Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ನ್ಯೂಯಾರ್ಕ್ ನ ಆಗಸದಲ್ಲಿ ತೇಲಿತು ಮೋದಿ – ಬೈಡೆನ್ ಭಾವಚಿತ್ರ : ಐತಿಹಾಸಿಕ ಒಪ್ಪಂದದ ನೆನಪಿಗಾಗಿ ಹಾರಾಟ

---Advertisement---

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರ ಮೂರು ದಿನಗಳ ಅಮೆರಿಕಾ ಪ್ರವಾಸ ಮುಕ್ತಾಯವಾಗಿದೆ. ಅದರ ಜೊತೆಗೆ ಐತಿಹಾಸಿಕ ಒಪ್ಪಂದಗಳಿಗೆ ಸಹಿಯೂ ಬಿದ್ದಿದೆ. ಉಬಯ ನಾಯಕರ ಸಹಿ ಆಗುತ್ತಿದ್ದಂತೆ ನ್ಯೂಯಾರ್ಕ್ ಆಗಸದಲ್ಲೆಲ್ಲಾ ವಿಶೇಷ ಬಾವುಟವೊಂದು ಹಾರಾಡಿದೆ. ಆ ಬಾವುಟದಲ್ಲಿ ಮೋದಿ ಹಾಗೂ ಬೈಡೆನ್ ಭಾವಚಿತ್ರ ಕಾಣಿಸಿದೆ.

ಆ ಬ್ಯಾನರ್ ನಲ್ಲಿ Historic state visit to the USA ಅಂತ ಬರೆಯಲಾಗಿದೆ. ಅಷ್ಟೇ ಅಲ್ಲ ನ್ಯೂಯಾರ್ಕ್ ನ ನಗರದಲ್ಲಿರುವ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮತ್ತು ನಯಾಗರ ಫಾಲ್ಸ್ ನಲ್ಲಿ ಭಾರತದ ಹೆಮ್ಮರಯ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಈ ವಿಡಿಯೋಗಳನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಹಂಚಿಕೊಂಡಿದ್ದಾರೆ. ಮೋದಿಗೆ, ಅಮೆರಿಕ ಫಸ್ಟ್​ ಕಪಲ್ ಶ್ವೇತಭವನದಲ್ಲಿ ‘ಸ್ಟೇಟ್ ಡಿನ್ನರ್’ ಕೂಡ ಆಯೋಜನೆ ಮಾಡಿತ್ತು.

ಇದೆ ವೇಳೆ, ವಾಷಿಂಗ್ಟನ್ ಡಿಸಿಯ ರೊನಾಲ್ಡ್ ರೇಗನ್ ಸೆಂಟರ್​ನಲ್ಲಿ ಶುಕ್ರವಾರ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ‘ನೀವು ಈ ಸಭಾಂಗಣವನ್ನು ಭಾರತದ ಪರಿಪೂರ್ಣ ನಕ್ಷೆಯಂತೆ ಮಾಡಿದ್ದೀರಿ. ಇಲ್ಲಿ ಮಿನಿ ಇಂಡಿಯಾ ಹುಟ್ಟಿಕೊಂಡಂತೆ ಕಾಣುತ್ತಿದೆ. ಅಮೆರಿಕಾದಲ್ಲಿ ಭಾರತದ ಸುಂದರ ಚಿತ್ರವನ್ನು ತೋರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...