ಹಾಸನ: ಜೆಡಿಎಸ್ ಕುಟುಂಬದಲ್ಲಿ ಹಾಸನ ಟಿಕೆಟ್ ಗದ್ದಲ ಮುಗಿಯುವಂತೆ ಕಾಣುತ್ತಿಲ್ಲ. ಮೊದ ಮೊದಲಿಗೇನೆ ಭವಾನಿ ರೇವಣ್ಣ, ಈ ಬಾರಿ ಹಾಸನದಲ್ಲಿ ನಾನೇ ಸ್ಪರ್ಧಿಸುತ್ತಿದ್ದೇನೆ. ನನಗೆ ಟಿಕೆಟ್ ನೀಡಲಾಗುತ್ತದೆ ಎಂದು ಘೋಷಣೆ ಮಾಡಿಕೊಂಡಿದ್ದರು. ಅದಾದ ಬಳಿಕ ಕುಟುಂಬದಲ್ಲಿಯೇ ಒಂದಷ್ಟು ಗೊಂದಲ ಮೂಡಿತ್ತು. ದೇವೇಗೌಡರ ಅಂಗಳದಲ್ಲಿ ಚೆಂಡು ಇತ್ತು. ಆದರೆ ಕುಮಾರಸ್ವಾಮಿ ಇದಕ್ಕೆ ಸುತಾರಾಮ್ ಒಪ್ಪಿಗೆ ನೀಡಿರಲಿಲ್ಲ.
ಇದೀಗ ದೊಡ್ಡಗೌಡರಿಂದ ದೊಡ್ಡ ಸೊಸೆಗೆ ಸಲಹೆಯೊಂದು ಸಿಕ್ಕಿದೆಯಂತೆ. ಹಾಸನ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದ ಟಿಕೆಟ್ ನೀಡಲು ಗೌಡ್ರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಮೈಸೂರು ಜಿಲ್ಲೆಯ ಚಾಮರಾಜ ಕ್ಷೇತ್ರದಿಂದ ನಿಲ್ಲಲು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಭವಾನಿ ರೇವಣ್ಣ ಅವರು ಒಪ್ಪಿಕೊಳ್ಳುತ್ತಾರಾ ಎಂಬ ಕುತೂಹಲವಿದೆ.
ಈ ಬಗ್ಗೆ ಕುಮಾರಸ್ವಾಮಿ ಅವರನ್ನ ಕೇಳಿದ್ರೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ. ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಬೇಕೆಂದು ನಿರ್ಧರಿಸಿದ್ದಾರೆ. ಹೀಗಾಗಿ ಭವಾನಿ ರೇವಣ್ಣ ಅವರಿಗೆ ಸಮಾಧಾನ ಮಾಡಿ, ಚಾಮರಾಜ ಕ್ಷೇತ್ರಕ್ಕೆ ಫಿಕ್ಸ್ ಮಾಡುತ್ತಾರಾ ನೋಡಬೇಕಿದೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






