Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರತಾಪ್ ಸೇರಿದಂತೆ ಎಲ್ಲರೂ ಸೇಫ್.. ಹೊರಗೆ ಬರ್ತಾರ ಸ್ನೇಕ್ ಶ್ಯಾಮ್..?

---Advertisement---

 

ಬಿಗ್ ಬಾಸ್ ಸೀಸನ್ 10 ಶುರುವಾಗಿ ಒಂದು ವಾರ ಕಳೆದಿದೆ. ಮೊದಲ ಪಂಚಾಯ್ತಿ ಶುರುವಾಗಿದೆ. ಎಲ್ಲಾ ಸೀಸನ್ ನಲ್ಲೂ ಕಿಚ್ಚನ ಪಂಚಾಯ್ತಿಗೆ ಕುತೂಹಲದಿಂದಾನೇ ಕಾಯುತ್ತಾರೆ. ಆದರೆ ಈ ಸೀಸನ್ ನಲ್ಲಿ ಆ ಕಾಯುವಿಕೆ ಹೆಚ್ಚಾಗಿತ್ತು. ಯಾಕಂದ್ರೆ ಒಳಗಿದ್ದ ಜನ ಅಷ್ಟು ಕೆಳಮಟ್ಟದಲ್ಲಿ ನಡೆದುಕೊಂಡಿದ್ದರು. ಸಿಕ್ಕ ಪ್ರತಾಪನನ್ನು ಹಿಡಿದು ಹಿಡಿದು ಜಗ್ಗುತ್ತಿದ್ದರು. ಕಡೆಗೂ ಪಾಪ ಆ ಪ್ರತಾಪನ ತಾಳ್ಮೆಯ ಕಟ್ಟೆ ಒಡೆದು ಅಳುವಿಗೂ ಕಾರಣವಾಯ್ತು. ಈ ಎಲ್ಲಾ ಬೆಳವಣಿಗೆಯಿಂದ ಬಿಗ್ ಬಾಸ್ ನೋಡುತ್ತಿದ್ದವರು ಆದಷ್ಟು ಬೇಗ ಕಿಚ್ಚನ ವಾರದ ಕಥೆ ಬರಲಿ ಎಂದೇ ಕಾದಿದ್ದಾರೆ.

ಈಗಾಗಲೇ ನಾಮಿನೇಷನ್ ಲೀಸ್ಟ್ ನಲ್ಲಿ ಎಂಟು ಜನ ಇದ್ದರು. ಆ ಎಂಟು ಜನರಲ್ಲಿ ಮೊದಲ ದಿನ ಅಂದ್ರೆ ಶನಿವಾರ ಮೂವರನ್ನು ಸೇವ್ ಮಾಡಲಾಗಿದೆ. ಭಾನುವಾರ ಇನ್ನುಳಿದ ನಾಲ್ವರನ್ನು ಸೇವ್ ಮಾಡಿ, ಒಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆ. ಒಂದೇ ವಾರಕ್ಕೆ ಮನೆಯಲ್ಲಿರುವ ಒಬ್ಬರು ತನ್ನ ಆಟವನ್ನು ಮುಗಿಸಲಿದ್ದಾರೆ.

ಡ್ರೋನ್ ಪ್ರತಾಪ್ ಈಗಾಗಲೇ ಎಲ್ಲರ ಜೊತೆಗೂ ಬೆರೆಯುತ್ತಿದ್ದಾರೆ. ಕಿಚ್ಚನ ಕ್ಲಾಸ್ ನಂತರ ಮನೆಯವರೆಲ್ಲ ಸರಿಯಾಗಲಿದ್ದಾರೆ ಎಂಬ ನಂಬಿಕೆ ಎಲ್ಲರಿಗೂ ಇದೆ. ಈ ಬೆನ್ನಲ್ಲೇ ಮನೆಯಿಂದ ಹೊರ ಬರುವುದು ಯಾರು ಎಂಬ ಪ್ರಶ್ನೆಗೆ ಮೂಲಗಳ ಪ್ರಕಾರ ಸ್ನೇಕ್ ಶ್ಯಾಮ್ ಎನ್ನಲಾಗ್ತಾ ಇದೆ. ಸ್ನೇಕ್ ಶ್ಯಾಮ್, ವಯಸ್ಸಿನ ವಿಚಾರ ಅಷ್ಟಾಗಿ ಬಾರದೆ ಹೋದರು, ಆಟಗಳಲ್ಲಿ ಅವರ ಬೆಂಬಲ ಸಿಗುತ್ತಿಲ್ಲ ಎಂಬುದು ಮನೆಯವರ ಮಾತು. ಹೀಗಾಗಿ ಸ್ನೇಕ್ ಶ್ಯಾಮ್ ಹೊರಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಸಂಡೆ ವಿತ್ ಸುದೀಪದಲ್ಲಿ ಗೊತ್ತಾಗಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಟೈಕ್ವಾಂಡೋ ಸ್ಪರ್ಧೆಯಲ್ಲಿ ವಿದ್ಯಾ ವಿಕಾಸ ಅಕಾಡೆಮಿ ವಿದ್ಯಾರ್ಥಿನಿಯರ ಮಿಂಚು : ಚಿನ್ನ ಗೆದ್ದು ರಾಜ್ಯ ಮಟ್ಟಕ್ಕೆ ಹಾಸಿನಿ ಗರಪಟ್ಟಿ ಎ, ಸಾನ್ವಿ ಆಯ್ಕೆ

ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಹೆಚ್.ಕೆ. ಪಾಟೀಲ್ ಖಡಕ್ ಎಚ್ಚರಿಕೆ

ಆರ್ಯವೈಶ್ಯ ಸಮುದಾಯದ ಅಭಿವೃದ್ಧಿಗೆ ನಿಗಮದಿಂದ ಹಲವು ಯೋಜನೆ : ಕೆ.ವಿ.ರಾಮ್ ಪ್ರಸಾದ್ ಮಾಹಿತಿ

ಚಿತ್ರದುರ್ಗ: ಪ್ರಸನ್ನ ಗಣಪತಿ ಪೂಜಾ ಮಹೋತ್ಸವದಲ್ಲಿ ರಿಚರ್ಡ್ ಲೂಯಿಸ್ ತಂಡದಿಂದ ನಗೆ ಹಬ್ಬ; ಹಾಸ್ಯದ ಹೊಳೆಯಲ್ಲಿ ತೇಲಾಡಿದ ಜನತೆ

ಸಮಾಜ ಸೇವಕ ಜಿ. ಎಂ. ಲವಕುಮಾರ್ ಗೆ ಗೌರವ ಡಾಕ್ಟರೇಟ್ ಗರಿ: ಭೀಮಸಮುದ್ರದಲ್ಲಿ ಸ್ನೇಹಿತರು, ಅಭಿಮಾನಿಗಳಿಂದ ಶುಭ ಹಾರೈಕೆ

ಸಮಾಜ ಸೇವಕ ಜಿ. ಎಂ. ಲವಕುಮಾರ್ ಅವರಿಗೆ ಗೌರವ ಡಾಕ್ಟರೇಟ್: ಹುಟ್ಟೂರು ಚಿತ್ರಹಳ್ಳಿಯಲ್ಲಿ ಅದ್ಧೂರಿ ಸನ್ಮಾನ

Leave a Comment