Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಪ್ಪು ಅಭಿಮಾನಿಗೆ ಆಸರೆಯಾದ ಅಶ್ವಿನಿ ಪುನೀತ್ ರಾಜ್‍ಕುಮಾರ್

---Advertisement---

ಬೆಂಗಳೂರು: ಅಪ್ಪು ಬದುಕಿದ್ದಾಗ ಮಾಡಿದ ಸಹಾಯಗಳು ಕಡಿಮೆ ಏನು ಇಲ್ಲ. ಅಭಿಮಾನಿಗಳು ಅನಾರೋಗ್ಯ ತಪ್ಪಿದಾಗ ಅವರ ಆರೋಗ್ಯಕ್ಕಾಗಿ ಹಣ ನೀಡುವುದು, ಶಿಕ್ಷಣ ಕೊರತೆ ಎದುರಿಸುವ ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ಕಷ್ಟ ಎಂದು ಯಾರೇ ಹೋದರು ಇಲ್ಲ ಎನ್ನದ ದೇವತಾ ಮನುಷ್ಯ ಅವರು. ಬದುಕಿರುವ ತನಕ ಬಲಗೈನಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗದಂತೆ ಕಾಪಾಡಿಕೊಂಡಿದ್ದರು. ನಿಧನರಾದಾಗ ಸೇರಿದ ಜನರಿಂದಾನೇ ಅವರ ಸಮಾಜ ಸೇವೆ ಗೊತ್ತಾಗಿದ್ದು. ಇದೀಗ ಅಪ್ಪು ಅವರಂತೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಆ ಸಮಾಜ ಸೇವೆ ಮುಂದುವರೆಸಿದ್ದಾರೆ.

 

ಅಪ್ಪುರಂತೆ ಅಶ್ವಿನಿ ಅವರು ಕೂಡ ಸಹಾಯ ಮಾಡುತ್ತಿದ್ದಾರೆ. ಅಪ್ಪು ಅಭಿಮಾನಿಗೆ ಕ್ಯಾನ್ಸರ್ ಚಿಕಿತ್ಸೆಯ ಅಗತ್ಯವಿದೆ. ಆ ಪುಟ್ಟ ಬಾಲಕನ ಚಿಕಿತ್ಸೆಯ ಸಹಾಯಕ್ಕೆ ದೊಡ್ಮನೆ ಸೊಸೆ ನಿಂತಿದ್ದಾರೆ. ಅಪ್ಪು ಅಭಿಮಾನಿ ಆ ಪುಟ್ಟ ಬಾಲಕನಿಗೆ ಕ್ಯಾನ್ಸರ್ ಇದೆ. ಅಪ್ಪು ಮನೆಗೆ ಬಂದ ಬಾಲಕನಿಗೆ ಅಶ್ವಿನಿ ಪುನಿತ್ ರಾಜ್‍ಕುಮಾರ್ ಧೈರ್ಯ ತುಂಬಿದ್ದಾರೆ. ಪಕ್ಕದಲ್ಲಿ ಕೂರಿಸಿಕೊಂಡು, ನಗು ಮೂಡಿಸಿದ್ದಾರೆ.

ಬಾಲಕ ಕೂಡ ಅಪ್ಪು ಫೋಟೋ ಮುಂದೆ ಕೂತು ಹಾಗೂ ಕಾರಿನ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾನೆ. ಅಪ್ಪು ಅಭಿಮಾನಿಯಾಗಿರುವ ಈ ಪುಟ್ಟ ಬಾಲಕನಿಗೆ ಆದಷ್ಟು ಬೇಗ ಕ್ಯಾನ್ಸರ್ ರೋಗ ವಾಸಿಯಾಗಲಿ ಎಂದೇ ಪವರ್ ಸ್ಟಾರ್ ಫ್ಯಾನ್ಸ್ ಕೂಡ ಹಾರೈಸಿದ್ದಾರೆ. ಅಪ್ಪುಗೆ ಮಕ್ಕಳೆಂದರೆ ತುಂಬಾ ಉಷ್ಟವಿತ್ತು. ಮಕ್ಕಳಿಗೂ ಅಷ್ಟೇ ಪವರ್ ಸ್ಟಾರ್ ಅಂದ್ರೇನೆ ಬಲು ಪ್ರೀತಿ. ಈಗಲೂ ಮಕ್ಕಳಿಗೆ ಯಾರಿಷ್ಟ ಅಂದ್ರೆ ಅಪ್ಪು ಹೆಸರನ್ನೇ ಹೆಚ್ಚಾಗಿ ಹೇಳುತ್ತಾರೆ. ಆದರೆ ವಿಧಿ ಬೇಗನೆ ಕರೆದುಕೊಂಡು ಬಿಟ್ಟಿದೆ. ಅಪ್ಪು ದೈಹಿಕವಾಗಿ ಅಗಲಿ ಎರಡು ವರ್ಷವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment