Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತುಮಕೂರಿನವರೆಗೂ ‘ನಮ್ಮ ಮೆಟ್ರೋ’ ವಿಸ್ತರಣೆ : ಯಾವಾಗ, ಎಷ್ಟು ಕೋಟಿ ವೆಚ್ಚ ಮಾಹಿತಿ ನೀಡಿದ ಜಿ ಪರಮೇಶ್ವರ್..!

Facebook
Twitter
Telegram
WhatsApp

 

ಬೆಂಗಳೂರು: ತುಮಕೂರಿನಿಂದ ಸಿಲಿಕಾನ್ ಸಿಟಿಗೆ ಪ್ರತಿದಿನ ಸಾವಿರಾರು ಜನ ರೈಲು, ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಮೆಟ್ರೋ ವಿಸ್ತರಣೆಯಾದರೆ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಸಿಹಿ ಸುದ್ದಿ ನೀಡಿದ್ದಾರೆ.

ಬೆಂಗಳೂರಿನಿಂದ ತುಮಕೂರಿನವರೆಗೆ ‘ನಮ್ಮ ಮೆಟ್ರೋ’ ಸೇವೆ ಬಗ್ಗೆ ಡಿಪಿಐಆರ್ ಯೋಜನೆಯಡಿ ಅನುಮೋದನೆಗೆ ಡಾ.ಜಿ.ಪರಮೇಶ್ವರ್​ ಅವರು ಸರ್ಕಾರದ ಜೊತೆ ಚಿಂತನೆ ನಡೆಸಿದ್ದಾರಂತೆ. ಸುಮಾರು 25 ಸಾವಿರ ಕೋಟಿ ಪ್ರಾಜೆಕ್ಟ್​ನಲ್ಲಿ ಮೆಟ್ರೋ ಸೇವೆ ಕಲ್ಪಿಸಲು ಪ್ಲಾನ್​ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಬೆಂಗಳೂರಿನಿಂದ ತುಮಕೂರಿನವರೆಗೆ ಮೆಟ್ರೋ ಸೇವೆ ನಿರ್ಮಾಣಕ್ಕೆ ಸರ್ಕಾರದ ಚಿಂತನೆ ಮಾಡುತ್ತಿದೆ. ಮೆಟ್ರೋ ನಿರ್ಮಾಣದ ಬಗ್ಗೆ ಈಗಾಗಲೇ ಎರಡು ಕಂಪನಿಗಳ ಉತ್ಸಾಹ ತೋರಿಸಿದ್ದು, ಪಿಪಿಪಿ ಮಾಡಲ್​ನಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಪ್ಲಾನ್​ ಮಾಡಲಾಗಿದೆ ಎನ್ನಲಾಗಿದೆ.

ಈ ಹಿಂದೆ ನಮ್ಮ ಮೆಟ್ರೋ ತವರು ಜಿಲ್ಲೆಗೆ ವಿಸ್ತರಣೆ ಮಾಡುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಇದೀಗ ಜಿ ಪರಮೇಶ್ವರ್ ಅವರು ತವರು ಜಿಲ್ಲೆಗೆ ನಮ್ಮ ಮೆಟ್ರೋ ವಿಸ್ರಿಸುವ ಬಗ್ಗೆ ಮಾತನಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿಗೆ ಸಿಎಂ ಸಿದ್ದರಾಮಯ್ಯ ಪತ್ರ..!

  ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡಿ ಇಷ್ಟು ದಿನಗಳಾದರೂ ಪ್ರಜ್ವಲ್ ರೇವಣ್ಣ ಅವರು ರಾಜ್ಯಕ್ಕೆ ಬರುತ್ತಿಲ್ಲ, ಎಸ್ಐಟಿ ಅಧಿಕಾರಿಗಳಿಂದಾನೂ ಅವರನ್ನು ಕರೆತರುವುದಕ್ಕೆ ಆಗುತ್ತಿಲ್ಲ.‌ ದೇಶದಿಂದ ದೇಶಕ್ಕೆ ಓಡಾಡುತ್ತಾ ಪ್ರಜ್ವಲ್ ರೇವಣ್ಣ ಆರಾಮವಾಗಿ

ಮಳೆಗೆ ನಲುಗಿದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ..!

ಬೆಂಗಳೂರು: ಕಳೆದ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿತ್ತು. ಅದರ ಪರಿಣಾಮ ರಾಜ್ಯದೆಲ್ಲೆಡೆ ಭೀಕರ ಬರಗಾಲವನ್ನು ಎದುರಿಸಿದಂತೆ ಆಗಿತ್ತು. ಆದರೆ ಈ ವರ್ಷ ಆರಂಭದಲ್ಲಿಯೇ ಜಲಧಾರೆಯ ಸದ್ದು ಜೋರಾಗಿದೆ. ಆದರೆ ಮೊದಲ ಮಳೆಯಿಂದಾನೇ

ಮೊಳಕಾಲ್ಮೂರು| ಆಸ್ಪತ್ರೆಯಲ್ಲಿ ಕರೆಂಟ್ ಕಟ್, ಮೇಣದಬತ್ತಿ ಹಚ್ಚಿ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು

  ಸುದ್ದಿಒನ್, ಮೊಳಕಾಲ್ಮೂರು, ಮೇ. 21 : ಮಳೆ ಬಂದಾಗ ಒಂದಷ್ಟು ಸಮಸ್ಯೆಗಳಾಗುವುದು ಸಾಮಾನ್ಯ. ವಿದ್ಯುತ್ ಸಮಸ್ಯೆ, ರಸ್ತೆಗಳ ಕುಸಿತ, ನೀರು ತುಂಬಿಕೊಳ್ಳುವುದು. ಇದೆಲ್ಲದಕ್ಕೂ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲೆಂದೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿರುತ್ತದೆ.

error: Content is protected !!