ಚಿತ್ರದುರ್ಗ,(ನ.16): ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಆಯೋಜಿಸಿರುವ 41 ದಿನಗಳ ಪಡಿಪೂಜಾ ಕಾರ್ಯಕ್ರಮ ಹಾಗು ಅಯ್ಯಪ್ಪ ಮಾಲಾಧಾರಿಗಳಿಗೆ ನಿತ್ಯ ಪ್ರಸಾದ ದಾಸೂಹಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಜಿ. ರಘು ಆಚಾರ್ ಬುಧವಾರ ಚಾಲನೆ ನೀಡಿದರು.
ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನವೆಂಬರ್ 16ರಿಂದ ವಿಶೇಶ ಪೂಜೆ ನಡೆಯಲಿದ್ದು, ಆರಂಭದ ಸಿನವಾದ ಬುಧವಾರ ಗಣ ಹೋಮ ಮತ್ತು ಚಂಡಿಕಾ ಹೋಮ ನೆರವೇರಿಸಲಾಗಿದ್ದು, ಹೋಮ ಹವನ ಕಾರ್ಯದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದ ಬಳಿಕ ಪೂರ್ಣಾಹುತಿ ಸಮರ್ಪಿಸಿ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಆರತಿ ಬೆಳಗುವ ಮೂಲಕ ನಿತ್ಯ ದಾಸೂಹಕ್ಕೆ ಚಾಲನೆ ನೀಡಿ ಪ್ರಸಾದ ಸ್ವೀಕರಿಸಿದರು.
ಸತೀಶ್ ಶರ್ಮ ತಂಡದವರು ಗಣ ಹೋಮ ಚಂಡಿಕಾ ಹೋಮ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶರಣ್ ಕುಮಾರ್, ಶಬರಿ ಮಲೆ ಸೇವಾ ಸಮಾಜಂ ರಾಜ್ಯಾಧ್ಯಕ್ಷ ಜಯರಾಮ ರಾಮ್, ಹೀರೋ ಶೋ ರೂಂ ಮಾಲಿಕ ಮಲ್ಲಿಕಾರ್ಜುನ ಸ್ವಾಮಿ, ಟ್ರಸ್ಟ್ ಕಾರ್ಯದರ್ಶಿ ವೆಂಕಟೇಶ್, ಉಪಾಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ವೀರಶೈವ ಮುಖಂಡ ಮಹಡಿ ಶಿವಮೂರ್ತಿ, ಬೆಟ್ಟದ ಮಲ್ಲಪ್ಪ, ಚಂದ್ರಶೇಖರ್ ರೇಷ್ಮೆ ಮಂಜುನಾಥ್, ಸೂರಪ್ಪ, ತಮ್ಮಣ್ಣ ಇನ್ನಿತರರು ಹಾಜರಿದ್ದರು.