Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿಗಳನ್ನು ಪೂರೈಸಿ, ನುಡಿದಂತೆ ನಡೆಯಲಿ : ಚಿತ್ರದುರ್ಗದಲ್ಲಿ ಬಿ.ವೈ. ವಿಜಯೇಂದ್ರ ಹೇಳಿಕೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಜೂ.01) :  ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ ಗ್ಯಾರೆಂಟಿಯನ್ನು ಪೂರೈಸುವಲ್ಲಿ ಮಧ್ಯಮ ವರ್ಗದ ಜನತೆಯ ಮೇಲೆ ಹೆಚ್ಚು ತೆರಿಗೆಯನ್ನು ಹಾಕುವುದರ ಮೂಲಕ ತಮ್ಮ ಗ್ಯಾರೆಂಟಿಯನ್ನು ಪೊರೈಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಶಾಸಕ ಬಿ.ವೈ. ವಿಜಯೇಂದ್ರ ಕಾಂಗ್ರೆಸ್‍ನ ಕಾರ್ಯ ವೈಖರಿಯನ್ನು ಟೀಕಿಸಿದ್ದಾರೆ.

ನಗರದ ಹೂರ ವಲಯದ ಭೋವಿ ಗುರುಪೀಠ ಮತ್ತು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆರ್ಶೀವಾದವನ್ನು ಪಡೆದರು.


ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಚುನಾವಣೆಯ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಗ್ಯಾರೆಂಟಿಗಳನ್ನು ಈಡೇರಿಸವಲ್ಲಿ ಗೂಂದಲ ಮೂಡಿಸುತ್ತಿದೆ. ರಾಜ್ಯದ ಜನತೆ ಮಾತ್ರವಲ್ಲದೆ ಸರ್ಕಾರದ ಮಟ್ಟದಲ್ಲಿ ಮತ್ತು ಸಚಿವ ಸಂಪುಟದ ಸದಸ್ಯರು ಹಾಗೂ ಅಧಿಕಾರಿಗಳಲ್ಲಿ ಚಿಂತನೆ ಇದೆ. ಇದರ ಬಗ್ಗೆ ಮುಂದಿನ ದಿನದಲ್ಲಿ ಕಾದು ನೋಡುತ್ತೇವೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರವಸೆಯನ್ನು ನೀಡಿದ್ದಾರೆ. ಇದರಿಂದ ಮತದಾರರು ಸ್ಪಷ್ಟವಾದ ಬಹುಮತವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ನೀರಿಕ್ಷೆಯನ್ನು ಹುಸಿಯಾಗದ ರೀತಿಯಲ್ಲಿ ಅವರು ನೀಡಿದಂತಹ ಭರವಸೆಗಳನ್ನು ಈಡೇರಿಸುವಂತೆ ವಿಜಯೇಂದ್ರ ಆಗ್ರಹಿಸಿದರು.

ಗ್ಯಾರೆಂಟಿಯನ್ನು ಪೂರೈಸುವಲ್ಲಿ ಮಧ್ಯಮ ವರ್ಗದ ಜನತೆಯ ಮೇಲೆ ಸರ್ಕಾರ ಎಕ್ಸೈಸ್ ಡ್ಯೂಟಿ ಜಾಸ್ತಿ ಮಾಡುವುದು, ಪೆಟ್ರೋಲ್ ಡೀಸೆಲ್ ಮೇಲೆ ಹೆಚ್ಚು ತೆರಿಗೆಯನ್ನು ಹಾಕುವಂತದ್ದು ನಾನಾ ರೀತಿಯ ಹೊರೆಯನ್ನು ಹಾಕುವುದರ ಮೂಲಕ ತಮ್ಮ ಗ್ಯಾರೆಂಟಿಯನ್ನು ಪೊರೈಸುವ ಪ್ರಯತ್ನದಲ್ಲಿ ಇದ್ದಾರೆ.ಇದರ ಬಗ್ಗೆ ಮುಂದಿನ ದಿನದಲ್ಲಿ ಕಾದು ನೋಡುತ್ತೇವೆ ಎಂದರು‌.

ಕೇಂದ್ರದಲ್ಲಿ ಮೋದಿಜಿಯವರು ಯುವ ಜನತೆಗಾಗಿ ಭಾರತ ದೇಶ ಮಾತ್ರವಲ್ಲದೆ ಪ್ರಪಂಚದಲ್ಲಿ ಬೇಡಿಕೆ ಇರುವಂತ ಮಕ್ಕಳಾಗಿದ್ದಾರೆ. ದೇಶದಲ್ಲಿ ಎನ್.ಇ.ಪಿ ಪಾಲಿಸಿಯನ್ನು ಜಾರಿ ಮಾಡುವುದರ ಮೂಲಕ ಮುಂದಿನ ಪೀಳಿಗೆಗೆ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ.

ಇದರ ಬಗ್ಗಯೂ ಸಹಾ ಕಾಂಗ್ರೆಸ್ ಕೆಂಗಣ್ಣನ್ನು ಹಾಕಿದೆ ನಾವು ತರಾತುರಿ ಮಾಡುವುದಿಲ್ಲ ಎಲ್ಲವನ್ನು ಪರಿಶೀಲಿಸುತ್ತೇವೆ ಎಂದವರು ಈಗ ಅದರ ಮೇಲೆ ಆಪಾದನೆಯನ್ನು ಮಾಡುತ್ತಿದ್ದಾರೆ.
ಇದರ ಬಗ್ಗೆ ರಾಜಕೀಯ ಮಾಡುತ್ತಿರುವುದ ಖಂಡನೀಯ ಇದನ್ನು ಯಾರೂ ಸಹಾ ಒಪ್ಪುವುದಿಲ್ಲ ಇದರಲ್ಲೂ ಸಹಾ ರಾಜಕೀಯ ಬೆರಸುವುದು ಸರಿಯಲ್ಲ ಎಂದರು.

ಗ್ಯಾರೆಂಟಿಗಳಿಗೆ ಷರತ್ತು ವಿಧಿಸುವ ಬಗ್ಗೆ ಮುಂದಿನ  ಸಚಿವ ಸಂಪುಟದಲ್ಲಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ಸ್ವಾತಂತ್ರ್ಯ ಬಂದು ಹಲವಾರು ವರ್ಷ ದೇಶವನ್ನು ಆಳಿದ್ದು ಕಾಂಗ್ರೇಸ್ ಅಗ ಬಡತನವನ್ನು ನಿರ್ಮೂಲನೆ ಜನರಿಗೆ ಶಿಕ್ಷಣವನ್ನು ನೀಡಬೇಕಿತ್ತು ಆದರೆ ಅದನ್ನು ನೀಡದೆ ಅವರನ್ನು ಬಡವರಾಗಿಯೇ ಇಟ್ಟು ಅನಕ್ಷರತೆಯನ್ನು ನೀಡಿ ನಮ್ಮ ನತದ ಬ್ಯಾಂಕ್ ಆಗಿ ಮಾಡಿಕೊಂಡಿದ್ದಾರೆ. ದೇಶದಲ್ಲಿ ಬಡವರಾಗಿಯೇ ಇದ್ದಾರೆ ಎಂದರೆ ಅದರ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲುತ್ತದೆ.

ಶಿಕ್ಷಣವನ್ನು ನೀಡಿಲ್ಲ ಸ್ವಾತಂತ್ರಯ ಬಂದು ಇಷ್ಠ ವರ್ಷವಾದರೂ ಸಹಾ ಉಚಿತ ಗ್ಯಾರೆಂಟಿಯನ್ನು ನೀಡುತ್ತಾರೆ ಎಂಬುದರಲ್ಲಿ ಗೊತ್ತಾಗುತ್ತದೆ. ಎಂದ ವಿಜೇಯೇಂದ್ರ ರವರು ಮುಂದಿನ ದಿನದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿ ಉತ್ತಮವಾದ ಕಾರ್ಯವನ್ನು ಮಾಡುತ್ತೇವೆ ನಮಗೆ ವಿರೋಧ ಪಕ್ಷವಾಗಿ ಮಾಡಿದ ಅನುಭವ ಇದೆ ಇದರಿಂದ ಇದರಿಂದ ಆಡಳಿತ ಪಕ್ಷವನ್ನು ಸರಿದಾರಿಎಗ ತರುವ ಕಾರ್ಯವನ್ನು ಮಾಡಲಾಗುವುದು ಎಂದು ವಿಜೇಯೇಂದ್ರ ತಿಳಿಸಿದರು.

ಈ ಸಂದರ್ಭದಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಶಾಸಕರಾದ ಎಂ.ಚಂದ್ರಪ್ಪ ಸೇರಿದಂತೆ ಸಮಾಜದ ಮುಖಂಡರು ಅಭಿಮಾನಿಗಳು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!