Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಣ್ಣಾವ್ರನ್ನು ಸ್ಮರಿಸಿದ RCB : ಹುಟ್ಟುಹಬ್ಬಕ್ಕೆ ಶುಭಕೋರಿಕೆ

---Advertisement---

ಬೆಂಗಳೂರು: ಇವತ್ತು ಡಾ.ರಾಜ್‍ಕುಮಾರ್ ಅವರ ಜನ್ಮದಿನೋತ್ಸವ. 95ನೇ ವರ್ಷದ ಆಚರಣೆ. ರಾಜ್‍ಕುಮಾರ್ ಸ್ಮಾರಕದ ಬಳಿ ಬೆಳಗ್ಗೆಯಿಂದ ಅಭಿಮಾನಿಗಳು ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಣ್ಣಾವ್ರ ಸಮಾಧಿಗೆ ನಮಸ್ಕರಿಸಿದ್ದಾರೆ. ಕುಟುಂಬಸ್ಥರು ಕೂಡ ಸಮಾಧಿ ಬಳಿ ತೆರಳಿ, ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಸಚಿವ ಗೋಪಾಲಯ್ಯ ಕೂಡ ಅಣ್ಣಾವ್ರಿಗೆ ನಮಸ್ಕರಿಸಿ ಬಂದಿದ್ದಾರೆ.


ಗಾಜನೂರಿನಲ್ಲಿ 1929ರಲ್ಲಿ ಜನಿಸಿದ್ದ ಅಣ್ಣಾವ್ರು 2006ರಲ್ಲಿ ನಿಧನರಾಗಿದ್ದರು. ಇಂದು ಅವರ 95ನೇ ಜನ್ಮ ದಿನೋತ್ಸವ. ಇದರ ಅಂಗವಾಗಿ ಸಿನಿಮಾ ತಾರೆಯರು, ರಾಜಕಾರಣಿಗಳು, ಅಭಿಮಾನಿಗಳೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಹುಟ್ಟುಹಬ್ಬದ ಶುಭಾಶಯಕೋರಿದ್ದಾರೆ.

ಸದ್ಯ ಐಪಿಎಲ್ ಸೀಸನ್ ಇದು. ಈ ಸಲ ನಮ್ಮದೇ ಕಪ್ ಅನ್ನೋ ಆತ್ಮವಿಶ್ವಾಸ ಆರ್ಸಿಬಿ ಅಭಿಮಾನಿಗಳದ್ದು. ಆ ಆತ್ಮವಿಶ್ವಾಸ ಹೆಚ್ಚಾಗುವಂತೆಯೇ ಆಟವಾಡುತ್ತಿದ್ದಾರೆ ನಮ್ಮ ಆರ್ಸಿಬಿ ಆಟಗಾರರು. ಇಂದು ಅಣ್ಣಾವ್ರ ಹುಟ್ಟುಹಬ್ಬಕ್ಕೂ ಶುಭಕೋರಿದ್ದಾರೆ. “ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು! 🎶 ನಟ ಸಾರ್ವಭೌಮ, ಕನ್ನಡದ ಕಣ್ಮಣಿ, ನಮ್ಮ ಪ್ರೀತಿಯ ಅಣ್ಣಾವ್ರು, ಡಾ. ರಾಜ್ ಕುಮಾರ್ ಅವರ 94ನೆ ಜನ್ಮದಿನದ ಸ್ಮರಣೆಯಲ್ಲಿ” ಎಂದು ಟ್ವೀಟ್ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...