ವರದಿ : ಸುರೇಶ್ ಪಟ್ಟಣ್
ಮೊ : 98862 95817
ಸುದ್ದಿಒನ್, ಚಿತ್ರದುರ್ಗ,(ಸೆ.02) : ವಿಶ್ವ ಹಿಂದೂ ಪರಿಷದ್ ಬಜರಂಗದಳ ನೇತೃತ್ವದಲ್ಲಿ ನಡೆಯುವ 2023ರ ಹಿಂದೂ ಮಹಾಗಣಪತಿಯ ಮಹೋತ್ಸವದ ಅಂಗವಾಗಿ ಪೆಂಡಲ್ ಪೂಜೆಯನ್ನು ಭಗವಧ್ವಜ ನೆಟ್ಟು,ಗೋ ಪೂಜೆ ಮಾಡುವ ಮುಖಾಂತರ ಪ್ರಾರಂಭಿಸಲಾಗುವುದು.

ಈ ಹಿನ್ನಲೆಯಲ್ಲಿ ದಿನಾಂಕ 3-9-2023 ಭಾನುವಾರ ಬೆಳಿಗ್ಗೆ 9:00.ಘಂಟೆಗೆ ನಗರದ ಪಂಚಚಾರ್ಯ ಕಲ್ಯಾಣ ಮಂಟಪದ ಹತ್ತಿರದ ಜೈನ್ ದಾಮದಲ್ಲಿ ಕಾರ್ಯಕ್ರಮ ನಡೆಯಲಿದೆ. ಸೆ. 18 ರಿಂದ ಆ.7ರವರೆಗೆ ಭಕ್ತಾಧಿಗಳಿಗೆ ಹಿಂದು ಮಹಾ ಗಣಪತಿಯ ದರ್ಶನ ಇರುತ್ತದೆ. ಅಕ್ಟೋಬರ್ 08 ರಂದು ನಗರದಲ್ಲಿ ಗಣಪತಿ ವಿಸರ್ಜನೆಯ ಅಂಗವಾಗಿ ಹಿಂದು ಮಹಾ ಗಣಪತಿಯ ಶೋಭಾಯಾತ್ರೆ ನಡೆಯಲಿದೆ. ಈ ಸಾಲಿನ ಹಿಂದೂ ಮಹಾ ಗಣಪತಿಯ ಸಮಿತಿ ಅಧ್ಯಕ್ಷರಾಗಿ ಹಿರಿಯ ಆರ್.ಎಸ್.ಎಸ್. ಮುಖಂಡರಾದ ಜಿ.ಎಂ.ಸುರೇಶ್ ಆಯ್ಕೆಯಾಗಿದ್ದು ಈ ಸಾಲಿನ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












