ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ನಟಿ. ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ರಶ್ಮಿಕಾ ಮಂದಣ್ಣ ಆಗಾಗ ತಮ್ಮ ಅಭಿಮಾನಿಗಳ ತಲೆಗೂ ಹುಳ ಬಿಡ್ತಾ ಇರ್ತಾರೆ. ಈಗ ತಿನ್ನುವ ಫೋಟೋ ಒಂದನ್ನು ಹಾಕಿ, ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ.
ನಾನು ಪಾಸ್ಟಿಂಗ್ ಮಾಡಿದ ಬಳಿಕ ಊಟ ಮಾಡುವ ಮೊದಲು ನನಗೊಂದು ಅಭ್ಯಾಸ ಇದೆ. ಮೈನ್ ಮೀಲ್ ತಿನ್ನುವ ಮೊದಲು ನಾನು ಡೆಸರ್ಟ್ಸ್ ಆರ್ಡರ್ ಮಾಡುತ್ತೇನೆ. ಇದು ನನ್ನ ಸ್ನೇಹಿತರಿಗೆ ಬಹಳ ಕಿರಿಕಿರಿ ಉಂಟು ಮಾಡುತ್ತದೆ. ನಾನು ಮಾತ್ರ ಹೀಗೇನಾ? ನನ್ನಂತೆ ನಿಮ್ಮಲ್ಲಿ ಯಾರಾದರೂ ಇದ್ದೀರಾ ಎಂದು ರಶ್ಮಿಕಾ ಪೋಸ್ಟ್ ಹಾಕಿದ್ದಾರೆ.
ರಶ್ಮಿಕಾ ಮಂದಣ್ಣ ಬರೀ ಫೋಟೋ ಹಾಕಿದರೇನ ಮುಗಿಬಿದ್ದವರಂತೆ ಉತ್ತರಿಸುವ ಅಭಿಮಾನಿಗಳು, ಇನ್ನು ಮೆನ್ಶನ್ ಮಾಡಿದಾಗ ಉತ್ತರಿಸದೆ ಇರುತ್ತಾರೆಯೆ. ಈ ಪ್ರಶ್ನೆಗೆ ವಿವಿಧ ರೀತಿಯಲ್ಲಿ ಉತ್ತರ ಸಿಕ್ಕಿದೆ. ಸದ್ಯ ರಶ್ಮಿಕಾ ಮಂದಣ್ಣ ಹಲವು ಭಾಷೆಗಳ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪ2 ಸಿನಿಮಾ ತೆರೆಗೆ ಬರಲಿ ಎಂದು ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











