ಬೆಂಗಳೂರು: ಈಗಾಗಲೇ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕರ ನಡುವಿನ ಸಮರ ದಿನೇ ದಿನೇ ಬೆಳೆಯಿತ್ತಲೇ ಇದೆ. ಮೊದಲಿಗೆ ನಿರ್ಮಾಪಕ ಕುಮಾರ್ ಅವರು ಆರೋಪ ಮಾಡಿದ್ದರು. ಬಳಿಕ ರೆಹಮಾನ್ ಅವರು ನನಗು ಹಣ ಕೊಡಬೇಕು ಅಂತ ಬಂದರು. ಇದೆಲ್ಲವನ್ನು ನೋಡಿದ ಕಿಚ್ಚನ ಫ್ಯಾನ್ಸ್ ಗರಂ ಆಗಿದ್ದರು. ಆರೋಪ ಮಾಡಿದ ನಿರ್ಮಾಪಕರಿಗೆ ಧಿಕ್ಕಾರ ಕೂಗಿ ಕ್ಷಮೆ ಕೇಳುವಂತೆ ಹೇಳಿದರು. ಇದೀಗ ಸುದೀಪ್ ಅವರ ಆಪ್ತ ಜಾಜ್ ಮಂಜು ಮತ್ತೆ ಬೇಸರ ಹೊರ ಹಾಕಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾದಿಂದ ನನಗೆ ಯಾವುದೇ ನಷ್ಟವಾಗಿಲ್ಲ. ಯಾವುದೇ ಸಂಭಾವನೆಯನ್ನೇ ಕಿಚ್ಚ ಸುದೀಪ್ ಅವರು ಸ್ನೇಹಕ್ಕೋಸ್ಕರ ಮಾಡಿದ್ದಾರೆ. ಸಾವಿರಾರು ಸಲ ಕಾಲ್ ಮಾಡಿದರು ರಿಸೀವ್ ಮಾಡದ ನಾನು ಅವರನ್ನೇ ಹುಡುಕಿಕೊಂಡು ಹೋಗಿ, ಹೀಗೆ ನಷ್ಟ ಆಯ್ತು ಅಂತ ಹೇಳಿದ್ದೀನಾ..? ಅವರಿಗೆ ಕರೆ ಮಾಡಿ ಕಷ್ಟ ಹೇಳಿಕೊಳ್ಳಲು ನನ್ನ ಮತ್ತು ರೆಹಮಾನ್ ನಡುವೆ ಅಂತ ಸಂಬಂಧವೇನಿದೆ ಎಂದು ರೆಹಮಾನ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ರೆಹಮಾನ್ ಅವರ ಹೇಳಿಕೆಗಳು ಹಾಗೂ ಅದನ್ನ ಪ್ರೋತ್ಸಾಹಿಸಿದ ನಿರ್ಮಾಪಕ ಸಂಘದ ವಿರುದ್ಧ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಜಾಕ್ ಮಂಜು, ಇದು ನನ್ನ ಮತ್ತು ಸಹೋದರ ಸಮನಾದ ಸುದೀಪ್ ಅವರ ನಡುವೆ ತಂದಿಡುವ ಪ್ರಯತ್ನ. ಅಣ್ಣ-ತಮ್ಮಂದಿರನ್ನು ಮತ್ತು ಅವರ ಅಭಿಮಾನಿಗಳನ್ನು ನನ್ನಿಂದ ದೂರ ಮಾಡುವ ಕುತಂತ್ರ. ಸುದೀಪ್ ಮತ್ತು ನಿರ್ಮಾಪಕರ ನಡುವಿನ ಬೆಳವಣಿಗೆಯಲ್ಲಿ ನಿರ್ಮಾಪಕರ ಸಂಘ ಮಲತಾಯಿ ಧೋರಣೆ ಮಾಡ್ತಿದೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












