Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಾರುಖ್‌ ಖಾನ್ ನಟನೆಯ ‘ಡಂಕಿ’ಗೆ ಸಿಕ್ತಿದೆ ಫುಲ್ ಮಾರ್ಕ್ಸ್ : ಹೇಗಿದೆ ಸಿನಿಮಾ..?

---Advertisement---

 

ಇಂದು ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ರಿಲೀಸ್ ಆಗಿದೆ. ಬಾಲಿವುಡ್ ಬಾದ್ ಶಾ ಇದೇ ವರ್ಷ ಅದಾಗಲೇ ಎರಡು ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದಾರೆ. ‘ಜವಾನ್’ ಮತ್ತು ‘ಪಠಾಣ್’ ಸಿನಿಮಾ ಮೂಲಕ. ಸೋಲಿನ ಸುಳಿಯಲ್ಲಿದ್ದ ಶಾರುಖ್ ಖಾನ್ ಗೆ ಒಳ್ಳೆಯ ಬ್ರೇಕ್ ನೀಡಿದ್ದು ಇದೇ ವರ್ಷ. ಇದೀಗ ವರ್ಷದ ಕೊನೆಯಲ್ಲಿ ರಿಲೀಸ್ ಆದ ‘ಡಂಕಿ’ ಕೂಡ ಎಲ್ಲರ ಗಮನ ಸೆಳೆಯುತ್ತಿದೆ.

‘ಡಂಕಿ’ ಸಿನಿಮಾದಲ್ಲಿ ಪಂಜಾಬ್ ಪ್ರಾಂತ್ಯವನ್ನು ಪ್ರಮುಖವಾಗಿ ತೆಗೆದುಕೊಳ್ಳಲಾಗಿದೆ. ಮೂವರು ವ್ಯಕ್ತಿಗಳು ಲಂಡನ್ ಗೆ ಹೋಗಬೇಕೆಂಬ ಆಸೆಯಿಂದ ಇರುತ್ತಾರೆ. ಆದರೆ ಹಲವು ಸಮಸ್ಯೆಗಳು ಅವರಿಗೆ ಇರುತ್ತವೆ. ಆ ಸಮಸ್ಯೆಗಳನ್ನೆಲ್ಲ ಬಗೆಹರಿಸಿ ಶಾರುಖ್ ಖಾನ್, ಅವರನ್ನೆಲ್ಲ ಲಂಡನ್ ಗೆ ಹೇಗೆ ಕಳುಹಿಸುತ್ತಾನೆ ಎಂಬುದೇ ಸಿನಿಮಾ. ಆರಂಭ ಕೊಂಚ ನಿಧಾನವಾಗಿದೆ. ಕಥೆ ತೆರೆದುಕೊಳ್ಳುವುದಕ್ಕೆ ಸಮಯ ಹಿಡಿಯುತ್ತದೆ. ಜೊತೆಗೆ ಕಳ್ಳ ಮಾರ್ಗದ ಮೂಲಕ ಲಂಡನ್‌ಗೆ ತಲುಪುವ ಹಾದಿಯಲ್ಲಿ ಒಂದಷ್ಟು ಲಾಜಿಕ್ ಇಲ್ಲದ ದೃಶ್ಯಗಳಿವೆ.

ರಾಜ್‌ಕುಮಾರ್ ಹಿರಾನಿ, ಅಭಿಜಾತ್ ಜೋಷಿ, ಕನ್ನಿಕಾ ದಿಲ್ಲೋನ್ ಅವರ ಬರವಣಿಗೆ ಸಿನಿಮಾ ಪ್ರಿಯರನ್ನು ಸೆಳೆಯುತ್ತದೆ. ಅಮನ್ ಪಂತ್ ಅವರ ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಕಲಾವಿದರ ನಟನೆ ಎಲ್ಲವೂ ಸೊಗಸಾಗಿದೆ. ಭಾವುಕ ದೃಶ್ಯಗಳು ನಿಜಕ್ಕೂ ಪ್ರೇಕ್ಷಕರ ಕಣ್ಣು ಒದ್ದೆ ಮಾಡುತ್ತವೆ. ಕಥೆಯಲ್ಲಿನ ಟ್ವಿಸ್ಟ್‌ಗಳು ಚೆನ್ನಾಗಿವೆ. ತಾಪ್ಸೀ ಪನ್ನು , ವಿಕ್ರಮ್ ಕೊಚ್ಚರ್, ಅನಿಲ್ ಗ್ರೋವರ್‌ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾದ ಚಿತ್ರಕಥೆಯ ವೇಗ ಹೆಚ್ಚಿಸುವಲ್ಲಿ ವಿಕ್ಕಿ ಕೌಶಲ್‌ ಪಾತ್ರ ಸಹಕಾರಿಯಾಗಿದೆ. ಸಿನಿಮಾ ನೋಡಿದವರು ಶಾರೂಖ್ ಖಾನ್ ಗೆ ಬಹುಪರಾಕ್ ಹಾಕುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment