Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆಧುನಿಕ ತಂತ್ರಜ್ಞಾನದಲ್ಲಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ : ಬಿ.ರಾಜಶೇಖರಪ್ಪ

Facebook
Twitter
Telegram
WhatsApp

ವರದಿ ಮತ್ತು ಫೋಟೋ
    ಸುರೇಶ್ ಪಟ್ಟಣ್,  ಮೊ : 87220 22817

ಚಿತ್ರದುರ್ಗ,(ನ.06) : ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಕವನವನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದರೊಂದಿಗೆ ಕಾವ್ಯದ ಸತ್ವ ಮತ್ತು ಸೂರ್ತಿ ಕಡಿಮೆಯಾಗುತ್ತಿದೆ ಎಂದು ಅನಿಸುತ್ತಿದೆ ಎಂದು ಹಿರಿಯ ಸಂಶೋಧಕರಾದ ಬಿ.ರಾಜಶೇಖರಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದ ಐಶ್ವರ್ಯ ಫೋರ್ಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕಿ ಗೀತಾ ಭರಮಸಾಗರ ಇವರ ಬಯಲು ಹೂವು ಕವನ ಸಂಕಲನದ ಕಾರ್ಯಕ್ರಮ ಉದ್ಘಾಟಿಸಿ, ಕವನ ಸಂಕಲವನ್ನು ಬಿಡುಗಡೆ ಮಾಡಿ ಮಾತನಾಡಿ, ಇತ್ತೀಚಿನ ದಿನಮಾನದಲ್ಲಿ ಪ್ರಕಾಶಕರು ಕವನ ಸಂಕಲಗಳನ್ನು ಪ್ರಕಟ ಮಾಡುವುದನ್ನು ಬಿಟ್ಟಿದ್ದಾರೆ. ಕೇಳಿದರೆ ಅದನ್ನು ಯಾರೂ ಓದುವುದಿಲ್ಲ ಸಾರ್ ಎನ್ನುತ್ತಾರೆ ಆದರೆ ನೇರಿಶಾ ಪ್ರಕಾಶನದವರು ಇವರ ಕಾವ್ಯ ಸಂಕಲವನ್ನು ಪ್ರಕಟ ಮಾಡಿದ್ದು ಧೈರ್ಯವೇ ಸರಿ ಎಂದರು.

20ನೇ ಶತಮಾನದಲ್ಲಿ ಉತ್ತಮವಾದ ಸಾಹಿತ್ಯ ಪ್ರಕಟವಾಗುತ್ತಿತು. ನವ್ಯ ಕಾವ್ಯ ಜಾರಿಯಲ್ಲಿದ್ದವು, ನಂತರ ದಲಿತ ಬಂಡಾಯ ಸಾಹಿತ್ಯ ಬಂದವು. ಈಗ ಅವುಗಳು ಸಹಾ ಅಂಚಿನಲ್ಲಿದೆ. ಸಾಹಿತ್ಯ ನಿಲ್ಲುವುದಿಲ್ಲ, ನಡೆದುಕೊಂಡು ಹೋಗುತ್ತದೆ. ಕಾವ್ಯದ ಜಗತ್ತ ಸೂಕ್ಷ್ಮವಾದದು, ಗೀತಾರವರು ಬರೆದ ಎಲ್ಲಾ ಕಾವ್ಯಗಳು ಸಹಾ ಉತ್ತಮೌಆಗಿದೆ ಎನ್ನಲು ಸಾಧ್ಯವಿಲ್ಲ ಅದರಲ್ಲಿ ಕೆಲವು ಮಾತ್ರ ಉತ್ತಮವಾಗಿದೆ. ಇವುಗಳು ಓದುಗರನ್ನು ಮೆಚ್ಚಿಸಿದರೆ ಮಾತ್ರ ಉತ್ತಮವಾದ ಕಾವ್ಯಗಳಾಗಲು ಸಾಧ್ಯವಿದೆ. ಕವಿ ತನ್ನ ಅನುಭವವನ್ನು ಕಾವ್ಯದ ರೂಪದಲ್ಲಿ ಇಡುತ್ತಾನೆ. ಕವನ ಓದುವವರ ಮನಸ್ಸಿನಲ್ಲಿ ಉತ್ತಮವಾದ ಪ್ರತಿಕ್ರಿಯೆ ಉಂಟಗಾಬೇಕಿದೆ ಆಗ ಮಾತ್ರ ಕವನ ಬರೆದಿದ್ದು ಸಾರ್ಥಕವಾಗುತ್ತದೆ ಎಂದು ರಾಜಶೇಖರಪ್ಪ ತಿಳಿಸಿದರು.

ಕೃತಿಯನ್ನು ಕುರಿತು ಮಾತನಾಡಿದ ಕನ್ನಡ ಸಹ ಪ್ರಾಧ್ಯಾಪಕಿ ಡಾ.ಭಾರತಿದೇವಿ ಈ ದಿನ ಮಹಿಳೆಯರು ¸ಶಕ್ತಿಯಾಗಿ ಬೆಳೆಯುತ್ತಿದ್ದಾರೆ ಎಲ್ಲಾ ರೀತಿಯ ಕಾರ್ಯಗಳಲ್ಲಿಯೂ ಸಹಾ ಮುಂದೆ ಇದ್ದಾರೆ. ವ್ಯಯುತ್ತಿಕ ಮತ್ತು ಒತ್ತಡದಲ್ಲಿ ಮಹಿಳೆ ಬರೆಯುತ್ತಿದ್ದಾಳೆ. ಇಲ್ಲಿನ ಕವಿತೆಗಳು ಎಲ್ಲವನ್ನು ಸಹಾ ಒಳಗೂಂಡಿದೆ. ಹೆಣ್ಣಿನ ಶೋಷಣೆಗೆ ಒಳಪಡಿಸುವ ರೀತಿಯಲ್ಲಿ ಕವನ ವ್ಯಕ್ತವಾಗಿದೆ. ತಮ್ಮ ಸಂತೋಷ, ನೋವು ದುಃಖವನ್ನು ಈ ಕಾವ್ಯಗಳಲ್ಲಿ ತಿಳಿಸಿದ್ದಾರೆ. ಕವಿತೆಗಳಲ್ಲಿ ನವಿರಾಧ ಭಾವ ಸಂಬಂಧಗಳನ್ನು ಹುಟ್ಟಿಸುವ ಸಂತೋಷ ಕಂಡು ಬರುತ್ತದೆ ಎಂದರು.

ಸಮಾಜದ ಸೂಕ್ಷ್ಮವನ್ನು ಗಮನಿಸಿ ಅದನ್ನು ಕಾವ್ಯ ರೂಪದಲ್ಲಿ ಹೂರ ತಂದಿದ್ದಾರೆ. ಇದರಲ್ಲಿ ತಮ್ಮ ನೋವನ್ನು ಸಹಾ ಬಿಚ್ಚಿಟ್ಟಿದ್ದಾರೆ. ಕವನಗಳಲ್ಲಿ ತಾಯ್ತತನವನ್ನು ಪ್ರದರ್ಶನ ಮಾಡಿದ್ದಾರೆ. ಪ್ರೀತಿ, ಕರುಣೆ, ತ್ಯಾಗ, ರೈತ, ಕ್ಷಟದ ಪರಿಸ್ಥಿತಿ, ಆಗಲಿದ ವ್ಯಕ್ತಿಯ ಬಗ್ಗೆಯೂ ಸಹಾ ಉತ್ತಮವಾದ ಅಕ್ಷರದ ಪದಗಳಲ್ಲಿ ಬರೆದಿದ್ದಾರೆ ಎಂದು ಭಾರತಿ ತಿಳಿಸಿದರು.

ನಗರ ಠಾಣೆಯ ಇನ್ಸ್‍ಪೆಕ್ಟರ್ ತಿಪ್ಪೇಸ್ವಾಮಿ ಮಾತನಾಡಿ,ಇಂದಿನ ದಿನದಲ್ಲಿ ಕೃತಿಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಲ್ಲವನ್ನು ಸಹಾ ತಂತ್ರಜ್ಞಾನದಲ್ಲಿ ನೋಡಲಾಗುತ್ತಿದೆ. ಇದಲ್ಲದೆ ಕೃತಿಗಳನ್ನು ಬರೆಯುವವರ ಸಂಖ್ಯೆಯೂ ಸಹಾ ಕಡಿಮೆಯಾಗುತ್ತಿದೆ. ಸಾಹಿತ್ಯಸಾಕ್ತರು ಒಂದೇಡೆ ಸೇರಿ  ಒಮದು ವೇದಿಕೆಯನ್ನು ರಚನೆ ಮಾಡಿಕೊಂಡು ಉತ್ತಮವಾದ ಸಾಹಿತ್ಯ ಹೂರ ಬರಲು ಸಹಾಯವಾಗಬೇಕಿದೆ ಎಂದರು.

ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಶಿವಸ್ವಾಮಿ ಕೆ.ಎಂ. ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಾರುತೇಶ್ ಆರ್., ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಸಂಪತ್ ಕುಮಾರ್, ಬಿ.ಐ.ಇ.ಆರ್.ಟಿ ಹನುಮಂತಪ್ಪ, ರಾಜಾನಾಯ್ಕ್, ಲೇಖಕಿ ಗೀತಾ ಭರಮಸಾಗರ ಭಾಗವಹಿಸಿದ್ದರು.
ನೇರಿಶಾ ಪ್ರಕಾಶನದ ಸಂಚಾಲಕರಾದ ನಂರಶಿ ಕಡೂರು ಸ್ವಾಗತಿಸಿದರೆ, ಗೌರವ ಸಂಚಾಲಕರಾದ ಡಾ.ಬಿ.ಎಂ.ಗುರುನಾಥ್ ಪ್ರಸ್ತಾವಿಕವಾಗಿ ಮಾತನಾಡಿದರು ಕೆ.ಎಂ.ಪಿ.ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಮೇ 1ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ. ಏ.30: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ ಪಂಡರಹಳ್ಳಿ ಲೈನ್‍ನ ಟ್ಯಾಪಿಂಗ್ ಪಾಯಿಂಟ್‍ನಿಂದ ಪಂಡರಹಳ್ಳಿ 66/11 ಕೆವಿ ವಿ.ವಿ ಕೇಂದ್ರದವರೆಗೆ ಡ್ರೇಕ್ ಕಂಡಕ್ಟರ್ ಬಳಸಿ ಉದ್ದೇಶಿತ 66 ಕೆವಿ ಲೈನ್ ಮತ್ತು ಕೊಯೊಟ್ ಕಂಡಕ್ಟರ್ ಬಳಸಿ

ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು : ಕೋರ್ ಕಮಿಟಿಯಲ್ಲಿ ತೀರ್ಮಾನ

ಹುಬ್ಬಳ್ಳಿ: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಜಿ.ಟಿ ದೇವೇಗೌಡರ ನೇತೃತ್ವದ ಕೋರ್ ಕಮಿಟಿಯಲ್ಲಿ ಈ ಸಂಬಂಧ ನಿರ್ಧಾರವಾಗಿದ್ದು, ಅಮಾನತು ಮಾಡಲಾಗಿದೆ. ಈ ಸಂಬಂಧ

ಬಿಜೆಪಿ ನಾಯಕನಿಗೆ ಮಾತ್ರ ಪೆನ್ ಡ್ರೈವ್ ಕೊಟ್ಟಿದ್ದೆ : ಶಾಕಿಂಗ್ ವಿಡಿಯೋ ಬಿಟ್ಟ ಡ್ರೈವರ್ ಕಾರ್ತಿಕ್

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನೇ ದಿನೇ ಹಲವು ವಿಚಾರಗಳು ಹೊರಗೆ ಬರುತ್ತಿವೆ. ನಿನ್ನೆಯಷ್ಟೇ ವಕೀಲ, ಬಿಜೆಪಿ ನಾಯಕ ದೇವರಾಜೇಗೌಡ, ಪೆನ್ ಡ್ರೈವ್ ವಿಚಾರವಾಗಿ ಮಾತನಾಡಿ, ಕಾರ್ತಿಕ್ ಬಳಿ ಪೆನ್ ಡ್ರೈವ್

error: Content is protected !!