ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುವಂತ ಘಟನೆ ನಡೆಯುತ್ತಿದೆ. ನಾವೂ ನಿರಂತರವಾಗಿಯೇ ಹೇಳುತ್ತಾ ಇದ್ದೇವೆ. ನಮ್ಮ ರಾಷ್ಟ್ರ ಕವಿ ಕುವೆಂಪು ಅವರು ನಾಡಗೀತೆಯಲ್ಲಿ ರಚನೆ ಮಾಡಿರುವಂತ ಪ್ರಮುಖವಾದಂತ ಸಂದೇಶ ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವಂತ ಕೆಲಸ ರಾಷ್ಟ್ರೀಯ ಪಕ್ಷಗಳಿಂದ ಆರಂಭವಾಗಿದರೆ.
ಅದಕ್ಕೋಸ್ಕರ ನಾಡಿನ ಜನತೆಗೆ ಹೇಳ್ತಾ ಇದ್ದೇವೆ. ನಾಡಿನ ಜನತೆಗೆ ಹೇಳುತ್ತಿದ್ದೇನೆ. ಶಾಶ್ಚತವಾಗಿ ಶಾಂತಿ ನೆಲೆಸಬೇಕೆಂದರೆ ಎರಡು ರಾಷ್ಟ್ರೀಯ ಪಕ್ಷಗಳನ್ನು ಸಂಪೂರ್ಣವಾಗಿ ಜನ ತಿರಸ್ಕಾರ ಮಾಡಿದರೆ, ಇದೊಂದು ಸರ್ವಜನಾಂಗದ ಶಾಂತಿಯ ತೋಟ ನೆಮ್ಮದಿಯ ಬದುಕನ್ನು ಕಾಣಲು ಸಾಧ್ಯವಿದೆ. ಇದನ್ನೇ ನಾವೂ ಜನತೆ ಮುಂದೆ ಹೇಳುತ್ತಿರುವುದು. ಈ ಎರಡು ರಾಷ್ಟ್ರೀಯ ಪಕ್ಷಗಳು ಕೆಲವು ಮತ ಬ್ಯಾಂಕ್ ಗಾಗಿ ಅವರ ಸಣ್ಣತನದ ರಾಜಕಾರಣವನ್ನು ಜನತೆಯೇ ಧಿಕ್ಕರಿಸಬೇಕು. ನಮ್ಮ ಪಕ್ಷಕ್ಕೆ ಇರುವುದು ನಮ್ಮ ರಾಜ್ಯದ ಅಭಿವೃದ್ಧಿ, ನಮ್ಮ ನಾಡಿನ ನದಿಯ ನೀರನ್ನು ನಾವೂ ಪಡೆಯಬೇಕು. ಪಂಚರತ್ನ ಯೋಜನೆಗಳ ಮೂಲಕ ಶಿಕ್ಷಣ, ಆರೋಗ್ಯ, ರೈತನ ಬದುಕು, ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ, ಮಹಿಳೆಯರ ಸಬಲೀಕರಣ, ವಸತಿ ಯೋಜನೆ ಮೂಲಕ ಹೊಸ ಸರ್ಕಾರ ತರಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ.
ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕರ ಬೇರೆ ನಡೀತಾ ಇದೆ. ಎರಡು ದಿನ ಕಾರ್ಯಕಾರಿಣಿ ಸಭೆ ನಡೆಸಿದ್ದಾರೆ. ಅವರಿಗೆ 115 ಸೀಟು ಗೆಲ್ಲುವ ಚರ್ಚೆಯಷ್ಟೆ. ಇನ್ನು ಕಾಂಗ್ರೆಸ್ ನವರಿಗೆ ಯಾರನ್ನಾದರೂ ಜೈಲಿಗೆ ಕಳುಹಿಸುವ ಚಿಂತೆ. ನಾಡಿನ ಜನತೆ ಬಗ್ಗೆ ಇಬ್ಬರಿಗೂ ಚಿಂತೆ ಇಲ್ಲ. ಹೀಗಾಗಿ ಆ ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಯನ್ನು ಈ ನಾಡಿನ ಜನತೆ ಗಮನಿಸಬೇಕು. ನಾಡಿಗಾಗಿ ಶ್ರಮಿಸುವ ಪಕ್ಷವನ್ನು ಈ ಜನತೆ ಅಧಿಕಾರಕ್ಕೆ ತರಬೇಕು ಎಂದಿದ್ದಾರೆ.