Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಬರದ ನಾಡಾಗಿರುವ ಚಿತ್ರದುರ್ಗ ಬಂಗಾರದ ನಾಡಾಗಿ ಮಾರ್ಪಡಲಿದೆ : ಚಿತ್ರನಟ ದೊಡ್ಡಣ್ಣ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ, (ಮೇ.15) :  ಸುಮಾರು ವರ್ಷಗಳಿಂದ ಜಡ್ಡುಗಟ್ಟಿರುವ ಚಿತ್ರದುರ್ಗ ರಾಜಕೀಯವನ್ನು ನೂತನವಾಗಿ ಆಯ್ಕೆಯಾಗಿರುವ ಶಾಸಕ ಕೆ.ಸಿ.ವಿರೇಂದ್ರಪಪ್ಪಿ ಅವರು ಸರಿಪಡಿಸಲಿದ್ದಾರೆ ಎಂದು ಚಲನ ಚಿತ್ರನಟ ದೊಡ್ಡಣ್ಣ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದಕರಿ ನಾಯಕರು ಆಳ್ವಿಕೆ ಮಾಡಿದಂತಹ ಚಿತ್ರದುರ್ಗ ಕಳೆದ 35 ವರ್ಷಗಳಿಂದ ಅಭಿವೃದ್ಧಿ ಕಾಣದೇ ಕುಂಠಿತಗೊಂಡಿತ್ತು. ಇಲ್ಲಿನ ಐತಿಹಾಸಿಕ ಏಳು ಸುತ್ತಿನ ಕೋಟೆ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಬೇಕಿತ್ತು.

ಆದರೆ ಇಲ್ಲಿನ ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಸೇರಿರಲಿಲ್ಲ. ಅಲ್ಲದೆ ಇಂತಹ ಅದೇಷ್ಟೋ ಕಾರ್ಯಗಳು ಮೂಲೆ ಗುಂಪಾಗಿ ಸೇರಿವೆ ಅಂತಹ ಕಾರ್ಯಗಳನ್ನು ನೂತನವಾಗಿ ಶಾಸಕರಾಗಿ ಆಯ್ಕೆಯಾಗಿರುವಂತಹ ನನ್ನ ಅಳಿಯ ವಿರೇಂದ್ರಪಪ್ಪಿ ಅವರು ಮುನ್ನೆಲೆಗೆ ತರಲಿದ್ದಾರೆ ಎಂದರು.

ಕೋಟೆ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಲು ಯುನೆಸ್ಕೋ ಸೇರ್ಪಡೆ ಆಗಬೇಕಿದೆ. ಅದಕ್ಕಾಗಿ ಬೇಕಾದ ಎಲ್ಲಾ ಕ್ರಮಗಳನ್ನು ಮಾಡಲಿದ್ದಾರೆ. ಚಿತ್ರದುರ್ಗವನ್ನು ಪ್ರವಾಸೋದ್ಯಮ ತಾಣವಾಗಿ ಮಾಡಬೇಕಿದ್ದು, ಇದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಇದರಿಂದ ಬರದ ನಾಡಾಗಿರುವ ಚಿತ್ರದುರ್ಗ ಬಂಗಾರದ ನಾಡಾಗಿ ಮಾರ್ಪಡಲಿದೆ ಎಂದು ಹೇಳಿದರು.

ಈ ಭಾರೀ ಚುನಾವಣೆಯಲ್ಲಿ ಶೇಕಡ 80% ಜನರನ್ನು ನಾವು ತಲುಪಿದ್ದೆವೆ ಇದರಿಂದ ಹೆಚ್ಚಿನ ಮತದಾನ ಆಗಿದೆ. ನನ್ನ ಅಳಿಯ ವಿರೇಂದ್ರಪಪ್ಪಿ ಅವರ ಗೆಲುವಿಗೆ ಕಾರಣರಾದ ಚಿತ್ರದುರ್ಗ ಕ್ಷೇತ್ರದ ಜನತೆಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಲೀಲಾಧರ್ ಠಾಕೂರ್, ಮಹೇಶ್, ಅಬ್ದುಲ್ ರೆಹಮಾನ್, ಶಿವರಾಜ್ ಜಾಲಿಕಟ್ಟೆ,  ಕೊಟ್ರೇಶ್ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...