ಹೊಸದುರ್ಗ, (ಜೂ.25) : ವಿಶ್ವದ ಸಮಗ್ರ ಅಭಿವೃದ್ಧಿ ಹೊಂದಬೇಕೆಂದರೆ ಪ್ರಕೃತಿಯ ಸಮತೋಲನ ಕಾಪಾಡುವುದು ಅತ್ಯಂತ ಮುಖ್ಯ. ಆರಣ್ಯ ಇಲಾಖೆ ಕೇವಲ ದಾಖಲಾತಿಯಲ್ಲಿ ಅನುದಾನಕ್ಕಾಗಿ ಸಸಿ ನೆಡುವ ಕೆಲಸ ಮಾಡಿ ಕೈ ತೊಳೆದುಕೊಳ್ಳುತ್ತಿದೆ.
ಗಿಡಗಳ ಲಾಲನೆ ಪಾಲನೆ ಆಗುತ್ತಿಲ್ಲ ಎಂದು
ಡಾ.ಶ್ರೀ.ಶಾಂತವೀರ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನ ಮಠದ ಆವರಣದಲ್ಲಿ ಹಾಗೂ ರಸ್ತೆಯ ಅಕ್ಕಪಕ್ಕದಲ್ಲಿ ಸುಮಾರು 250 ಕ್ಕೂ ಹೆಚ್ಚಿನ ಗಿಡ ನೆಡುವ ಕಾಯಕ ಮಾಡಿ ಆಶೀರ್ವಚನ ನೀಡಿದರು.
ಜನರ ಕಲ್ಯಾಣಕ್ಕಾಗಿಯೇ ಇರುವ ಆಸಕ್ತ ಮಠಗಳಿಗೆ ಜಿಲ್ಲೆ ತಾಲ್ಲೂಕವಾರು ಹೋಬಳಿ ವ್ಯಾಪ್ತಿಯ ಜವಾಬ್ದಾರಿ ನೀಡಿ ಯಾವುದೇ ಅನುದಾನ ಬೇಡ. ಕೇವಲ ಸಸಿ ನೀಡಿ ನೋಡಿ 10 ವರ್ಷ ಸರ್ಕಾರ ಈ ಪ್ರಯೋಗ ಮಾಡಿ ನೋಡಲಿ ಜನರೆ ಕಾಡು ಬೆಳೆಸುವ ಜಾಗೃತಗೊಳಿಸುವ ಕೆಲಸ ಮಠಾಧೀಶರ ಖಂಡಿತ ಮಾಡುತ್ತಾರೆ ಎಂದರು.
ಈ ಪ್ರಯತ್ನ ಪ್ರಯೋಗ ಮಾಡುವ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಪ್ರತಿ ವರ್ಷ 6 ಕೋಟಿ 7 ಕೋಟಿ ಗಿಡ ನೆಟ್ಟಿರುವ ಅನುದಾನ ಖರ್ಚಾಗಿರುವ ದಾಖಲೆ ಸಿಗುತ್ತದೆ. ವಾಸ್ತವವಾಗಿ 6 ತಿಂಗಳ ನಂತರ ಹೋದರೆ ಗಿಡಗಳೆ ಮಾಯವಾಗಿರುವುದೇ ಹೆಚ್ಚು. ಈ ಕಾರಣದಿಂದ ಮಠಗಳಿಗೆ ವರ್ಷಕ್ಕೆ ಕನಿಷ್ಠ 5 ರಿಂದ 10 ಸಾವಿರ ಗಿಡ ನೀಡಿ ಬೆಳೆಸುವ ಜವಾಬ್ದಾರಿ ನೀಡಬೇಕು. ಇತ್ತೀಚಿನ ಅಭಿವೃದ್ಧಿ ಕೇವಲ ಕಾಂಕ್ರೀಟ್ ಕಾಡಿನ ಮಧ್ಯ ನಮ್ಮನ್ನು ಕಾಪಾಡುವ ದೈವಸ್ವರೂಪಿ. ಪ್ರಕೃತಿಯ ಬಗೆಗಿನ ಕಾಳಜಿ ಮರೆಯಾಗಿದೆ. ಇತ್ತೀಚಿನ 35 40 ಡಿಗ್ರಿ ಉಷ್ಣಾಂಶ ಇದೆ. ಇದಕ್ಕೆಲ್ಲ ಪರಿಹಾರ ಪರಿಸರ ಪ್ರಜ್ಞೆ ಮಾತ್ರ.
*ಆರಣ್ಯ ಇಲಾಖೆ ಪ್ರತಿ ಮನೆಗೆ 10 ಗಿಡ ಪ್ರತಿ ವಿದ್ಯಾಸಂಸ್ಥೆಗೆ 100 ಗಿಡ ಪ್ರತಿ ಮಠಕ್ಕೆ 1000 ಸಾವಿರ ಗಿಡ ನೀಡುವ ಮೂಲಕ ಉತ್ತೇಜನ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.
ಶ್ರೀಮಠದ ವ್ಯವಸ್ಥಾಪಕರು ಉಪನ್ಯಾಸಕರಾದ ವಸಂತಕುಮಾರ್, ನವೀನ ಕುಮಾರ್, ತಿಪ್ಪೇಶ್, ಬಸವರಾಜಪ್ಪ, ಶಿವನಕಟ್ಟೆ ತಿಪ್ಪೇಶ್ ಹಾಗೂ ಭಕ್ತರುಂದ ಇದ್ದರು.