Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಬಡತನದಿಂದ ಶಾಲೆಗೆ ಹೋಗದಿರುವುದು ಅಪರಾಧವಲ್ಲ.. ಆದರೆ ನಮ್ಮ ಪ್ರಧಾನಿ ವಿದ್ಯಾವಂತರಾಗಬೇಕಲ್ಲವೇ : ಕೇಜ್ರಿವಾಲ್ ಪ್ರಶ್ನೆ..!

---Advertisement---

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ವಿಚಾರ ಆಗಾಗ ಸುದ್ದಿಯಾಗುತ್ತಾ ಇರುತ್ತದೆ. ಇದೀಗ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ ಅವರು ಪ್ರಧಾನಿ ಮೋದಿಯವರ ಶಿಕ್ಷಣದ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ನಮ್ಮ ಪ್ರಧಾನಿಯವರು ವಿದ್ಯಾವಂತರಾಗಿರಬೇಕು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿ ಭಾನುವಾರ ಮಾತನಾಡಿದ ಕೇಜ್ರಿವಾಲ್, ನರೇಂದ್ರ‌ ಮೋದಿಯವರ ಭಾಷಣವನ್ನು ನಾನು ಕೇಳಿದ್ದೇನೆ. ಅವರು ಹಳ್ಳಿಯ ಶಾಲೆಗೆ ಹೋಗುತ್ತಿದ್ದರು ಎಂದು ಹೇಳಿದರು. ಅಲ್ಲಿ ಅವರಿಗೆ ಹೆಚ್ಚು ಓದಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರಿಗೆ ಶಿಕ್ಷಣ ಸೆಇಯಾಗಿ ಆಗಿಲ್ಲ. ಆದ್ದರಿಂದ ನಾನು ಹೇಳುವುದಕ್ಕೆ ಬಯಸುವುದೇನೆಂದರೆ ಭಾರತದಂತಹ ಮಹಾನ್ ರಾಷ್ಟ್ರದ ಪ್ರದ್ಅನಿ ಶಿಕ್ಷಣ ಪಡೆಯಬೇಕಲ್ಲವೇ..? ಭಾರತ ಬಡ ರಾಷ್ಟ್ರವಾಗಿದ್ದು, ಬಡತನದಿಂದ ಶಾಲೆಗೆ ಹೋಗದಿರುವುದು ಅಪರಾಧವೇನಲ್ಲ. ಆದರೆ ನಮ್ಮ ಪ್ರಧಾನಿ ವಿದ್ಯಾವಂತರಾಗಿರಬೇಕು ಎಂದಿದ್ದಾರೆ.

ಪ್ರಧಾನಿಯವರು ನೋಟು ಅಮಾನ್ಯೀಕರಣ ಮಾಡಿದರು. ಅದು ನಮ್ಮ ಆರ್ಥಿಕತೆಯನ್ನು 10 ವರ್ಷ ಹಿಂದಕ್ಕೆ ಕೊಂಡೋಯ್ಯಿತು. ಯಾರೋ ನಮ್ಮ ಪ್ರಧಾನಿಯನ್ನು ಮೂರ್ಖರನ್ನಾಗಿಸಿದ್ದಾರೆ. ಭ್ರಷ್ಟಾಚಾರವನ್ನು ಕೊನೆಗೊಳಿಸಲು ನೋಟುಗಳನ್ನು ಬ್ಯಾನ್ ಮಾಡಿ ಎಂದು ಪ್ರಧಾನಿಯವರಿಗೆ ಹೇಳಿದರು. ಅದರಂತೆ ನೋಟ್ ಬ್ಯಾನ್ ಮಾಡಿದರು. ಆದರೆ ಅದರಿಂದ ಭ್ರಷ್ಟಾಚಾರ ಕೊನೆಗೊಂಡಿತೇ..? ಎಂದು ಪ್ರಶ್ನಿಸಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment