ಬೆಂಗಳೂರು: ಕಳೆದ ಕೆಲವು ತಿಂಗಳಿನಿಂದ ಮತಾಂತರ ನಿಷೇಧ ಕಾಯ್ದೆ ವಿಚಾರ ಬಾರೀ ಚರ್ಚೆಯಲ್ಲಿತ್ತು. ಇದೀಗ ಇಂದಿನಿಂದ ಕಾನೂನು ಅಧಿಕೃತವಾಗಿ ಜಾರಿಯಲ್ಲಿರಲಿದೆ. ಕಾರಣ ಇಂದು ರಾಜ್ಯಪಾಲ ಗೆಹ್ಲೋಟ್ ಮತಾಂತರ ನೊಷೇಧ ಕಾಯ್ದೆಗೆ ಅಂಕಿತ ಹಾಕಿದ್ದಾರೆ.
ಮತಾಂತರ ನಿಷೇಧ ಕಾಯ್ದೆಯನ್ನು ವಿಧಾನಸಭೆ ಅಂಗೀಕರಿಸಿತ್ತು. ವಿಧಾನಪರಿಷತ್ ನಲ್ಲಿ ಅಂಗೀಕಾರ ಸಿಗದೆ ಇದ್ದ ಕಾರಣ ರಾಜ್ಯ ಸರ್ಕಾರ ಮತಾಂತರ ನಿಷೇಧ ಜಾರಿಗೆ ಸುಗ್ರಿವಾಜ್ಞೆ ಹೊರಡಿಸಿತ್ತು. ಇದೀಗ ರಾಜ್ಯಪಾಲರಿಂದ ಅಂಕಿತ ಮುದ್ರೆ ಸಿಕ್ಕಿದ್ದು, ಕಾನೂನು ಇಂದಿನಿಂದ ಜಾರಿಯಾಗಲಿದೆ.
ಮತಾಂತರ ನಿಷೇಧ ಕಾನೂನು ಜಾರಿಗೆ ತಂದ 9ನೇ ರಾಜ್ಯ ಕರ್ನಾಟಕದ್ದಾಗಿದೆ. ಈ ಕಾನೂನು ವಂಚನೆ, ಅನಗತ್ಯ ಪ್ರಭಾವ, ಬಲತ್ಕಾರ, ಆಮಿಷ ಒಡ್ಡಿ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಗೊಳಿಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಮತಾಂತರಗೊಳಿಸಿದರೆ 25 ಸಾವಿರ ದಂಡ, 3-5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇನ್ನು ಅಪ್ರಾಪ್ತೆ ಅಥವಾ ಎಸ್ಎಸ್ಟಿ ಸಮುದಾಯದವರನ್ನು ಮತಾಂತರಿಸಿದರೆ 50 ಸಾವಿರ ರೂಪಾಯಿ ದಂಡದೊಂದಿಗೆ 3-10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಸಾಮೂಹಿಕ ಪರಿವರ್ತನೆಗೆ 3-10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೂ ದಂಡ ವಿಧಿಸಲಾಗುವುದು ಎಂಬ ನಿಯಮ ಜಾರಿ ಮಾಡಲಾಗಿದೆ.