Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಈ ವಾರ ಬಿಗ್ ಬಾಸ್ ಮನೆಯಿಂದ ಬರ್ತಾ ಯಾರು ಗೊತ್ತಾ..? ಸುದೀಪ್ ಕೊಟ್ಟ ಅವಕಾಶವನ್ನು ಬಳಸಿಕೊಳ್ಳಲಾಗಲಿಲ್ವಾ..?

---Advertisement---

ಬಿಗ್ ಬಾಸ್ ಸೀಸನ್ 10.. ಈ ವಾರವಂತು ಸಾಕಷ್ಟು ಕಠಿಣವಾಗಿತ್ತು. ಬಿಗ್ ಬಾಸ್ ಏನೋ ನಿರೀಕ್ಷೆ ಮಾಡಿ ಕೊಟ್ಟ ಟಾಸ್ಕ್ ಸಂಪೂರ್ಣವಾಗಿ ಬೇರೆ ರೀತಿಯಾಗಿಯೇ ಟರ್ನ್ ಆಗಿತ್ತು. ರಾಕ್ಷಸರು ಹಾಗೂ ಗಂಧರ್ವರು ಅಂತ ಮಾಡಿದ್ದು ಮನರಂಜನೆಯಾಗಿರಬೇಕು ಅಂತ. ಆದರೆ ಮನೆ ದ್ವೇಷವಾಗಿ ಬದಲಾಗಿ ಹೋಗಿತ್ತು.

ಕಳೆದ ವಾರವೇ ಒಬ್ಬರು ಎಲಿಮಿನೇಷನ್ ಆಗಬೇಕಿತ್ತು. ಆದರೆ ಸುದೀಪ್ ಅವರ ಕೃಪಾ ಕಟಾಕ್ಷದಿಂದ ಮನೆಯಿಂದ ಹೊರಗೆ ಬರದೆ ಎಲ್ಲರೂ ಸೇಫ್ ಆಗಿದ್ದರು. ಈ ವಾರಪೂರ್ತಿ ಕ್ಯಾಪ್ಟನ್ ಆದಂತ ಸ್ನೇಹಿತ್ ಗೆ ವಿಶೇಷ ಅಧಿಕಾರವನ್ನೇ ನೀಡಲಾಗಿತ್ತು. ಆದರೆ ಸ್ನೇಹಿತ್, ಆ ವಿಶೇಷ ಅಧಿಕಾರಕ್ಕೂ ನ್ಯಾಯ ಕೊಡಲಿಲ್ಲ, ಸುದೀಪ್ ಅವರ ವಿಶೇಷ ಅವಕಾಶಕ್ಕೂ ನ್ಯಾಯ ಕೊಡಲಿಲ್ಲ.

ಕ್ಯಾಪ್ಟನ್ ಆಗಿ, ವಿಶೇಷ ಅಧಿಕಾರ ಪಡೆದು ಕೆಳ ಮಟ್ಟದ ಆಟವನ್ನೇ ಆಡಿದರು. ನ್ಯಾಯ ಕೊಡುವಾಗ ಒಬ್ಬರ ಪರವಾಗಿ ಕೊಡುವುದಕ್ಕೆ ಶುರು ಮಾಡಿದರು. ಸಮಾನವಾದ ಟೀಂ ಮಾಡಿ ಎಂದರೆ ತಮಗೆ ಇಷ್ಟವಾದ ಟೀಂ ಮಾಡಿದರು. ಇದೆಲ್ಲವನ್ನು ಬಿಗ್ ಬಾಸ್ ಗಮನಿಸಿತ್ತು, ಪ್ರಶ್ನಿಸಿತ್ತು. ತನ್ನದೇ ಸರಿ ಎಂದು ಹೇಳಿದ್ದ ಸ್ನೇಹಿತ್ ನನ್ನು ಸುಮ್ಮನೆ ಬಿಟ್ಟು ಬಿಟ್ಟಿತ್ತು. ಆದರೆ ಕಿಚ್ಚ ತನ್ನ ಪಂಚಾಯ್ತಿಯಲ್ಲಿ ಎಲ್ಲರ ತಪ್ಪನ್ನು ಸರಿ ಮಾಡುವ ಪ್ರಯತ್ನ ಮಾಡಿದರು. ಆದರೆ ಸ್ನೇಹಿತ್ ಆಟಕ್ಕಂತೂ ಬೇಸರವನ್ನು ವ್ಯಕ್ತಪಡಿಸಿದರು. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಮನೆಯಿಂದ ಹೊರಗೆ ಬರುತ್ತಿರುವುದು ಸ್ನೇಹಿತ್ ಎಂದೇ ಮೂಲಗಳು ತಿಳಿಸುತ್ತಿವೆ. ಸಿರಿ ಹಾಗೂ ಸ್ನೇಹಿತ್ ಬಾಟಮ್ ನಲ್ಲಿ ಕುಳಿತಿದ್ದು, ಸ್ಮೇಹಿತ್ ಬಿಗ್ ಬಾಸ್ ಆಟ ಮುಗಿಸಿದ್ದಾರೆ ಎನ್ನಲಾಗುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment