Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಬಾಳೆಹಣ್ಣು ಕೊಟ್ಟ ತಾತ ಇನ್ನಿಲ್ಲ.. ಹಣೆಗೆ ಮುತ್ತಿಟ್ಟು ವಿದಾಯ ಹೇಳಿದ ಕೋತಿ.. ವಿಜಯನಗರದಲ್ಲಿ ಮನಕಲುಕುವ ಘಟನೆ..!

---Advertisement---

ವಿಜಯನಗರ: ಮನುಷ್ಯನಿಗಿಂತ ಪ್ರಾಣಿಗಳೇ ಮೇಲೂ ಅನ್ನೋದು ಆಗಾಗ ಪ್ರೂವ್ ಆಗ್ತಾನೆ ಇರುತ್ತೆ. ಮನುಷ್ಯನಿಗೆ ನೀನೆ ಎಷ್ಟೇ ಉಪಕಾರ ಮಾಡಿದರೂ ಅದನ್ನ ಯಾವಾಗಲಾದರೂ ಒಮ್ಮೆ ಮರೆತು ಬಿಡುತ್ತಾರೆ. ಆದರೆ ಪ್ರಾಣಿಗಳು ಹಂಗಲ್ಲ. ಯಾರೋ ಒಬ್ಬರು ಹೊಟ್ಟೆಗೆ ಊಟ ಹಾಕಿದರೂ ಎಂದರೆ, ಅವರನ್ನು ಯಾವತ್ತಿಗೂ ಮರೆಯುವುದಿಲ್ಲ. ಅವರ ಹಿಂದೆ‌ಮುಂದೆಯೇ ಓಡಾಡುತ್ತವೆ. ನಿಶ್ವಲ್ಮಶ ಪ್ರೀತಿಯಷ್ಟೇ ಪ್ರಾಣಿಗಳಿಗೆ ಗೊತ್ತಾಗುವುದು.

ಈಗ ಪ್ರಾಣಿಯ ಮತ್ತೊಂದು ಪ್ರೀತಿ ಅನಾವರಣವಾಗಿದೆ. ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಕೋತಿ ನಡೆದುಕೊಂಡ ರೀತಿಗೆ ಎಲ್ಲರಿಗೂ ಕಣ್ತುಂಬಿ ಬಂದಿದೆ. ಪ್ರತಿನಿತ್ಯ ಕಾಳಜಿ ತೋರಿಸುತ್ತಿದ್ದ ತಾತನನ್ನು ಕಳೆದುಕೊಂಡ ಕೋತಿ ಕಣ್ಣೀರು ಹಾಕುತ್ತಾ ಕೂತಿದೆ.

ಹಳೆ ಹಗರಿಬೊಮ್ಮನಹಳ್ಳಿಯಲ್ಲಿ 88 ವರ್ಷದ ಪರಶುರಾಮ್ ಷಾ ಎಂಬ ವೃದ್ಧ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರೆಲ್ಲಾ ತಾತನನ್ನು ಕಳೆದುಕೊಂಡ ದುಃಖದಲ್ಲಿದ್ದರು. ಈ ವೇಳೆ ಅಲ್ಲಿಗೆ ಬಂದ ಕೋತಿ, ತಾತನ ಹಣೆಗೆ ಮುತ್ತಿಟ್ಟು, ಅಂತಿಮ ವಿದಾಯ ಹೇಳಿದೆ. ಕಳೆದ ಎರಡು ತಿಂಗಳಿನಿಂದ ಪರಶುರಾಮ್, ಈ ಕೋತಿಗೆ ಪ್ರತಿನಿತ್ಯ ಬಾಳೆ ಹಣ್ಣು ನೀಡುತ್ತಿದ್ದರು. ಹುಟ್ಟುಹಬ್ಬವಾದ ಮರುದಿನವೇ ಪರಶುರಾಮ್ ನಿಧನರಾಗಿದ್ದಾರೆ. ಅದರಲ್ಲೂ ಶ್ರೀರಾಮನವಮಿಯಂದೇ ನಿಧನರಾಗಿದ್ದರು. ಈ ಫೋಟೋ, ವಿಡಿಯೋ ವೈರಲ್ ಆಗಿದೆ. ಕೋತಿಯ ಪ್ರೀತಿ ಕಂಡು ಜನ ಕೂಡ ಭಾವುಕರಾಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...