಿದ್ದರೆ, ಅಕ್ಷಯ ತೃತೀಯಕ್ಕಿಂತ ಉತ್ತಮವಾದ ದಿನ ಮತ್ತೊಂದಿಲ್ಲ ಎಂದು ಹೇಳಲಾಗುತ್ತದೆ. ಈ ದಿನದಂದು ಶುಭ ಕಾರ್ಯವನ್ನು ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿಯ ಆಶೀರ್ವಾದ ದೊರೆಯುತ್ತದೆ. ಹಾಗೂ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಅಲ್ಲದೆ, ಲಕ್ಷ್ಮಿ ದೇವಿಯ ಆಶೀರ್ವಾದ ಯಾವಾಗಲೂ ಕುಟುಂಬದ ಮೇಲೆ ಇರುತ್ತದೆ.
ಇಂದು ಹಲವು ರಾಶಿಗಳಿಗೆ ಶುಭಫಲವಾಗಲಿದೆ. ಇದರ ಜೊತೆಗೆ ಇಂದು ಮದುವೆ, ಗೃಹ ಪ್ರವೇಶದಂತೆ ಯಾವುದೇ ಶುಭ ಸಮಾರಂಭ ಮಾಡುವುದಕ್ಕೂ ಮುಹೂರ್ತವಿಡುವ ಅವಶ್ಯಕತೆ ಇಲ್ಲ. ಯಾವ ಸಮಯದಲ್ಲಾದರೂ ಮಾಡಬಹುದು. ಅಷ್ಟು ಒಳ್ಳೆಯ ದಿನವಾಗಿದೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್