Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿವೃತ್ತ ಪಿ.ಎಸ್.ಐ. ನಾಗರಾಜ್ ಅವರಿಗೆ ಭಗವಾನ್ ಬುದ್ಧ ನ್ಯಾಷನಲ್ ಫೆಲೋಷಿಪ್ ಪ್ರಶಸ್ತಿ : ಭೀಮಾರೆಡ್ಡಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ನವೆಂಬರ್.25 :  ನಿವೃತ್ತ ಪಿ.ಎಸ್.ಐ. ಪಿ.ನಾಗರಾಜ್ ರವರಿಗೆ ಭರತ್ಯ ದಲ್ ಸತ್ಯ ಆಕಾಡೆಮಿ ವತಿಯಿಂದ 2023ರ ವರ್ಷದ ಭಗವಾನ್ ಬುದ್ದ ನ್ಯಾಷನಲ್ ಫೆಲೋಷಿಪ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ನಿವೃತ್ತ ಪೊಲೀಸ್ ನೌಕರರ ಸಂಘದ ಆಧ್ಯಕ್ಷರಾದ ಭೀಮಾರೆಡ್ಡಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕರೋನ ಸಮಯದಲ್ಲಿ ಫ್ರಂಟ್ ವಾರಿಯಸ್ಸ್ ಆಗಿ ಕೆಲಸ ಮಾಡಿದ್ಧಾರೆ. ಕರೋನ ಬಂದವರಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವುದು, ಔಷಧಿಯನ್ನು ನೀಡುವುದು ಆಹಾರವನ್ನು ಕೂಡುವುದು, ಕರೋನದಿಂದ ವೃತಪಟ್ಟವರ ಅಂತ್ಯಕ್ರಿಯೆಯನ್ನು ಅವರ ಜಾತಿ ಧರ್ಮಗಳಿಗೆ ಅನುಗುಣವಾಗಿ ಅಂತ್ಯಕ್ರಿಯೆಯನ್ನು ಮಾಡಿದ್ಧಾರೆ.

ಇವರು ಸೇವೆಯಿಂದ ನಿವೃತ್ತಿಯಾದ ನಂತರೂ ಸಹಾ ಸುಮ್ಮನಿರದೆ ನಮ್ಮ ನಿವೃತ್ತ ಪೋಲಿಸ್ ನೌಕರರ ಸಂಘದಲ್ಲಿ ಸದಸ್ಯರಾಗುವುದರ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಎಂದರು.

ನಾಗರಾಜ್ ರವರು ವಿವಿಧ ಸಂಘಗಳಿಗೆ ಸದಸ್ಯರಾಗುವುದರ ಮೂಲಕ ಸಮಾಜ ಸೇವೆಗೆ ಮುಂದಾಗಿದ್ದಾರೆ. ಕೆಲಸದ ಸಮಯದಲ್ಲಿಯೂ ಸಹಾ ಉತ್ತಮವಾಗಿ ಕೆಲಸವನ್ನು ಮಾಡುವುದರ ಮೂಲಕ ಒಳ್ಳೆಯ ಹೆಸರನ್ನು ಪಡೆದಿದ್ದರು.

ಆ ಸಮಯದಲ್ಲಿ ಜಿಲ್ಲಾಡಳಿತ, ಕರ್ನಾಟಕ ಸರ್ಕಾರದವತಿಯಿಂದ ಇವರ ಸೇವೆಯನ್ನು ಗುರುತಿಸಿ ಸನ್ಮಾನವನ್ನು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ನವದೆಹಲಿಯ ಭರತ್ಯ ದಲ್ ಸತ್ಯ ಆಕಾಡೆಮಿಯವತಿಯಿಂದ 2023ರ ವರ್ಷದ ಭಗವಾನ್ ಬುದ್ದ ನ್ಯಾಷನಲ್ ಫೆಲೋಷಿಪ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಡಿಸೆಂಬರ್ 10 ಮತ್ತು 11 ರಂದು ನಡೆಯುವ ನ್ಯಾಷನಲ್ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ಉಪ ರಾಷ್ಟ್ರಪತಿಗಳು ಪ್ರಧಾನ ಮಾಡಲಿದ್ದಾರೆ ಎಂದರು.

ನಿವೃತ್ತ ಪಿ.ಎಸ್.ಐ. ಪಿ.ನಾಗರಾಜ್ ಮಾತನಾಡಿ ನನಗೆ ಈ ಪ್ರಶಸ್ತಿ ಬಂದಿರುವುದು ಸಂತೋಷವಾಗಿದೆ. ನನ್ನ ಕಾರ್ಯವನ್ನು ಮೆಚ್ಚಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ ಮಂದಿನ ದಿನಮಾನದಲ್ಲಿಯೂ ಸಹಾ ಸಮಾಜ ಸೇವೆಯನ್ನು ಮಾಡುವುದರ ಮೂಲಕ ನನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತೇನೆ ಎಂದರು.

ಗೋಷ್ಠಿಯಲ್ಲಿ ಹನುಂತಪ್ಪ, ರಾಜಪ್ಪ, ಸೈಯದ್ ಇಸಾಕ್, ಯೂಸೆಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...