Fake News on Sarath Babu Death : ಜನಪ್ರಿಯ ನಟ ಶರತ್ ಬಾಬು ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ನಿಮಿಷಗಳ ಹಿಂದೆ ವೈರಲ್ ಆಗಿದೆ. ಶರತ್ ಬಾಬು ಇನ್ನಿಲ್ಲ ಎಂದು ಹಲವು ಸುದ್ದಿ ಜಾಲತಾಣಗಳು ಸುದ್ದಿಯನ್ನು ಪ್ರಕಟಿಸಿವೆ.
ಆದರೆ, ಶರತ್ ಬಾಬು ಅವರ ಸಹೋದರಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ ಶರತ್ ಬಾಬು ಬದುಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶರತ್ ಬಾಬು ಬಗ್ಗೆ ಬರುತ್ತಿರುವ ಸಾವಿನ ಸುದ್ದಿ ಸುಳ್ಳು ಮತ್ತು ಅವರು ಇದೀಗ ಚಿಕಿತ್ಸೆಯಿಂದ ಸ್ವಲ್ಪ ಚೇತರಿಸಿಕೊಂಡಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶರತ್ ಬಾಬು ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.ಶೀಘ್ರದಲ್ಲೇ ಅವರು ಸಂಪೂರ್ಣ ಗುಣಮುಖರಾಗಿ ಬಂದು ಮಾಧ್ಯಮಗಳೊಂದಿಗೆ ಮಾತನಾಡಲಿ ಎಂದು ಹಾರೈಸುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಸುದ್ದಿಯನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಅನಾರೋಗ್ಯದ ಕಾರಣ ಶರತ್ ಬಾಬು ಅವರನ್ನು ಹೈದರಾಬಾದ್ ನ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 71 ವರ್ಷದ ಶರತ್ ಬಾಬು ಅವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಇಂದು ಶರತ್ ಬಾಬು ವಿಧಿವಶರಾಗಿದ್ದಾರೆ ಎಂಬ ವದಂತಿ ಹಬ್ಬಿದೆ. ಇದರಿಂದಾಗಿ ಶರತ್ ಬಾಬು ನಿಧನಕ್ಕೆ ಸಂತಾಪ ಸೂಚಿಸಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.
ಕೆಲವು ಸುದ್ದಿ ವೆಬ್‌ಸೈಟ್‌ಗಳು ಈ ಬಗ್ಗೆ ಸುದ್ದಿಯನ್ನೂ ಬರೆದಿವೆ. ಇದನ್ನು ನೋಡಿದ ಶರತ್ ಬಾಬು ಸಹೋದರಿ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಶರತ್ ಬಾಬು ಆರೋಗ್ಯ ಚೆನ್ನಾಗಿದ್ದು, ಐಸಿಯುನಿಂದ ಜನರಲ್ ರೂಂಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಮತ್ತೊಂದೆಡೆ ಶರತ್ ಬಾಬು ಅವರ ಸಹೋದರ ಕೂಡ ಅವರು ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.