ದಾವಣಗೆರೆ: ಚುನಾವಣಾ ಹಿನ್ನೆಲೆ ಶಾಮನೂರು ಶಿವಶಂಕರಪ್ಪನವರು ಇತ್ತಿಚೆಗೆ ಬಿಜೆಪಿ ಮಹಿಳಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ವಿರುದ್ದ ಮಾತನಾಡಿದ್ದರು. ದಾವಣಗೆರೆಯಲ್ಲಿ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಮಹಿಳಾ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರು ಅಡುಗೆ ಮಾಡಲಿಕ್ಕೆ ಲಾಯಕ್ಕು. ಆಕೆಗೆ ಸರಿಯಾಗಿ ಮಾತನಾಡಲು ಬರಲ್ಲ. ದಾವಣಗೆರೆ ಜಿಲ್ಲೆಯ ಸಮಸ್ಯೆಗಳು ಏನು ಅನ್ನೋದೇ ಆ ಅಭ್ಯರ್ಥಿಗೆ ಗೊತ್ತಿಲ್ಲ ಎಂದಿದ್ದರು. ಗಾಯತ್ರಿ ಸಿದ್ದೇಶ್ವರ್ ಅಡುಗೆ ಮಾಡುವಿದಕ್ಕಷ್ಟೇ ಲಾಯಕ್ಕು ಎಂದಿದ್ದರು. ಈ ಹೇಳಿಕೆಗೆ ಹಲವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಬ್ಯಾಡ್ಮಿಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಆಕ್ರೋಶ ಹೊರ ಹಾಕಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರ ಮಾತನ್ನು ಖಂಡಿಸಿರುವ ಸೈನಾ ನೆಹ್ವಾಲ್, ಕಾಂಗ್ರೆಸ್ ನಾಯಕನ ಮಾತು ಸ್ತ್ರೀ ವಿರೋಧಿಯಾಗಿದೆ. ಈ ಹೇಳಿಕೆ ಮಹಿಳಾ ಸಬಲೀಕರಣವನ್ನೇ ಅವಮಾನಿಸಿದೆ. ನಾನು ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪರ ಆಡುವಾಗ , ನನಗೆ ಆದ್ಯತೆ ನೀಡಿದೆ. ನನಗೆ ಅವಕಾಶ ಸಿಕ್ಕ ಮೇಲೆ ಭಾರತಕ್ಕಾಗಿ ಗೆಲ್ಲುವುದಕ್ಕೆ ಸಾಧ್ಯವಾಯ್ತು. ಮಹಿಳೆಯರು ದೊಡ್ಡ ಸಾಧನೆ ಮಾಡಬೇಕು ಎಂದು ಕನಸು ಕಾಣುವಾಗ, ನಾರಿ ಶಕ್ತಿಯನ್ನು ಸಂಹಾರ ಮಾಡಲಾಗುತ್ತಾ ಇದ್ಯಾ..?

ಪ್ರಧಾನಿ ನರೇಂದ್ರ ಮೋದಿ ಅಬರು ಮಹಿಳೆಯರಿಗಾಗಿ ಮಹಿಳಾ ಮೀಸಲಾತಿ ಬಿಲ್ ಜಾರಿಗೆ ತಂದಿದ್ದಾರೆ. ಇಂತಹ ಸಂದರ್ಭದಲ್ಲಿ ನಾರಿಬಶಕ್ತಿಗೆ ಅಪಮಾನ, ಸ್ತ್ರಿ ದ್ವೇಷಿ ಹೇಳಿಕೆ ನೀಡುವುದು ಬೇಸರದ ಸಂಗತಿಯೇ ಸರಿ ಎಂದು ಸೈನಾ ನೆಹ್ವಾಲ್ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















