Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

2023 ರಲ್ಲಿ ಅತಿ ಹೆಚ್ಚು ಡಿಲೀಟ್ ಆದ ಆ್ಯಪ್ ಯಾವುದು ಗೊತ್ತಾ ?

---Advertisement---

 

ಸುದ್ದಿಒನ್ : ಅತಿ ಶೀಘ್ರದಲ್ಲಿ ನಾವೆಲ್ಲರೂ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಪ್ರಪಂಚದಾದ್ಯಂತ ಎಲ್ಲರೂ ಹೊಸ ವರ್ಷಾಚರಣೆಗೆ ಸಿದ್ಧರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಶುಭಾಶಯ ಕಳುಹಿಸಲು ಸಾಮಾಜಿಕ ಮಾಧ್ಯಮಗಳ ಮೂಲಕ ಶುಭಕೋರುವುದು ಹೆಚ್ಚು. ಏಕೆಂದರೆ ಇದೀಗ ಸಾಮಾಜಿಕ ಜಾಲತಾಣಗಳೇ ಬಹುತೇಕರ ಪ್ರಪಂಚವಾಗಿದೆ.

ನಮ್ಮ ಫೋನ್‌ಗಳಲ್ಲಿ ಹೆಚ್ಚು ಬಳಸುವ ಅಪ್ಲಿಕೇಶನ್‌ಗಳಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಇತರ ಹಲವು ಅಪ್ಲಿಕೇಶನ್‌ಗಳು ಸೇರಿವೆ. ಹೆಚ್ಚಿನ ಬಳಕೆದಾರರು ಈ ಅಪ್ಲಿಕೇಶನ್‌ಗಳನ್ನು ದೀರ್ಘಕಾಲದವರೆಗೆ ಬಳಸುತ್ತಿದ್ದಾರೆ.

ಪ್ರತಿ ವರ್ಷ ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ವರದಿಯೊಂದರ ಪ್ರಕಾರ, ವಿಶ್ವದಾದ್ಯಂತ ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ 4.8 ಬಿಲಿಯನ್ (480 ಕೋಟಿ) ದಾಟಿದೆ. ಇದು ಜಾಗತಿಕ ಜನಸಂಖ್ಯೆಯ 59.9% ಮತ್ತು ಎಲ್ಲಾ ಇಂಟರ್ನೆಟ್ ಬಳಕೆದಾರರ 92.7% ರಷ್ಟಿದೆ. ಸಾಮಾಜಿಕ ಮಾಧ್ಯಮವನ್ನು ಬಳಸುವವರು ಪ್ರತಿ ತಿಂಗಳು ಸರಾಸರಿ 6.7 ವಿಭಿನ್ನ ನೆಟ್‌ವರ್ಕ್‌ ಗಳನ್ನು ಬಳಸುತ್ತಾರೆ. ಹೆಚ್ಚಿನ ಬಳಕೆದಾರರು ಪ್ರತಿದಿನ 2 ಗಂಟೆ 24 ನಿಮಿಷಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕಾಲ ಕಳೆಯುತ್ತಾರೆ.

ಆದರೆ ಸಮಯ ಕಳೆದಂತೆ ಕೆಲವು ಆಪ್ ಗಳ ಬಗ್ಗೆ ಬಳಕೆದಾರರ ಆಸಕ್ತಿ ಕಡಿಮೆಯಾಗುತ್ತಿದೆ. ಈ ಕಾರಣದಿಂದಾಗಿ, ಕೆಲವು ಅಪ್ಲಿಕೇಶನ್‌ಗಳನ್ನು delete ಮಾಡಲಾಗುತ್ತಿದೆ.ಈ ಹಿನ್ನೆಲೆಯಲ್ಲಿ, 2023 ರಲ್ಲಿ ಬಳಕೆದಾರರಿಂದ ಅತಿ ಹೆಚ್ಚು delete ಆದ ಅಪ್ಲಿಕೇಶನ್‌ಗಳ ಪೈಕಿ ಮೆಟಾದ ಥ್ರೆಡ್ಸ್ ( Meta’s Threads) ಆಗಿದೆ. ಈ ಅಪ್ಲಿಕೇಶನ್ ಹೆಚ್ಚಿನ ಬಳಕೆದಾರರನ್ನು ಕಳೆದುಕೊಂಡಿದೆ.

ಅಮೆರಿಕಾದ ಟೆಕ್ ಕಂಪನಿ TRG ಡೇಟಾ ಸೆಂಟರ್ ವರದಿಯ ಪ್ರಕಾರ, Meta ಅಡಿಯಲ್ಲಿ ಮೆಟಾದ ಥ್ರೆಡ್ಸ್ ಅಪ್ಲಿಕೇಶನ್ ಲಭ್ಯವಾದ ಒಂದೇ ದಿನದಲ್ಲಿ 100 ಮಿಲಿಯನ್ ಬಳಕೆದಾರರನ್ನು ಆಕರ್ಷಿಸಿದೆ. ಆದರೆ ಮುಂದಿನ ಐದು ದಿನಗಳಲ್ಲಿ, ಇದು ಆಶ್ಚರ್ಯಕರ ರೀತಿಯಲ್ಲಿ ಶೇ. 80 ಪ್ರತಿಶತ ಬಳಕೆದಾರರನ್ನು ಕಳೆದುಕೊಂಡಿತು.

ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಅನೇಕ ಅದ್ಭುತ ಫೋಟೋಗಳು, ರೀಲ್‌ಗಳು ಮತ್ತು ವೀಡಿಯೊಗಳನ್ನು ಒಳಗೊಂಡಿದೆ. ಹೀಗಿದ್ದರೂ ಇನ್‌ಸ್ಟಾಗ್ರಾಮ್ ಆಪ್ ಅನ್ನು ಹತ್ತು ಲಕ್ಷಕ್ಕೂ ಹೆಚ್ಚು ಬಳಕೆದಾರರು ಡಿಲೀಟ್ ಮಾಡಿದ್ದಾರೆ.
Snapchat ಅಪ್ಲಿಕೇಶನ್ ಅನ್ನು ಒಂದು ಲಕ್ಷಕ್ಕೂ ಹೆಚ್ಚು ಬಳಕೆದಾರರು delete ಮಾಡಿದ್ದಾರೆ. ನಂತರದ ಸ್ಥಾನದಲ್ಲಿ twitter (ಈಗ X), Telegram, Facebook, Tik Tok, YouTube, WhatsApp, WeChat ಇತ್ಯಾದಿ ಆ್ಯಪ್‌ಗಳಿವೆ.

ಆದರೆ 49 ಸಾವಿರ ಮಂದಿ ಫೇಸ್ ಬುಕ್ ಡಿಲೀಟ್ ಮಾಡಿದ್ದಾರೆ. ವರದಿಗಳ ಪ್ರಕಾರ 4,950 ಮಂದಿ ವಾಟ್ಸಾಪ್ ಅನ್ನು ಡಿಲೀಟ್ ಮಾಡಿದ್ದಾರೆ. ಇದು ಮಾತ್ರವಲ್ಲದೆ ಇತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ವರ್ಷಪೂರ್ತಿ ಬಳಕೆದಾರರನ್ನು ಆಕರ್ಷಿಸಲು ಹೆಣಗಾಡುತ್ತಿವೆ.

ಈ ಸಮೀಕ್ಷೆಯನ್ನು ಹೇಗೆ ಮಾಡಲಾಗುತ್ತದೆ..
ಸ್ಟ್ಯಾಟಿಸ್ಟಾ ಅವರ ಲೆಕ್ಕಾಚಾರದ ಪ್ರಕಾರ, ಅವರು 9 ಜನಪ್ರಿಯ ಸಾಮಾಜಿಕ ಮಾಧ್ಯಮ ನೆಟ್ವರ್ಕ್ಗಳಲ್ಲಿ ಸಂಶೋಧನೆ ನಡೆಸುತ್ತಾರೆ. ಕೆಲವು ದೇಶಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ದೇಶಗಳಲ್ಲಿ ಆ ಅಪ್ಲಿಕೇಶನ್ ಗಳನ್ನು ಬಳಸುತ್ತಾರೆ. ನಂತರ ಅವರು ಕಳೆದ 12 ತಿಂಗಳೊಳಗೆ ‘ಖಾತೆಯನ್ನು ಅಳಿಸುವುದು ಹೇಗೆ’ ಎಂದು ಸರ್ಚ್ ಮಾಡುತ್ತಾರೆ. ಇದರ ಆಧಾರದ ಮೇಲೆ ಕಂಪನಿಯು ಆ ವರದಿಯನ್ನು ನೀಡುತ್ತದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment