Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಾರತವು ರಾಜಕೀಯ ಪ್ರಜಾಪ್ರಭುತ್ವದಲ್ಲಿ ಸೋತಿಲ್ಲ : ಕುಲಸಚಿವ ಎನ್. ಮಹೇಶ್ ಬಾಬು

Facebook
Twitter
Telegram
WhatsApp

 

 

ಬೆಂಗಳೂರು, (ನ.26): ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿನ ಬಾಬಾ ಸಾಹೇಬರ ಪುತ್ತಳಿಗೆ ವಿಶ್ವವಿದ್ಯಾಲಯದ ಆಡಳಿತ ವರ್ಗ, ಬೋಧಕ- ಬೋಧಕೇತರ ವರ್ಗ,  ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಮಾಲಾರ್ಪಣೆ ಮತ್ತು ಪುಷ್ಪನಮನ ಸಲ್ಲಿಸುವ ಮೂಲಕ ಸಂವಿಧಾನ ದಿನವನ್ನು ಇಂದಿಲ್ಲಿ ಆಚರಿಸಲಾಯಿತು.

“ಭಾರತ ಪ್ರಜಾಪ್ರಭುತ್ವದ ತಾಯಿ” ಎಂಬ ವಿಷಯದ ವಾಕ್ಯದೊಂದಿಗೆ ಸಂವಿಧಾನ ದಿನದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಎನ್. ಮಹೇಶ್ ಬಾಬುರವರು ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರವರು  ಎರಡನೇ ಮಹಾಯುದ್ಧದ ಬಳಿಕ ವಸಾಹತು ಶಾಹಿ ವ್ಯವಸ್ಥೆ ಅಳಿದು,  ನೂರಾರು ದೇಶಗಳು ಸ್ವತಂತ್ರ ಪಡೆದವು. ಇವುಗಳ ಪೈಕಿ ಹಲವು ದೇಶಗಳು ರಾಜಕೀಯ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ವಿಫಲವಾಗಿವೆ. ಭಾರತದ ನೆರೆಹೊರೆಯ ರಾಷ್ಟ್ರಗಳಾದ
ಬಾಂಗ್ಲಾದೇಶ, ಪಾಕಿಸ್ತಾನ,
ಮ್ಯಾನ್ಮಾರ್ ಇನ್ನಿತರ ದೇಶಗಳು ರಾಜಕೀಯ ಅಧಿಕಾರದಲ್ಲಿ ಸೋತ ದೇಶಗಳೆನಿಸಿವೆ ಆದರೆ, ಭಾರತ ಮಾತ್ರ ರಾಜಕೀಯ ಪ್ರಜಾಪ್ರಭುತ್ವದಲ್ಲಿ ಸೋತಿಲ್ಲ ಸೋಲುವುದು ಇಲ್ಲ. ಇದಕ್ಕೆ ಮೂಲ ಕಾರಣ ಭಾರತ ಸಂವಿಧಾನದ ಅತ್ಯಂತ ಗಟ್ಟಿಯಾದ ಚೌಕಟ್ಟೇ ಕಾರಣವಾಗಿದೆ. ಇದರ ಶ್ರೇಯ ಮಹನೀಯರಾದ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಸಲ್ಲಬೇಕು ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಎನ್. ಸಂಜೀವ್ ರಾಜ್,  ಸಿಂಡಿಕೇಟ್ ಸದಸ್ಯರಾದ ಡಾ. ಎಚ್. ಸುಧಾಕರ್, ಪ್ರಾಧ್ಯಾಪಕರಾದ ಡಾ. ಸಿ. ಶಿವರಾಜು, ಡಾ.  ಹೊನ್ನು ಸಿದ್ದಾರ್ಥ, ಡಾ.ಪಿ.ಸಿ. ಕೃಷ್ಣಸ್ವಾಮಿ, ಡಾ. ಕೆ. ಕೃಷ್ಣಮೂರ್ತಿ, ಡಾ.ಸಿ.ಡಿ.ವೆಂಕಟೇಶ್, ಡಾ.ಕೆ.ಜಿ. ಜಯರಾಮ ನಾಯ್ಕ್, ಡಾ. ಅಮರನಾಥ, ಡಾ. ಸಿ. ಸೋಮಶೇಖರ್,   ವಿಶ್ವವಿದ್ಯಾಲಯದ ಅಭಿಯಂತರರಾದ ಬಿ.ಟಿ.ಚಂದ್ರಶೇಖರ್, ವಿಶ್ವವಿದ್ಯಾಲಯ ನೌಕರರ ಸಂಘದ ಅಧ್ಯಕ್ಷ ಪಿ. ಶಿವಪ್ಪ, ವಿವಿ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಬಿ. ದಿನೇಶ್, ಇತರರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ : ಚಿತ್ರದುರ್ಗದಲ್ಲಿ ಜೆಡಿಎಸ್ ಆಗ್ರಹ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಸುದ್ದಿಒನ್ ನ್ಯೂಸ್‌, suddione, suddione news, chitradurga, ಚಿತ್ರದುರ್ಗ,ಬೆಂಗಳೂರು, bengaluru,   ಸುದ್ದಿಒನ್, ಚಿತ್ರದುರ್ಗ,ಮೇ.08 : ಪೆನ್

ನಾಳೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ..!

ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಕ್ಕೆ ಕರ್ನಾಟಕ ಪರೀಕ್ಷಾ ಮಂಡಳಿ ಡೇಟ್ ಫಿಕ್ಸ್ ಆಗಿದೆ. ನಾಳೆಯೇ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ. 8.69 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಾಳೆಯೇ ತಿಳಿಯಲಿದೆ. ಮೇ 9ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು

ಗಾಳಿ ಮಳೆಗೆ ಕರೆಂಟ್ ಹೋದ್ರೆ ಈ ನಂಬರ್ ಗೆ ವಾಟ್ಸಾಪ್ ಮಾಡಿ

ಬೆಂಗಳೂರು: ಇನ್ನು ಮಳೆಗಾಲ ಶುರುವಾಯ್ತು. ಈ ಮಳೆಗಾಲ ಬಂತು ಅಂದ್ರೆ ಸಾಕು ಎಲ್ಲೆಡೆ ಮರಗಿಡಗಳು ಬೀಳುತ್ತವೆ, ಪವರ್ ಕಟ್ ಸಮಸ್ಯೆಗಳು ಕೂಡ ಕಾಡುತ್ತವೆ. ಈ ವೇಳೆ ಬೆಸ್ಕಾಂನವರು ಜನರ ಕೈಗೆ ಸಿಗುವುದು ಕಷ್ಟವಾಗಿದೆ. ಆದರೆ

error: Content is protected !!