ಹುಬ್ಬಳ್ಳಿ : ಪ್ರೀತಿ ವಿಚಾರಕ್ಕೆ ನೇಹಾರ ಕೊಲೆಯಾಗಿದೆ. ಆರೋಪಿಯ ಬಂಧನವೂ ಆಗಿದೆ. ತನಿಖೆಯೂ ನಡೆಯುತ್ತಿದೆ. ಇದರ ನಡುವೆ ಫಯಾಜ್ ತಂದೆ-ತಾಯಿ ಕ್ಷಮಾಪ್ಪಣೆ ಕೇಳಿ, ಮಗನಿಗೆ ಶಿಕ್ಷೆಯಾಗಲಿ ಎಂದೇ ಒತ್ತಾಯಿದ್ದಾರೆ. ಇಬ್ವರು ಲವ್ ಮಾಡುತ್ತಿದ್ದರು ಅಂತ ಕೂಡ ಹೇಳಿದ್ದಾರೆ. ಇದೀಗ ಫಯಾಜ್ ಹಾಗೂ ನೇಹಾರ ಫೋಟೋಗಳು ಓಡಾಡುತ್ತಿವೆ. ಇದಕ್ಕೆ ನೇಹಾ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.
‘ನನ್ನ ಮಗಳು ಹೊಲಸು ಕೆಲಸ ಮಾಡಲ್ಲ. ಬೆನ್ನು ಬಿದ್ದಿದ್ದಾನೆ ಎಂದು ಹೇಳಿದ್ದಳು. ಕ್ಷಮೆ ತೆಗೆದುಕೊಂಡು ನಾನೇನು ಮಾಡಲಿ. ಮಗಳು ಕಾಲೇಜಿಗೆ ಹೋಗಿತ್ತಿದ್ದಳು. ಬೋಲ್ಡ್ ಆಗಿದ್ದಳು. ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಮದುವೆ ಬಗ್ಗೆ ಮಾತನಾಡಿರಲಿಲ್ಲ. ಫೋಟೋವನ್ನು ಹೇಗೆ ಬೇಕೋ ಹಾಗೇ ಎಡಿಟ್ ಮಾಡಿಕೊಳ್ಳಬಹುದು. ಅವಳು ಚೆನ್ನಾಗಿ ಸ್ಟಡಿ ಮಾಡುತ್ತಿದ್ದಳು. ಮಗಳಿಗೆ ಶಾಂತಿ ಸಿಗಬೇಕು ಎಂದರೆ ಅವನು ಬದುಕಬಾರದು. ಅವನನ್ನು ಜನರ ಕೈಗೆ ಕೊಡಿ.
ಕಾಲೇಜ್ ಗೆ ಮೂರು ಗೇಟ್ ಇದೆ. ಯಾರಾದರೂ ಬರುತ್ತಾರೆ ಹೋಗುತ್ತಾರೆ. ಘಟನೆ ನನ್ನ ಕಣ್ಣ ಮುಂದೆ ನಡೆದಿದೆ. ಹತ್ತು ಹೆಜ್ಜೆಯಷ್ಟೇ ನಾನು ದೂರ ಇದ್ದೆ. ಕಲಿಯುವುದಕ್ಕೆ ಕಳುಹಿಸಿದ್ರೆ ಹೆಣವಾಗಿ ಬರುತ್ತಾರೆ ಅಂದ್ರೆ ಹೇಗೆ. ಹೆಣ್ಣು ಮಕ್ಕಳಿಗೆ ಸೇಫ್ಟಿನೇ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಮಗನ ತಪ್ಪನ್ನು ಕ್ಷಮಿಸಬಾರದು ಎಂದು ಹೇಳಿದ ಮುಮ್ತಾಜ್, ನೇಹಾಳನ್ನು ಬಹಳ ಕ್ರೂರವಾಗಿ ಕೊಂದಿದ್ದಾನೆ. ಇಂಥ ಅನ್ಯಾಯವಾಗಬಾರದು. ಆ ಮಗು ಅದೆಷ್ಟು ವಿಲವಿಲ ಅಂತ ಒದ್ದಾಡಿತೋ. ಅವರಿಬ್ಬರು ಫ್ರೆಂಡ್ಸ್ ಆಗಿದ್ದರು. ಅವಳು ಲವ್ ಮಾಡುತ್ತಿದ್ದಾಳೆ ಮಮ್ಮಿ ಅಂತ ನನ್ನ ಬಳಿ ಹೇಳಿಕೊಂಡಿದ್ದ ಎಂದಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










