Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ | ಬಸ್ ನಿಲ್ದಾಣದ ಸಮೀಪ ಹಾಡಹಗಲೇ ಕೊಲೆಗೆ ಯತ್ನ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ನವೆಂಬರ್.22 : ನಗರದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಸಮೀಪ  ಇಂದು ಸಮಯ 11 ಗಂಟೆ ಸುಮಾರಿಗೆ ಬಸ್ ಇಳಿದು ಬರುವ ಆಶಾ ಎಂಬುವವರಿಗೆ ಪತಿ ಶಿವಕುಮಾರ್  ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.

ತಾಲೂಕಿನ ಚೆನ್ನಮ್ಮನಾಗತಿಹಳ್ಳಿ ಗ್ರಾಮದ ಕುಮಾರ್(30) ವರ್ಷ ಎಂಬುವವರು ಕಳೆದ ಮೂರು ವರ್ಷದ ಹಿಂದೆ ವಿವಾಹವಾಗಿದ್ದರು. ಆದರೆ ಎರಡು ವರ್ಷದ ದಾಂಪತ್ಯ ಜೀವನ ನಡೆಸಿದ ನಂತರ ದಾಂಪತ್ಯದಲ್ಲಿ ಒಡಕು ಮೂಡಿ  ಹೆಂಡತಿ ಆಶಾ(25) ವಿವಾಹ ವಿಚ್ಚೇದನ ಕ್ಕೆ ಕೋರ್ಟ್ ಮೊರೆ ಹೊಗಿದ್ದರು ಎನ್ನಲಾಗಿದೆ.

ಆದರೆ ಇಂದು ಚಳ್ಳಕೆರೆ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ  ಸಂದರ್ಭದಲ್ಲಿ ಮುಂಜಾನೆ ಬಸ್ ನಿಲ್ದಾಣದಲ್ಲಿ  ಕಾದು‌ ಕುಳಿತಿದ್ದ  ಪತಿ ಶಿವಕುಮಾರ್ ನಿಂದ ಈ ಕೃತ್ಯ ನಡೆದಿದೆ.

ಇನ್ನೂ ಮಚ್ಚಿನಿಂದ ಆಶಾ ತಲೆಗೆ ಹಾಗೂ ಕೈಗೆ  ಗಾಯಗಳಾಗಿದ್ದು ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿದ್ದಾಳೆ. ಹಲ್ಲೆ ಒಳಗಾದ ಮಹಿಳೆಗೆ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯ ನಂತರ, ಹೆಚ್ಚಿನ ಚಿಕಿತ್ಸೆಗೆ‌ ಚಿತ್ರದುರ್ಗ ಜಿಲ್ಲಾಆಸ್ವತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿ ವೈ ಎಸ್ ಪಿ ಟಿಬಿ  ರಾಜಣ್ಣ ಭೇಟಿ ನೀಡಿ ಪರಿಶೀಲದ ನಡೆಸಿದ್ದಾರೆ.

ಕೊಲೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ಪಡೆಯಲಾಗಿದೆ

ಸಾರ್ವಜನಿಕರು ಶಿವಕುಮಾರನಿಗೆ ಧರ್ಮದೇಟು ನೀಡಿ ಪೋಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಯನ್ನು ಚಳ್ಳಕೆರೆ ಪೋಲಿಸರು ಕ್ಷಣ ವಶಕ್ಕೆ ಪಡೆದಿದ್ದಾರೆ.

ನಗರದಲ್ಲಿ ಈ ಘಟನೆಯಿಂದ ಭಯ ಭೀತರಾದ ಸಾರ್ವಜನಿಕರು ನೂರಾರು ಜನರು ಘಟನೆ ಸ್ಥಳದಲ್ಲಿ ನೆರೆದಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment