Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಟಿ ಅಮೂಲ್ಯ ಮಕ್ಕಳು ಕೃಷ್ಣನ ಅವತಾರದಲ್ಲಿ ಹೇಗಿದ್ದಾರೆ ನೋಡಿ : ಫೋಟೋಸ್ ಇಲ್ಲಿವೆ

---Advertisement---

 

 

ಬೆಂಗಳೂರು: ಇಂದು ಕೃಷ್ಣ ಜನ್ಮಾಷ್ಠಮಿ. ಎಲ್ಲೆಡೆ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತದೆ. ತಾಯಂದಿರು ತಮ್ಮ ಮಕ್ಕಳಿಗೆ ಕೃಷ್ಣ ಮತ್ತು ರಾಧೆಯ ವೇಷಗಳನ್ನು ಹಾಕಿ ಖುಷಿ ಪಡುತ್ತಾರೆ. ಫೋಟೋಗಳನ್ನು ಸೆರೆಹಿಡಿದು ದೊಡ್ಡವರಾದ ಮೇಲೂ ನೋಡಿ ಖುಷಿ ಪಡುತ್ತಾರೆ. ಅದರಂತೆ ಇಂದು ನಟಿ ಅಮೂಲ್ಯ ತಮ್ಮ ಮಕ್ಕಳಿಗೂ ಕೃಷ್ಣನ ವೇಷ ಹಾಕಿದ್ದಾರೆ.

ನಟಿ ಅಮೂಲ್ಯ ತನ್ನ ಇಬ್ಬರು ಮಕ್ಕಳಿಗೆ ಕೃಷ್ಣನ ವೇಷ ಹಾಕಿದ್ದಾರೆ. ತಾವೂ ನೀಲಿ ಬಣ್ಣದ ಸೀರೆಯಲ್ಲಿ ಅಲಂಕಾರಗೊಂಡು ಕಂಗೊಳಿಸುತ್ತಿದ್ದಾರೆ.

ಕೃಷ್ಣನ ವೇಷದಲ್ಲಿ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಅಮ್ಮನಿಂದ ಮಕ್ಕಳಿಗೆ ಮುತ್ತು ನೀಡುವುದು, ಹಸುಗಳನ್ನು ಮುಟ್ಟಿಸುವುದು ಹೀಗೆ ನಾನಾ ರೀತಿಯಲ್ಲಿ ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.

ಕೃಷ್ಣ ಜನ್ಮಾಷ್ಠಮಿಗೆಂದೆ ತಯಾರು ಮಾಡಿರುವ ಜಾಗದಲ್ಲಿ ಈ ರೀತಿ ಫೋಟೋಶೂಟ್ ಮಾಡಿಸಲಾಗಿದೆ. ಬೆಣ್ಣೆ ತಿನ್ನಿಸುವ ರೀತಿಯಲ್ಲಿಯೂ ಫೋಟೋ ಸೆರೆಹಿಡಿಯಲಾಗಿದೆ.

ಇಂದು ನಾಡಿನೆಲ್ಲೆಡೆ ಕೃಷ್ಣ ಜನ್ಮಾಷ್ಠಮಿಯ ಸಡಗರ ಮನೆ ಮಾಡಿದೆ. ಕೃಷ್ಣನ ದೇವಸ್ಥಾನಗಳಲ್ಲೂ ಅಲಂಕಾರ ಮಾಡಲಾಗಿದೆ. ಬೆಣ್ಣೆ ಕೃಷ್ಣ, ಕಳ್ಳ ಕೃಷ್ಣ, ಮುದ್ದು ಕೃಷ್ಣ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಕೃಷ್ಣನನ್ನು ಅದೇ ರೀತಿ ನಾನಾ ಅಲಂಕಾರಗಳಿಂದ ರೆಡಿ ಮಾಡಿರುತ್ತಾರೆ. ಬೆಳಗ್ಗೆಯಿಂದಾನೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಮಕ್ಕಳಿಗೆ ತಾಯಂದಿರು ಕೃಷ್ಣ – ರಾಧಾ ವೇಷ ಹಾಕಿ ಖುಷಿ ಪಡುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...