ಹುಬ್ಬಳ್ಳಿ: ಎಲ್ಲಿಯೇ ಗಲಾಟೆ ಆದರೂ ಆಯಾ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ದೂರು ದಾಖಲಾಗುತ್ತದೆ. ಆದ್ರೆ IPL ಪಂದ್ಯದ ವೇಳೆ ನಡೆದ ಒಂದು ಘಟನೆಗೆ ಸಂಬಂಧಿಸಿದಂತೆ ಇದೀಗ ಹುಬ್ಬಳ್ಳಿ ಧಾರವಾಡ ಪೊಲೀಸ್ ಠಾಣೆಯವರು ಮಧ್ಯ ಪ್ರವೇಶಿಸಿದ್ದಾರೆ. ಇದನ್ನ ಫುಲ್ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ಸೀರಿಯಸ್ ಗಲಾಟೆಯ ನಡುವೆ ಒಂದು ತಮಾಷೆಯ ಟ್ವೀಟ್ ಹರಿದು ಬಂದಿದೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯವನ್ನು ಆರ್ಸಿಬಿ ಗೆದ್ದುಕೊಂಡಿತ್ತು. ಕೇವಲ 126 ರನ್ ಗಳಿಸಿದ್ದ ಲಕ್ನೋ ತಂಡವನ್ನು ಆರ್ಸಿಬಿ 108 ರನ್ ಗೆ ಅಲೌಟ್ ಮಾಡುವ ಮೂಲಕ ಜಯಬೇರಿ ಬಾರಿಸಿತ್ತು. ಇದು ಐಪಿಎಲ್ ವಲಯದಲ್ಲಿ ಸೌಂಡ್ ಮಾಡ್ತಿದೆ. ಈ ಘಟನೆ ಜಗಳದ ಹಂತಕ್ಕೆ ತಲುಪಿತ್ತು. ಇದಕ್ಕೆ ಸಂಬಂಧಿಸಿದಂತೆ ಹು-ಧಾ ಪೊಲೀಸ್ ಇಲಾಖೆ ತಮಾಷೆಯಾಗಿ ಟ್ವೀಟ್ ಮಾಡಿದೆ.
ಅಂತಾ ಟೈಮ್ ನ್ಯಾಗ ನೀವ ನಮ್ಮ #ERSS112 ಗ ಕಾಲ್ ಮಾಡ್ಬೇಕಿತ್ರೀ..
ಯಾವುದೇ #ಗಂಭೀರ ಸಮಸ್ಯೆಗಳು ಉಂಟಾದಾಗ 112 ಗೆ ಕರೆ ಮಾಡಿ..#ವಿರಾಟ ರೂಪದಲ್ಲಿ ಸಹಾಯ ಮಾಡಾಕ ಹುಧಾ ನಗರ ಪೋಲಿಸ್ ಸದಾ ಸಿದ್ಧವಾಗಿರುತ್ತದೆ.
ಗೊತ್ತಲ್ಲಾ ನಮ್ಮ ರೀಚ್ ಟೈಮ್..🙋#Dial112 incase of any emergency..!#RCBVSLSG #ViratKohli @RCBTweets pic.twitter.com/efvrz7PXFo
— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc) May 2, 2023
“ಅಂತಾ ಟೈಮ್ ನ್ಯಾಗ ನೀವ ನಮ್ಮ #ERSS112 ಗ ಕಾಲ್ ಮಾಡ್ಬೇಕಿತ್ರೀ..
ಯಾವುದೇ #ಗಂಭೀರ ಸಮಸ್ಯೆಗಳು ಉಂಟಾದಾಗ 112 ಗೆ ಕರೆ ಮಾಡಿ..
#ವಿರಾಟ ರೂಪದಲ್ಲಿ ಸಹಾಯ ಮಾಡಾಕ ಹುಧಾ ನಗರ ಪೋಲಿಸ್ ಸದಾ ಸಿದ್ಧವಾಗಿರುತ್ತದೆ.
ಗೊತ್ತಲ್ಲಾ ನಮ್ಮ ರೀಚ್ ಟೈಮ್..🙋
#Dial112 incase of any emergency..!
#RCBVSLSG #ViratKohli @RCBTweets” ಎಂದು ಟ್ವೀಟ್ ಮಾಡಿದೆ.