ಬೆಂಗಳೂರು: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೆಲಸ ಮತ್ತು ಅವರ ಹೆಸರು ದೇಶದ ಉದ್ದಗಲಕ್ಕೂ ನಮಗೆ ಜಯ ತಂದುಕೊಟ್ಟಿದೆ.
ಸಿದ್ದರಾಮಯ್ಯ ಅವರಿಗೆ ಪ್ರಾಮಾಣಿಕತೆ ಇದ್ದರೆ ಹಿಜಾಬ್ ಸಂಘರ್ಷಕ್ಕೆ ಕಾನೂನಿನ ನೆಲೆ ಒದಗಿಸಿದವರು ಯಾರು. ಎಲ್ಲಾ ವಕೀಲರು ಕಾಂಗ್ರೆಸ್ ನ ಬೆಂಬಲಿತರೆ ಆಗಿದ್ದರು. ಅವರ ನಿಲುವು ಯಾವ ಕಡೆಗೆ ಹಿಜಾಬ್ ಪರವಾ..? ಸಮವಸ್ತ್ರದ ಪರವಾ..? ನಮ್ಮ ನಿಲುವಂತು ಸಮವಸ್ತ್ರದ ಕಡೆಗೆ. ಹೈಕೋರ್ಟ್ ತೀರ್ಪು ಸ್ವಾಗತಿಸುವ ಕಡೆಗೆ ನಮ್ಮ ನಿಲುವು ಇತಚತು. ಆದ್ರೆ ಕಾಂಗ್ರೆಸ್ ನಿಲುವು ಏನಿತ್ತು ಅನ್ನೋದನ್ನ ಸ್ಪಷ್ಟಪೆಇಸಲಿ. ಮತಾಂಧತೆ ಆವರಿಸಿಕೊಂಡಿರುವುದು ಮತ ಬ್ಯಾಂಕ್ ನ ರಾಜಕಾರಣಕ್ಕಾಗಿ ಈ ಸಮಾಜವನ್ನು ಒಡೆಯಲು ಹೊರಟ ಕಾಂಗ್ರೆಸ್, ಶಾದಿ ಭಾಗ್ಯದಂತ ಯೋಜನೆಯನ್ನ ಮೋದಿಯವರು ಕೊಡಲಿಲ್ಲ, ಯಡಿಯೂರಪ್ಪ ಅವರು ಕೊಡಲಿಲ್ಲ, ಬಸವರಾಜ್ ಬೊಮ್ಮಾಯಿ ಅವರು ಕೊಡಲಿಲ್ಲ. ಅದನ್ನಹ ಕೊಟ್ಟ ಕುಖ್ಯಾತಿ ಸಿದ್ದರಾಮಯ್ಯ ಅವರಿಗೆ ಮಾತ್ರ.
ಧ್ವನಿವರ್ಧಕ ಎಷ್ಟು ಇರಬೇಕು ಅನ್ನೋದನ್ನು ಈಗಾಗಲೇ ಪರಿಸರ ಇಲಾಖೆ ಸ್ಪಷ್ಟಪಡಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಸ್ಪಷ್ಟಪಡಿಸಿದ್ದಲ್ಲ. ಬಹಳ ಹಿಂದೆಯೇ ಸ್ಪಷ್ಟಪಡಿಸಿದೆ. ಇದಕ್ಕೆ ಸಂಬಂಧ ಪಟ್ಟಂತೆ ನ್ಯಾಯಾಲಯದಿಂದ ಹಕವು ತೀರ್ಪುಗಳು ಬಂದಿದೆ. ಎಷ್ಟು ಗಂಟೆಯಿಂದ ಎಷ್ಟು ಗಂಟೆವರೆಗೂ ಹಾಕಬೇಕು, ವಿಶೇಷ ಸಂದರ್ಭ ಹೊರತುಪಡಿಸಿ ನ್ಯಾಯಾಲಯದ ತೀರ್ಪು ಬಂದಿದೆ. ನಮ್ಮ ಪಕ್ಷ ಇರೋದು ಯಾವಾಗಲೂ ನ್ಯಾಯಾಲಯದ ತೀರ್ಪಿನ ಪರ ಇದ್ದೇವೆ. ಈಗ ಅವರು ಸ್ಪಷ್ಟಪಡಿಸಲಿ ಅವರು ನ್ಯಾಯಾಲಯದ ಪರ ಇದ್ದಾರಾ ಇಲ್ಲ ವಿರುದ್ಧವಾ ಎಂಬುದನ್ನು.
ಮಾವೂ ಖರೀದಿ ಮಾಡಬಾರದು ಎಂಬ ಬಗ್ಗೆ ಮಾತನಾಡಿದ ಸಿಟಿ ರವಿ, ಅಂತ ವಿಚಾರವನ್ನು ನಮ್ಮ ಪಕ್ಷ ಸಮರ್ಥಿಸುವುದಿಲ್ಲ. ಕನ್ನಡ ಮಾತಾಡಿದ ಎಂಬ ಕಾರಣಕ್ಕೆ ಚಂದ್ರು ಹತ್ಯೆಯಾಗಿದೆ. ಯಾವ ದೇಶದಲ್ಲಿದ್ದೀವಿ ನಾವೂ ಇದನ್ನು ಖಂಡಿಸುತ್ತೇನೆ. ಇದರ ಹಿಂದೆ ಪ್ರಚೋದನಕಾರಿಯಾದ ಅಂಶವಾಗಿದೆ. ಸತ್ತವನು ಹಿಂದೂ ಆದರೆ ಸಿದ್ದರಾಮಯ್ಯ ಅವರಿಗೆ ಸಂತಾಪ ಸೂಚಿಸಲು ಆಗುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.