ಕಳೆದ ತಿಂಗಳು ಸೆಪ್ಟೆಂಬರ್ 28ರಂದು ಟ್ರಾಯರ್ಸ್ ಉದ್ಯಾನವನ ಎಂದಿದ್ದ ಪಾರ್ಕ್ ಗೆ ಭಗವದ್ಗೀತೆ ಪಾರ್ಕ್ ಎಂದು ನಾಮಕರಣ ಮಾಡಲಾಗಿತ್ತು. ಇದೀಗ ಆ ಪಾರ್ಕ್ ಅನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಭಗವದ್ಗೀತಾ ಪಾರ್ಕ್ ಕೆನಡಾದ ಬ್ರಾಂಪ್ಟನ್ ನಗರದಲ್ಲಿ ಇತ್ತು. ಇದನ್ನು ಧ್ವಂಸಗೊಳಿಸಿರುವುದನ್ನು ಭಾರತ ಖಂಡಿಸಿದೆ. ಇದೊಂದು ದ್ವೇಷದ ಅಪರಾಧವೆಂದು ಹೇಳಿದೆ. ಭಗವದ್ಗೀತಾ ಪಾರ್ಕ್ ಎಂದು ನಾಮಕರಣ ಮಾಡಿದ ಬಳಿಕ ಈ ರೀತಿ ಮಾಡಿರುವುದು ಎಲ್ಲರ ಬೇಸರಕ್ಕೂ ಕಾರಣವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ಹೈಕಮಿಷನ್, ಶ್ರೀ ಭಗವದ್ಗೀತಾ ಪಾರ್ಕ್ ನಲ್ಲಿ ನಡೆದಿರುವ ಈ ಘಟನೆಯನ್ನು ಖಂಡಿಸುತ್ತೇವೆ. ಈ ಬಗ್ಗೆ ಕೆನಡಾ ತನಿಖಾಧಿಕಾರಿಗಳು ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಭಗವದ್ಗೀತಾ ಪಾರ್ಕ್ ನಲ್ಲಿ ನಡೆದ ಘಟನೆಯನ್ನು ಬ್ರಾಂಪ್ಟನ್ ಮೇಯರ್ ಪೆಟ್ರಿಕ್ ಕೂಡ ಖಂಡಿಸಿದ್ದು, ಈ ರೀತಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.