Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜಾನಪದ ಸಂಗೀತ ಕರ್ನಾಟಕದ ಶ್ರೀಮಂತ ಕಲೆ : ದಳವಾಯಿ ಅಭಿಮತ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ : ಜನರು ಸ್ವತಃ ಹಾಡು ಕಟ್ಟಿ ಬಾಯಿಂದ ಬಾಯಿಗೆ ಹರಡುತ್ತಾ ಪ್ರಸಿದ್ದಿಯಾದ ಜಾನಪದ ಗೀತೆಗಳು ನಮ್ಮ ಕರ್ನಾಟಕದ ಶ್ರೀಮಂತ ಕಲೆಗಳಲ್ಲಿ ಒಂದಾಗಿದೆ ಎಂದು ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎ.ದಳವಾಯಿ ಹೇಳಿದರು.

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಲ್ಲೂರ ಹಳ್ಳಿಯ  ಶಿವಕುಮಾರ್ ಟಿ ತಂಡದ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಸಂಗೀತ ಕಾರ್ಯಕ್ರಮವನ್ನು ಕೀ ಬೋರ್ಡ್ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂಸ್ಕೃತಿ ಆಚಾರಗಳಿಗೆ ಅನುಗುಣವಾಗಿ ಪ್ರತಿ ಸಂದರ್ಭಕ್ಕೂ ಹಾಡು ಕಟ್ಟಿ ಮೆರುಗನ್ನು ನೀಡಿರುವ ಮಹಾನ್ ಕಲಾವಿದರನ್ನು ಸ್ಮರಿಸಿ ಜಾನಪದ ಗೀತೆಗಳ ಸಂಗೀತ ನಿನಾದಗಳನ್ನು,ಸಾಹಿತ್ಯಗಳನ್ನು  ಅಳಿಯದಂತೆ ನಾವು ಉಳಿಸಬೇಕಿದೆ ಎಂದು ಹೇಳಿದರು.

ಕಲಾ ತಂಡದ ನಾಯಕ ಶಿವಕುಮಾರ್ ಟಿ. ಮಾತನಾಡಿ ಸತತವಾಗಿ 10 ವರ್ಷಗಳಿಂದ ಕಲಾವಿದನಾಗಿ ಕಲಾ ಸೇವೆಯನ್ನು ಮಾಡಲು ನನಗೆ ಮುಖ್ಯವಾದ ಪ್ರೇರೇಪಣೆ ನೀಡಿದ್ದು ನನ್ನ ಗುರುಗಳಾದ ಡಿ. ರಾಜಣ್ಣ ಇವರ ಸೂಕ್ತ ಮಾರ್ಗದರ್ಶನದಿಂದ ಇಂದು ನಾನು ವಿಷ್ಣು ಸಾಂಸ್ಕೃತಿಕ ಕಲಾ ಸಂಘವನ್ನು ಕಟ್ಟಿಕೊಂಡು ಕಲಾ ಸೇವೆಯನ್ನು ಮಾಡಲು ನೆರವಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ ಎಸ್.ಟಿ ಇವರ ಅನುಮತಿಯಿಂದಾಗಿ ಇಂದು ಜಾನಪದ ಸಂಗೀತ ಕಾರ್ಯಕ್ರಮವನ್ನು ಮಾಡುವ ಸೌಭಾಗ್ಯ ನಮ್ಮ ಕಲಾ ತಂಡಕ್ಕೆ ಲಭಿಸಿದೆ,ಇದೆ ತರ ನಮ್ಮ ತಂಡದಿಂದ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಹೋಗಲು  ಜನರ  ಪ್ರೋತ್ಸಾಹ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಶಿಕ್ಷಕ ವೆಂಕಟೇಶ್ ಹೆಚ್.ಡಿ ಇವರು ಮಾತನಾಡಿ, ಚಲನ ಚಿತ್ರ ಗೀತೆಗಳ ಮಧ್ಯೆ ಜನಪದ ಗೀತೆಗಳನ್ನು ಹಾಡುವ ಪರಿಪಾಟಲು ಕಡಿಮೆಯಾಗುತ್ತಿದೆ, ಜನಪದ ಗೀತೆಗಳ ಸಾಹಿತ್ಯ ಹಾಗೂ ಅವುಗಳ ಮಹತ್ವ ಪ್ರತಿಯೊಬ್ಬ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಸಾಂದರ್ಭಿಕ ಹಾಡುಗಳಾಗಿವೆ.ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಹಾಡುವ ಕಲೆಯನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಕಲಾವಿದರಾಗಿ ಹೊರ ಹೊಮ್ಮುವ ಅವಕಾಶಗಳಿವೆ ಎಂದು ತಿಳಿಸಿದರು.

ಕಲಾವಿದ ರಾಜಣ್ಣ ಮಾತನಾಡಿ ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ, ಯಾರಿಗೆ ನಿರಂತರ ಬದ್ಧತೆ ಹಾಗೂ ಕಲಿಯುವ ಹಂಬಲ ಹೊಂದಿ ಅದರಂತೆ ಸತತ ಪ್ರಯತ್ನಗಳನ್ನು ಮಾಡುವರೋ ಅವರು ನಿಜವಾಗಿ ಉತ್ತಮ ಕಲಾವಿದರಗುತ್ತಾರೆ, ಆದ್ದರಿಂದ ಕಲೆಗೆ ಪ್ರೋತ್ಸಾಹ ನೀಡುವ ಮನಸ್ಸುಳ್ಳ ವ್ಯಕ್ತಿಗಳ ಕೊರತೆಯಿದೆ. ಇದರ ಪರಿಣಾಮ ಕಲಾವಿದರು ಸೃಷ್ಟಿ
ಯಾಗುವ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಬಹುಮುಖ ಪ್ರತಿಭೆಯ ಟಿ.ಶಿವಕುಮಾರ್ ಬಹಳ ವರ್ಷಗಳಿಂದ ಕಲಾವಿದನಾಗಿ ತಂಡವನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಕಲಾ ಸೇವೆಯನ್ನು ಮಾಡುತ್ತಾ ಸಾಗುತ್ತಿರುವ ಉದಯೋನ್ಮುಖ ಪ್ರತಿಭೆ ಎಂದು ಗಾಯಕ ಶಿಕ್ಷಕರಾದ ಕೆ.ಟಿ.ನಾಗಭೂಷಣ್ ಹೇಳಿದರು.

ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದ ಗಾಯಕರಾದ ಶಿವಕುಮಾರ್ಟಿ ,ಪ್ರಿಯಾಂಕ, ರಾಜಣ್ಣ,ತಿಪ್ಪೇಸ್ವಾಮಿ, ನಾಗಭೂಷಣ್, ನೀಲಪ್ಪ ತೂಲಹಳ್ಳಿ,ಇವರು ವಿವಿಧ ಜಾನಪದ ಗೀತೆಗಳನ್ನು ಹಾಡುವುದರ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷೆ ಮಂಜುಳಾ ಬಸವರಾಜ್, ಎಸ್ ಡಿ ಎಂ ಸಿ ಅಧ್ಯಕ್ಷ ಜಯಣ್ಣ, ಕಲಾ ತಂಡದ ನಾಯಕ ಶಿವಕುಮಾರ್ ಟಿ, ರಿದಂ ಪ್ಯಾಡ್ ವಾದಕ ಎಂ ವಿ ಬದ್ರಿ, ಕೀ ಬೋರ್ಡ್ ವಾದಕ ರಾಜಣ್ಣ,ಗಾಯಕ ಪವನ್ ತಳಕು ,ಶಿಕ್ಷಕರಾದ  ವೀರಭದ್ರಪ್ಪ ಡಿ.ಕೆ,ರಂಜಿತಾ,ಮಹಾಂತೇಶ್, ಸೌಮ್ಯ , ಓಬಕ್ಕ,ಪ್ರಸನ್ನ ಕುಮಾರ್, ಬಡ ಮ್ಯಾಕಲಯ್ಯ, ಶಾಲಾ ವಿದ್ಯಾರ್ಥಿಗಳು,ಊರಿನ ಗ್ರಾಮಸ್ಥರು ಹಾಗೂ ಮತ್ತಿತರು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!