Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಬಾಡಿಗಾರ್ಡ್ ನಿರ್ದೇಶಕ ಸಿದ್ಧಿಕ್ ಗೆ ಹೃದಯಾಘಾತ..!

---Advertisement---

 

 

ಇತ್ತಿಚಿನ ದಿನಗಳಲ್ಲಿ ಹೃದಯಾಘಾತ ಅನ್ನೋದು ಹೆಚ್ಚಾಗಿ ಕಾಡುತ್ತಿದೆ. ಇದೀಗ ಮಲಯಾಳಂ ನಿರ್ದೇಶಕ ಸಿದ್ಧಿಕ್ ಇಸ್ಮಾಯಲ್ ಗೂ ಹೃದಯಾಘಾತ ಸಂಭವಿಸಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ಸಿದ್ಧಿಕ್ ಅವರಿಗೆ ಈ ಮೊದಲೇ ನ್ಯುಮೋನಿಯಾ ಸಮಸ್ಯೆ ಕೂಡ ಕಾಡುತ್ತಿತ್ತು. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಹಾರ್ಟ್ ಅಟ್ಯಾಕ್ ಕೂಡ ಆಗಿದೆ. ಹಾರ್ಟ್ ಅಟ್ಯಾಕ್ ಆದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕ್ಸಿಜನ್ ಪೂರೈಕೆ ಮೂಲಕ ಅವರಿಗೆ ಚಿಕಿತ್ಸ ನೀಡಲಾಗುತ್ತಿದೆ.

ಸಿನಿಮಾ ರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದರು. 1986ರಲ್ಲಿ ಮೊದಲ ಬಾರಿಗೆ ಪಪ್ಪನ್ ಪ್ರಿಯಪ್ಪೆಟ್ಟ ಪಪ್ಪನ್ ಎನ್ನುವ ಕಥೆ ಬರೆದು ಮೂವಿ ಮಾಡಿ ಹಿಟ್​ ಪಡೆದುಕೊಂಡರು. 1992ರಲ್ಲಿ ವಿಯೆಟ್ನಾಂ ಕಾಲೋನಿ ಸಿನಿಮಾ ಮಾಡಿದರು. 2011ರಲ್ಲಿ ಬಾಲಿವುಡ್ ಸ್ಟಾರ್​ ಸಲ್ಮಾನ್​ ಖಾನ್​ ಜೊತೆ ಬಾಡಿಗಾರ್ಡ್​ ಮೂವಿ ಮಾಡಿ ಸಕ್ಸಸ್​ ಪಡೆದುಕೊಂಡರು.

Join WhatsApp

Join Now

Join Telegram

Join Now

Leave a Comment