Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪತಂಜಲಿ ಯೋಗ ಸಮಿತಿ ಮಲ್ಲಿಕಾರ್ಜುನಪ್ಪನವರಿಗೆ ನುಡಿನಮನ :  ಮಾಜಿ ಸಂಸದ ಜನಾರ್ಧನಸ್ವಾಮಿ ಏನು ಹೇಳಿದರು ?

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಸೆಪ್ಟೆಂಬರ್ .08 : ಪತಂಜಲಿ ಯೋಗ ಸಮಿತಿ ಮೂಲಕ ಎಲ್ಲರಿಗೂ ಯೋಗ ಅಭ್ಯಾಸ ಮಾಡಿಸುತ್ತಿದ್ದ ಮಲ್ಲಿಕಾರ್ಜುನಪ್ಪ ಎಲ್ಲರ ಮನದಲ್ಲಿ ಉಳಿದ್ದಾರೆಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಸ್ಮರಿಸಿದರು.

ಕಳೆದ ತಿಂಗಳು 29 ರಂದು ನಿಧನರಾದ ಮಲ್ಲಿಕಾರ್ಜುನಪ್ಪನವರ ಆತ್ಮ ಶಾಂತಿಗಾಗಿ ಚಳ್ಳಕೆರೆ ಗೇಟ್‍ನಲ್ಲಿರುವ ಎಸ್.ಎಸ್.ಕೆ.ಎಸ್.ಸಮುದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ನುಡಿನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಮಲ್ಲಿಕಾರ್ಜುನಪ್ಪನವರು ಅಂಚೆ ಇಲಾಖೆಯಲ್ಲಿ (Post Office) ಹೆಡ್ ಪೋಸ್ಟ್ ಮಾಸ್ಟರ್ ಆಗಿದ್ದುಕೊಂಡು ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಪ್ರತಿಯೊಬ್ಬರು ಯೋಗ ಮಾಡಿ ಆರೋಗ್ಯವಂತರಾಗಿರಬೇಕೆಂಬ ಸಂದೇಶವನ್ನು ನೀಡುವ ಮೂಲಕ ಮನೆ ಮಾತಾಗಿದ್ದಾರೆ. ಹುಟ್ಟುವುದು ಗೊತ್ತಾಗುತ್ತದೆ. ಆದರೆ ಮರಣ ಯಾರಿಗೂ ಗೊತ್ತಾಗುವುದಿಲ್ಲ. ಮಲ್ಲಿಕಾರ್ಜುನಪ್ಪನವರು ಇದ್ದಕ್ಕಿಂದಂತೆ ಎಲ್ಲರನ್ನು ಬಿಟ್ಟು ಅಗಲಿದ್ದಾರೆ. ಆದರೆ ಅವರ ಚಿಂತನೆಗಳು ಮಾತ್ರ ಜೀವಂತವಾಗಿದೆ. ಮನುಷ್ಯ ಎಷ್ಟು ವರ್ಷ ಬದುಕಿದ್ದ ಎನ್ನುವುದು ಮುಖ್ಯವಲ್ಲ. ಜೀವಿತಾವಧಿಯಲ್ಲಿ ನಾಲ್ಕಾರು ಜನಕ್ಕೆ ಪ್ರಯೋಜನವಾಗುವ ಯಾವ ಕೆಲಸ ಮಾಡಿದ್ದ ಎನ್ನುವುದು ನೆನಪಿನಲ್ಲಿ ಉಳಿಯುತ್ತದೆ. ಜೀವನ ಅಶಾಶ್ವತ ಎಂದು ಹೇಳಿದರು.

ಮಾಜಿ ಸಂಸದ ಜನಾರ್ಧನಸ್ವಾಮಿ (Former MP Janardhana Swamy) ಮಾತನಾಡಿ ಅಂಚೆ ಇಲಾಖೆಯ ನೌಕರಿ ಜೊತೆಯಲ್ಲಿಯೇ ಯೋಗಾಭ್ಯಾಸ ಮಾಡಿಸುತ್ತಿದ್ದ ಮಲ್ಲಿಕಾರ್ಜುನಪ್ಪನವರಿಂದ ಸಾವಿರಾರು ಜನ ಒಂದಲ್ಲ ಒಂದು ರೀತಿಯ ಅನುಕೂಲ ಪಡೆದುಕೊಂಡಿದ್ದಾರೆ. ಸರಳತನವನ್ನು ಮೈಗೂಡಿಸಿಕೊಂಡಿದ್ದ ಅವರಿಗೆ ಶಿಕ್ಷಣವೊಂದೆ ಜೀವನಕ್ಕೆ ಆಧಾರ ಎನ್ನುವುದು ಚನ್ನಾಗಿ ಗೊತ್ತಿದ್ದರಿಂದಲೇ ಇಬ್ಬರು ಮಕ್ಕಳನ್ನು ವಿದ್ಯಾವಂತರನ್ನಾಗಿಸಿದ್ದಾರೆ. ರಸ್ತೆ, ನೀರು, ಚರಂಡಿ, ದೀಪ ಹೀಗೆ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಯಾವಾಗಲೂ ನನ್ನ ಜೊತೆ ಚರ್ಚಿಸುತ್ತಿದ್ದರು. ವೈಯಕ್ತಿಕವಾಗಿ ನನ್ನ ಬಳಿ ಏನನ್ನು ಅವರು ಕೇಳಲಿಲ್ಲ. ಎಲ್ಲರೂ ಒತ್ತಡದ ನಡುವೆ ಜೀವಿಸುತ್ತಿರುವ ಇಂದಿನ ಕಾಲದಲ್ಲಿ ಯೋಗಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದ ಮಲ್ಲಿಕಾರ್ಜುನಪ್ಪನವರು ಎಲ್ಲರಿಗೂ ಯೋಗ ಹೇಳಿಕೊಡುತ್ತ ಸಾರ್ಥಕ ಜೀವನ ನಡೆಸಿದ್ದಾರೆಂದು ನೆನಪಿಸಿಕೊಂಡರು.

ಚಳ್ಳಕೆರೆಯ ಕುದಾಪುರ ಸಮೀಪ ಡಿ.ಆರ್.ಡಿ.ಓ.(DRDO) ಆರಂಭಗೊಂಡಿರುವುದರ ಹಿಂದೆ ಮಲ್ಲಿಕಾರ್ಜುನಪ್ಪನವರ ಕಾಳಜಿಯಿದೆ. ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ಭದ್ರಾಮೇಲ್ದಂಡೆ ಯೋಜನೆ (Upper bhadra project)  ಜಾರಿಗಾಗಿಯೂ ಸಾಕಷ್ಟು ಸಲ ಪ್ರಸ್ತಾಪಿಸಿದ್ದರು. ಮಲ್ಲಿಕಾರ್ಜುನಪ್ಪನವರು ನಮ್ಮನ್ನೆಲ್ಲಾ ಅಗಲಿರಬಹುದು. ಆದರೆ ಅವರ ತತ್ವ ಚಿಂತನೆ, ವಿಚಾರಧಾರೆಗಳು ಇನ್ನು ಜೀವಂತವಾಗಿದೆ ಎಂದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ವೇದಿಕೆಯಲ್ಲಿದ್ದರು. ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಅನೇಕ ಯೋಗಪಟುಗಳು, ಅಂಚೆ ಇಲಾಖೆ ನೌಕರರು, ಮಲ್ಲಿಕಾರ್ಜುನಪ್ಪನವರ ಅಭಿಮಾನಿಗಳು, ಬಂಧು ಬಳಗದವರು ನುಡಿ ನಮನದಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

error: Content is protected !!